ETV Bharat / bharat

ಗ್ಯಾಂಗ್​​ಸ್ಟರ್​​ ದುಬೆ ಬಳಿ ₹500 ಕೋಟಿ ಆಸ್ತಿ: ಇದು ಶುದ್ಧ ಸುಳ್ಳು ಅಂದವರು ಯಾರು? - ವಿಕಾಸ್ ದುಬೆ ₹ 500 ಕೋಟಿ ಮೌಲ್ಯದ ಆಸ್ತಿಯ ಒಡೆಯ ಎಂಬುದು ಶುದ್ಧ ಸುಳ್ಳು

ಪೊಲೀಸ್ ಎನ್​​​​​​ಕೌಂಟರ್ ನಲ್ಲಿ ಹತ್ಯೆಯಾದ ಗ್ಯಾಂಗ್​​ಸ್ಟರ್​​​ ವಿಕಾಸ್ ದುಬೆ ₹ 500 ಕೋಟಿ ಮೌಲ್ಯದ ಆಸ್ತಿಯ ಒಡೆಯ ಎಂಬುದು ಶುದ್ಧ ಸುಳ್ಳು ಎಂದು ಆತನ ಪತ್ನಿ ರಿಚಾ ದುಬೆ ಪ್ರತಿಕ್ರಿಯಿಸಿದ್ದಾರೆ.

ಪತ್ನಿ ರಿಚಾ ದುಬೆ 
ಪತ್ನಿ ರಿಚಾ ದುಬೆ 
author img

By

Published : Jul 24, 2020, 12:45 PM IST

ಲಖನೌ: ಪೊಲೀಸ್ ಎನ್​​​ಕೌಂಟರ್ ನಲ್ಲಿ ಹತ್ಯೆಯಾದ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ₹ 500 ಕೋಟಿ ಮೌಲ್ಯದ ಆಸ್ತಿಯ ಒಡೆಯ ಎಂಬುದು ಶುದ್ಧ ಸುಳ್ಳು ಎಂದು ಆತನ ಪತ್ನಿ ರಿಚಾ ದುಬೆ ಪ್ರತಿಕ್ರಿಯಿಸಿದ್ದಾರೆ.

ದುಬೆ ಬಳಿ ಅಷ್ಟೊಂದು ಆಸ್ತಿ ಇದ್ದಿದ್ದರೆ ನಾವೇಕೆ ಲಖನೌದಲ್ಲಿ ಪುಟ್ಟ ಮನೆಯಲ್ಲಿ ವಾಸ ಮಾಡುತ್ತಿದ್ದೆವು? ಎಂದು ಗುರುವಾರ ಸಂದರ್ಶನವೊಂದರಲ್ಲಿ ಪ್ರಶ್ನಿಸಿದ್ದಾರೆ.

ದುಬೆಗೆ ಅಪರಾಧ ಜಗತ್ತಿನಿಂದ ಹೊರಬರುವಂತೆ ಹಲವಾರು ಬಾರಿ ತಿಳಿ ಹೇಳಿದ್ದೆ. ಆದರೆ, ಆತ ನನ್ನ ಮಾತು ಕೇಳಲಿಲ್ಲ. ಅಪರಾಧ ಜಗತ್ತಿನಿಂದ ಹೊರ ಬರಲು ಆತ ಒಪ್ಪಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದುಬೆ ನನಗೆ ಒಳ್ಳೆಯ ಪತಿ ಹಾಗೂ ಮಕ್ಕಳಿಗೆ ಉತ್ತಮ ತಂದೆಯಾಗಿದ್ದ. ಮಕ್ಕಳು ಸುಶಿಕ್ಷಿತರಾಗಬೇಕು ಎಂದು ಬಯಸಿದ್ದ. ಆದರೂ ಅಪರಾಧದಿಂದ ಮುಕ್ತನಾಗಲು ಸಾಧ್ಯವಾಗಲಿಲ್ಲ ಎಂದು ಸ್ಮರಿಸಿದರು.

ಪೊಲೀಸರನ್ನು ಕೊಲ್ಲುವ ಯೋಜನೆ ಬಗ್ಗೆ ನನಗೆ ಆತ ಮೊದಲೆ ಹೇಳಿದ್ದರೆ, ಅದನ್ನು ತಡೆಯುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೆ. ನಾನು ವಿಧವೆಯಾಗುವೆ ಎಂದೂ ಚಿಂತಿಸುತ್ತಿರಲಿಲ್ಲ ಎಂದಿರುವ ಅವರು ಮೃತ ಪೊಲೀಸರ ಪತ್ನಿಯರ ಕ್ಷಮೆ ಯಾಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.