ETV Bharat / bharat

ಲಾಕ್​ಡೌನ್​ಗೆ ಯುಪಿಎಸ್​ಸಿ ಪೂರ್ವಭಾವಿ ಪರೀಕ್ಷೆ ಮುಂದೂಡಿಕೆ

upsc
ಯುಪಿಎಸ್​ಸಿ
author img

By

Published : May 4, 2020, 4:34 PM IST

Updated : May 4, 2020, 5:46 PM IST

16:25 May 04

ಯುಪಿಎಸ್​ಸಿ ಪೂರ್ವಭಾವಿ ಪರೀಕ್ಷೆ ಮುಂದೂಡಿಕೆ

ನವದೆಹಲಿ: ಮೇ 31ಕ್ಕೆ ನಡೆಯಬೇಕಿದ್ದ ನಾಗರಿಕ ಸೇವಾ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಲು ಕೇಂದ್ರ ಲೋಕಸೇವಾ ಆಯೋಗ ತೀರ್ಮಾನಿಸಿದೆ. ಲಾಕ್​ಡೌನ್ ವಿಸ್ತರಣೆ​ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಆಧರಿಸಿ ಮೇ 20ಕ್ಕೆ ಹೊಸ ಪರೀಕ್ಷಾ ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ ಎಂದು ಕೇಂದ್ರ ಲೋಕಸೇವಾ ಆಯೋಗ ಸ್ಪಷ್ಟನೆ ನೀಡಿದೆ.

ಈ ಪರೀಕ್ಷೆಯನ್ನು ಸುಮಾರು 9 ಲಕ್ಷ ಮಂದಿ ಬರೆಯುವ ಕಾರಣದಿಂದಾಗಿ ರಾಷ್ಟ್ರಾದ್ಯಂತ ಪರೀಕ್ಷೆನ ನಡೆಸುವುದು ಕಷ್ಟ. ಲಾಕ್​ಡೌನ್​ ಮೂರನೇ ಬಾರಿಗೆ ವಿಸ್ತರಣೆಯಾಗಿರುವ ಕಾರಣದಿಂದ ಪರೀಕ್ಷೆ ನಡೆಸುವುದು ಕಷ್ಟವಾಗಲಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಆಧರಿಸಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಆಯೋಗ ತಿಳಿಸಿದೆ. 

ಈಗಾಗಲೇ ಐಎಫ್​ಎಸ್​ನ ಸ್ಕ್ರೀನಿಂಗ್​ ಪರೀಕ್ಷೆಯನ್ನು ಕೂಡಾ ಮುಂದೂಡಲಾಗಿದೆ. ಯುಪಿಎಸ್​ಸಿ ಹಾಗೂ ಎಸ್​​ಎಸ್​ಸಿ ಪರೀಕ್ಷೆಗಳು ನಡೆಯಲಿವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್​ ಭರವಸೆ ನೀಡಿದ್ದಾರೆ.

Last Updated : May 4, 2020, 5:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.