ತಮಿಳುನಾಡು: ಮುಂದಿನ ದಿನಗಳಲ್ಲಿ ನಾವು ಮನೆಮನೆಗಳಲ್ಲೂ ಕಚೇರಿಗಳಲ್ಲೂ ಸೇರಿದಂತೆ ಪ್ರತಿಯೊಂದು ಕೆಲಸಗಳಿಗೂ ರೋಬೋಟ್‌ಗಳನ್ನೇ ಬಳಸುವ ದಿನಗಳು ದೂರವೇನಿಲ್ಲ. ಯಾಕಂದರೆ, ಆಧುನಿಕ ತಂತ್ರಜ್ಞಾನ ಆ ಮಟ್ಟಕ್ಕೆ ಬೆಳೆಯುತ್ತಿದೆ.
ಮನುಷ್ಯನ ಶ್ರಮವನ್ನು ಕಡಿಮೆ ಮಾಡಲಿರುವ ಈ ರೋಬೋಟ್‌ಗಳು ಫ್ಲಿಪ್ಕಾರ್ಟ್ನಲ್ಲಿ ಸರುಕುಗಳ ಪ್ಯಾಕಿಂಗ್ಗೆ, ಮೊಬೈಲ್ಗಳ ತಯಾರಿಕೆಗೆ, ಹೋಟೆಲ್ನಲ್ಲಿ ಆಹಾರ ಸರ್ವ್ ಮಾಡುವ, ಮಕ್ಕಳಿಗೆ ಪಾಠ ಮಾಡುವುದು ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಈಗಾಗಲೇ ರೋಬೋಗಳು ಕಾಲಿಟ್ಟಿವೆ. ಅದೇ ರೀತಿ ಚರಂಡಿಗಳಿದು ಸ್ವಚ್ಛಗೊಳಿಸಲೂ ಸಹ ರೋಬೋ ಬಂದಿದೆ.
ಸಫಾಯಿ ಕರ್ಮಚಾರಿಗಳು, ಪೌರ ಕಾರ್ಮಿಕರು ಇಂದಿಗೂ ಚರಂಡಿ ಒಳಗಿಳಿದು ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ಅನಿಷ್ಠ ಪದ್ಧತಿ ಇಂದಿಗೂ ಜೀವಂತವಾಗಿದೆ. ಇಂದಿಗೂ ಎಷ್ಟೋ ಕಡೆ ಶೌಚಾಲಯದ ಗುಂಡಿಗಳಿಗೆ ಅವರನ್ನು ಇಳಿಸಿ ಸ್ವಚ್ಛಗೊಳಿಸಲಾಗುತ್ತಿದೆ. ಆದರೆ, ಯಾವುದೇ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಗುಂಡಿಗಿಳಿದ ಬಳಿಕ ಉಸಿರುಗಟ್ಟಿ, ವಾಸನೆ ತಡೆಯಲಾರದೆ ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಮೃತಪಟ್ಟಿರುವ ಉದಾಹರಣೆಗಳಿವೆ. ಹೀಗಾಗಿ ಇದರ ನಿಯಂತ್ರಣಕ್ಕೆ ಯಂತ್ರಗಳನ್ನು ಬಳಸಬೇಕೆಂಬ ಆಗ್ರಹವೂ ಕೇಳಿ ಬಂದಿತ್ತು.
-
Tamil Nadu: City Corporation in Coimbatore is using a robot to clean manholes,in an effort to eliminate manual scavenging. Rashid, Gen Robotics, says,“We're introducing robots to eradicate manual scavenging that's banned by SC. Govts taking steps but not many solutions available” pic.twitter.com/k00ecvav1K
— ANI (@ANI) November 22, 2019 " class="align-text-top noRightClick twitterSection" data="
">Tamil Nadu: City Corporation in Coimbatore is using a robot to clean manholes,in an effort to eliminate manual scavenging. Rashid, Gen Robotics, says,“We're introducing robots to eradicate manual scavenging that's banned by SC. Govts taking steps but not many solutions available” pic.twitter.com/k00ecvav1K
— ANI (@ANI) November 22, 2019Tamil Nadu: City Corporation in Coimbatore is using a robot to clean manholes,in an effort to eliminate manual scavenging. Rashid, Gen Robotics, says,“We're introducing robots to eradicate manual scavenging that's banned by SC. Govts taking steps but not many solutions available” pic.twitter.com/k00ecvav1K
— ANI (@ANI) November 22, 2019
ತಮಿಳುನಾಡಿನ ಕೊಯಮತ್ತೂರಿನ ಸಿಟಿ ಕಾರ್ಪೊರೇಷನ್ ಚರಂಡಿ ಸ್ವಚ್ಛಗೊಳಿಸಲು ರೋಬೋಟ್‌ನ ಬಳಸಲಾಗುತ್ತಿದೆ. ಸುಪ್ರೀಂಕೋರ್ಟ್ ನಿಷೇಧಿಸಿರುವ ಹಸ್ತಚಾಲಿತ ಮ್ಯಾನುಯೆಲ್ ಸ್ಕ್ಯಾವೆಂಜಿಂಗ್‌ನ ನಿರ್ಮೂಲನೆ ಮಾಡಲು ರೋಬೋಗಳನ್ನು ಪರಿಚರಿಯಿಸುತ್ತಿದ್ದೇವೆ ಎಂದು ರೋಬೋಟಿಕ್ ಜನರಲ್ ರಶೀದ್ ಹೇಳಿದ್ದಾರೆ.
ಪೌರಕಾರ್ಮಿಕರ ಹಿತಕಾಯುವ ಸಲುವಾಗಿ ಈ ಕಾರ್ಯಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಎಲ್ಲೆಡೆಯೂ ಮೆಚ್ಚುಗೆ ವ್ಯಕ್ತವಾಗಿದೆ. ಅದನ್ನು ದೇಶದೆಲ್ಲೆಡೆ ವಿಸ್ತರಿಸಬೇಕು ಎಂಬ ಒತ್ತಾಯವೂ ಹೆಚ್ಚಾಗಿದೆ.