ನವದೆಹಲಿ: ಪ್ರತಿಪಕ್ಷಗಳ ವಿರೋಧದ ನಡುವೆಯೂ ಸೋಮವಾರ ತಡರಾತ್ರಿ ಲೋಕಸಭೆಯಲ್ಲಿ ಅಂಗೀಕಾರ ದೊರೆತಿರುವ ಪೌರತ್ವ ತಿದ್ದುಪಡಿ ಮಸೂದೆಗೆ ಇದೀಗ ದೇಶವ್ಯಾಪಿ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ, ನಾಳೆ ಮಧ್ಯಾಹ್ನ 2 ಗಂಟೆಗೆ (ಬುಧವಾರ) ರಾಜ್ಯಸಭೆಯಲ್ಲಿ ವಿವಾದಿತ ಮಸೂದೆ ಮಂಡನೆಯಾಗಲಿದೆ.
ಲೋಕಸಭೆಯಲ್ಲಿ ಮಸೂದೆಯನ್ನು ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದರು. ಇಲ್ಲಿ ಸತತ 12 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆದ ಬಳಿಕ ಸೋಮವಾರ ರಾತ್ರಿ ಅಂಗೀಕರಿಸಲ್ಪಟ್ಟಿತ್ತು. ಮಸೂದೆ ಪರವಾಗಿ 293 ಸದಸ್ಯರು ಮತಗಳು ಬಿದ್ದರೆ, 82 ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು.
-
#CitizenshipAmendmentBill2019 to be introduced in Rajya Sabha at 2 pm tomorrow. pic.twitter.com/cupTtvbpzj
— ANI (@ANI) December 10, 2019 " class="align-text-top noRightClick twitterSection" data="
">#CitizenshipAmendmentBill2019 to be introduced in Rajya Sabha at 2 pm tomorrow. pic.twitter.com/cupTtvbpzj
— ANI (@ANI) December 10, 2019#CitizenshipAmendmentBill2019 to be introduced in Rajya Sabha at 2 pm tomorrow. pic.twitter.com/cupTtvbpzj
— ANI (@ANI) December 10, 2019
ಆದರೀಗ ಮಸೂದೆಗೆ ಲೋಕಸಭೆ ಅನುಮೋದನೆ ದೊರೆತ ಪರಿಣಾಮ ದೇಶದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಪೌರತ್ವ ತಿದ್ದುಪಡಿ ಮಸೂದೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಕರ್ನಾಟಕ, ತಮಿಳುನಾಡಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ದೆಹಲಿಯಲ್ಲಿ ಪಾಕ್ ಮೂಲದ ಹಿಂದೂಗಳ ಸಂಭ್ರಮ:
ದೆಹಲಿಯ ಮಜ್ನುಕಾ ಟಿಲಾ ಪ್ರದೇಶದಲ್ಲಿ ವಾಸಿಸಿರುವ ಪಾಕಿಸ್ತಾನ ಮೂಲಕ ಹಿಂದೂಗಳು ಈ ಮಸೂದೆಗೆ ಅನುಮೋದನೆ ದೊರೆತಿದ್ದಕ್ಕೆ ಸಂಭ್ರಮಿಸಿದರು.
-
#WATCH Delhi: Hindu refugees from Pakistan living in Majnu-ka-Tila area celebrate passage of #CitizenshipAmendmentBill2019 in Lok Sabha. pic.twitter.com/eeCE7SmfGH
— ANI (@ANI) December 10, 2019 " class="align-text-top noRightClick twitterSection" data="
">#WATCH Delhi: Hindu refugees from Pakistan living in Majnu-ka-Tila area celebrate passage of #CitizenshipAmendmentBill2019 in Lok Sabha. pic.twitter.com/eeCE7SmfGH
— ANI (@ANI) December 10, 2019#WATCH Delhi: Hindu refugees from Pakistan living in Majnu-ka-Tila area celebrate passage of #CitizenshipAmendmentBill2019 in Lok Sabha. pic.twitter.com/eeCE7SmfGH
— ANI (@ANI) December 10, 2019
ಮಸೂದೆಗೆ ಬೆಂಬಲ ನೀಡಲ್ಲ: ಶಿವಸೇನೆ ನಿಲುವು
ಪೌರತ್ವ ತಿದ್ದುಪಡಿ ಮಸೂದೆ ಪರ ಮತ ಚಲಾಯಿಸಿದ್ದ ಶಿವಸೇನಾ, ಇದೀಗ ವಿರೋಧ ವ್ಯಕ್ತಪಡಿಸಿದೆ. 'ಲೋಕಸಭೆಯಲ್ಲಿ ಕೇಳಿದ್ದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಕೊಡುವವರೆಗೂ ರಾಜ್ಯಸಭೆಯಲ್ಲಿ ಈ ಮಸೂದೆಗೆ ಶಿವಸೇನೆ ಬೆಂಬಲಿಸುವುದಿಲ್ಲ' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ದೇಶ ವಿಭಜನೆಗೆ ಯತ್ನ: ತೇಜಸ್ವಿ ಯಾದವ್ ಆರೋಪ
ಇದು ದೇಶವನ್ನು ವಿಭಜಿಸುವ ಮಸೂದೆ. ಇದನ್ನು ಬಲವಾಗಿ ವಿರೋಧಿಸಿ ಅದರ ವಿರುದ್ಧ ಹೋರಾಡುತ್ತೇವೆ. ಮಸೂದೆಯನ್ನು ಬೆಂಬಲಿಸುವ ಮೂಲಕ ಸಿಎಂ ನಿತೀಶ್ಕುಮಾರ್ ಅವರು ಮತ್ತೆ ಬಿಹಾರದ ಜನರಿಗೆ ದ್ರೋಹ ಎಸಗಿದ್ದಾರೆ. ಏಕೆಂದರೆ ಅವರು ಬಿಜೆಪಿ ಮತ್ತು ಆರ್ಎಸ್ಎಸ್ಗೆ ಹೆದರುತ್ತಾರೆ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಕಿಡಿಕಾರಿದ್ದಾರೆ.
-
Asaduddin Owaisi on Shiv Sena supported #CitizenshipAmendmentBill2019 in Lok Sabha: This is 'Bhangra politics'. They write 'secular', in common minimum programme, this bill is against secularism and Article 14. It is politics of opportunism. pic.twitter.com/3H2V95etB0
— ANI (@ANI) December 10, 2019 " class="align-text-top noRightClick twitterSection" data="
">Asaduddin Owaisi on Shiv Sena supported #CitizenshipAmendmentBill2019 in Lok Sabha: This is 'Bhangra politics'. They write 'secular', in common minimum programme, this bill is against secularism and Article 14. It is politics of opportunism. pic.twitter.com/3H2V95etB0
— ANI (@ANI) December 10, 2019Asaduddin Owaisi on Shiv Sena supported #CitizenshipAmendmentBill2019 in Lok Sabha: This is 'Bhangra politics'. They write 'secular', in common minimum programme, this bill is against secularism and Article 14. It is politics of opportunism. pic.twitter.com/3H2V95etB0
— ANI (@ANI) December 10, 2019
ಅಸಾದುದ್ದೀನ್ ಓವೈಸಿ ಕಿಡಿನುಡಿ:
ಕೇಂದ್ರ ಸರ್ಕಾರದ ಉದ್ದೇಶಿತ ಮಸೂದೆ ಜಾತ್ಯತೀತತೆ ಮತ್ತು ಸಂವಿಂಧಾನದ ವಿಧಿ 14ರ ವಿರುದ್ಧವಾಗಿದೆ. ಇದು ಅವಕಾಶವಾದದ ರಾಜಕೀಯ ಎಂದು ಸಂಸದ ಅಸಾದುದ್ದೀನ್ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.