ಪುಣೆ: ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಪುಣೆ ಜಿಲ್ಲೆಯ ಇಂದಾಪುರ ಪ್ರದೇಶಕ್ಕೂ ಭಾರಿ ಮಳೆಯಾಗಿದ್ದು, ಮಳೆ ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಪುರಸಭೆ ನೌಕರರನ್ನು ಜೆಸಿಬಿ ಮೂಲಕ ಸ್ಥಳೀಯರು ರಕ್ಷಿಸಿದ ಘಟನೆ ಕಂಡು ಬಂದಿದೆ.
ಇಂದಾಪುರ ನಗರದ ರಾಮ್‌ವೆಸ್ ನಾಕಾದಲ್ಲಿ ನೀರಿನಿಂದ ಕೊಚ್ಚಿ ಹೋಗುತ್ತಿದ್ದ. ಜೆಸಿಬಿ ಮತ್ತು ಕೇಬಲ್ ಸಹಾಯದಿಂದ ಪುರಸಭೆಯ ನೌಕರನ ಪ್ರಾಣವನ್ನು ನಾಗರಿಕರು ಉಳಿಸಿದ್ದಾರೆ. ನೌಕರನ ರಕ್ಷಿಸುವ ರೋಮಾಂಚಕ ವಿಡಿಯೋ ವೈರಲ್ ಆಗಿದೆ.
ಮನೆಗೆ ನುಗ್ಗಿದ ನೀರು...!
ಬಾರಾಮತಿಯಲ್ಲಿ ದಿನವಿಡೀ ಭಾರಿ ಮಳೆಯಾಗುತ್ತಿದೆ. ಮಳೆಯಿಂದಾಗಿ ನಗರದ ರಸ್ತೆಗಳು ಕೆರೆಯಂತಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವಿಶೇಷವಾಗಿ ಬಾರಾಮತಿ ನಗರದ ಅಮ್ರೈನಲ್ಲಿರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕಾಲೋನಿಯ ಜಲೋಚಿಯಲ್ಲಿ ವಲಸೆ ಬಂದವರ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಠಿಸಿವೆ. ಅಲ್ಲದೆ, ನಾಗರಿಕರೊಂದಿಗೆ ಪ್ರಾಣಿಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸಿವೆ. ಪ್ರಸ್ತುತ, ಬಾರಾಮತಿ ನಗರದ ಸಾಂಸ್ಕೃತಿಕ ಕೇಂದ್ರದಲ್ಲಿ ಸುಮಾರು 500 ರಿಂದ 600 ನಿವಾಸಿಗಳಿಗೆ ವಸತಿ ಕಲ್ಪಿಸಲಾಗಿದೆ.