ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (ಸಿಐಎಸ್‌ಸಿಇ) ಭಾರತೀಯ ಪ್ರೌಢ ಶಿಕ್ಷಣ ಪ್ರಮಾಣಪತ್ರ (ಐಸಿಎಸ್‌ಇ) ಹಾಗೂ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ಐಎಸ್‌ಸಿ) ಫಲಿತಾಂಶ ಇಂದು ಪ್ರಕಟವಾಗಲಿದೆ ಎಂದು ಮಂಡಳಿಯ ಕಾರ್ಯದರ್ಶಿ ಗೆರ್ರಿ ಅರಾಥೂನ್ ತಿಳಿಸಿದ್ದಾರೆ.
![CICSE board to announce copy](https://etvbharatimages.akamaized.net/etvbharat/prod-images/7961558_dsjdf.jpg)
ಆಂತರಿಕ ಮೌಲ್ಯಮಾಪನ ಸೂತ್ರವು 12ನೇ ತರಗತಿಗೆ ಅನ್ವಯವಾಗಲಿದ್ದು, ಅದು ಭಾರತೀಯ ಶಾಲಾ ಪ್ರಮಾಣಪತ್ರ (ಐಎಸ್‌ಸಿ) ಪರೀಕ್ಷೆಯಾಗಿದೆ. 10ನೇ ತರಗತಿಗೆ ಭಾರತೀಯ ಮಾಧ್ಯಮಿಕ ಶಿಕ್ಷಣ ಪ್ರಮಾಣಪತ್ರ (ಐಸಿಎಸ್‌ಇ), ಯೋಜನಾ ಕಾರ್ಯ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
10ನೇ ತರಗತಿ (ಐಸಿಎಸ್‌ಇ) ಮತ್ತು 12ನೇ ತರಗತಿ (ಐಎಸ್‌ಸಿ) ಪರೀಕ್ಷೆಗಳ ಫಲಿತಾಂಶವನ್ನು ಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಾಗುವುದು. ಬೋರ್ಡ್ ವೆಬ್‌ಸೈಟ್ ಮತ್ತು ಎಸ್‌ಎಂಎಸ್ ಸೌಲಭ್ಯದ ಮೂಲಕ ಫಲಿತಾಂಶಗಳು ಲಭ್ಯವಾಗುತ್ತವೆ ಎಂದು ತಿಳಿಸಿದ್ದಾರೆ.
![CICSE board to announce copy](https://etvbharatimages.akamaized.net/etvbharat/prod-images/7961558_dsjdf.png)
ಕೋವಿಡ್-19 ಪ್ರಕರಣಗಳಲ್ಲಿನ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಬಾಕಿ ಇರುವ ಪರೀಕ್ಷೆಗಳನ್ನು ರದ್ದುಗೊಳಿಸಿದ ನಂತರ ಮಂಡಳಿಯು ಎರಡು ತರಗತಿಗಳಿಗೆ ಪರ್ಯಾಯ ಮೌಲ್ಯಮಾಪನ ಯೋಜನೆಯನ್ನು ಘೋಷಿಸಿತ್ತು.
ಸಿಐಎಸ್‌ಸಿಇಯ ಅಧಿಕೃತ ವೆಬ್‌ಸೈಟ್ https://www.cisce.orgನಲ್ಲಿ ಫಲಿತಾಂಶ ಬಿಡುಗಡೆಯಾಗಲಿದೆ. ಅಲ್ಲದೆ 10 ಹಾಗೂ 12ನೇ ತರಗತಿ ಫಲಿತಾಂಶವನ್ನು results.cisce.org ವೆಬ್‌ಸೈಟ್‌ನಲ್ಲೂ ನೋಡಬಹುದು.