ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದ ಒಂದು ದಿನದ ನಂತರ, ರಾಜ್ಯದಲ್ಲಿನ ಕೋವಿಡ್ 19 ಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಅವರು ಬುಧವಾರ ಐದು ಸೇರ್ಪಡೆದಾರರಿಗೆ ಖಾತೆಗಳನ್ನ ಹಂಚಿಕೆ ಮಾಡಿದ್ದಾರೆ. ಬಿಜೆಪಿಯ ಹಿರಿಯ ಮುಖಂಡ ಹಾಗೂ ವಿಶ್ವಾಸಾರ್ಹ ನರೋತ್ತಮ್ ಮಿಶ್ರಾ ಅವರಿಗೆ ಗೃಹ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳನ್ನು ನೀಡಲಾಗಿದೆ.
ವಿಡಿಯೋ ಬಿಡುಗಡೆಯ ಮೂಲಕ ಇಲಾಖೆಗಳ ಹಂಚಿಕೆಯನ್ನು ಪ್ರಕಟಿಸಿದ ಸಿಎಂ, ತುಳಸಿ ಸಿಲಾವತ್ ಅವರಿಗೆ ಜಲಸಂಪನ್ಮೂಲ ಇಲಾಖೆಯ ಉಸ್ತುವಾರಿ ವಹಿಸಿದ್ದಾರೆ. ಗೋವಿಂದ್ ಸಿಂಗ್ ರಜಪೂತ್ ಸಹಕಾರಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ಕಲ್ಯಾಣ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ ಎಂದರು. ಬಿಜೆಪಿಗೆ ಸೇರಲು ಸಿಲಾವತ್ ಮತ್ತು ರಜಪೂತ್ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಕಮಲ್ ಪಟೇಲ್ ಅವರಿಗೆ ಕೃಷಿ ಮತ್ತು ರೈತ ಕಲ್ಯಾಣ ಖಾತೆಯನ್ನು ವಹಿಸಿಕೊಡಲಾಗಿದ್ದು, ಮೀನಾ ಸಿಂಗ್ ಬುಡಕಟ್ಟು ಕಲ್ಯಾಣ ಇಲಾಖೆಯನ್ನು ನೋಡಿಕೊಳ್ಳಲಿದ್ದಾರೆ. ಚೌಹಾಣ್ ಅವರು ಐದು ಮಂತ್ರಿಗಳಿಗೆ ತಲಾ ಎರಡು ವಿಭಾಗಗಳನ್ನು ನಿಯೋಜಿಸಿದ್ದರು, ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ ನಂತರ, ಕೋವಿಡ್ -19 ಪರಿಸ್ಥಿತಿಯನ್ನು ಎದುರಿಸಲು ಈ ರೀತಿ ಹಂಚಿಕೆ ಮಾಡಿದ್ದಾಗಿ ಹೇಳಿದ್ದಾರೆ.