ETV Bharat / bharat

'ವ್ಯಾಪಾರ ಸಂಬಂಧವನ್ನು ಮೊದಲಿನಂತೆ ಇರಿಸೋಣ'.. ಭಾರತಕ್ಕೆ ಚೀನಾ ಮನವಿ

ಚೀನಾದ ಮೇಲೆ ಡಿಜಿಟಲ್ ದಾಳಿ ನಡೆಸುತ್ತಿರುವ ಭಾರತ ಸರ್ಕಾರ ಗಾಲ್ವಾನ್ ಸಂಘರ್ಷದ ಸಮಯದಿಂದಲೂ ಹಲವಾರು ಬಾರಿ ಚೀನಾದ ಮೊಬೈಲ್ ಆ್ಯಪ್​ಗಳನ್ನು ಬ್ಯಾನ್ ಮಾಡುವ ಮೂಲಕ ಆರ್ಥಿಕತೆಯ ಮೇಲೆ ದಾಳಿ ಮಾಡುತ್ತಿದೆ..

indo china trade relation
ಭಾರತ, ಚೀನಾ ವ್ಯಾಪಾರ ಸಂಬಂಧ
author img

By

Published : Nov 26, 2020, 6:54 AM IST

ನವದೆಹಲಿ: ಕೇಂದ್ರ ಸರ್ಕಾರ 43 ಚೀನಾದ ಮೊಬೈಲ್ ಆ್ಯಪ್​ಗಳನ್ನು ಬ್ಯಾನ್ ಮಾಡಿದ ಬೆನ್ನಲ್ಲೇ, ಭಾರತವು ಸಾಮಾನ್ಯ ವ್ಯಾಪಾರ ಸಂಬಂಧವನ್ನು ಮುಂದುವರೆಸಬೇಕೆಂದು ಚೀನಾ ಮನವಿ ಮಾಡಿದೆ.

ಈ ಬಗ್ಗೆ ಚೀನಾ ರಾಯಭಾರ ಕಚೇರಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. 'ಚೀನಾ ಮತ್ತು ಭಾರತ ಎರಡೂ ದೇಶಗಳು ಅಭಿವೃದ್ಧಿಗಾಗಿ ಅವಕಾಶಗಳನ್ನು ಹೊಂದಿವೆ. ಈ ಅವಕಾಶಗಳು ಪರಸ್ಪರ ಬೆದರಿಕೆಗಳಿಗಿಂತ ಅತ್ಯಂತ ಮುಖ್ಯ. ಎರಡೂ ರಾಷ್ಟ್ರಗಳು ತಮ್ಮ ವ್ಯಾಪಾರ ಮತ್ತು ವಾಣಿಜ್ಯವನ್ನು ಮೊದಲಿನಂತೆ ಕಾಪಾಡಿಕೊಳ್ಳಬೇಕಿದೆ' ಎಂದಿದೆ.

ವ್ಯಾಪಾರವನ್ನು ಸುಸ್ಥಿತಿಗೆ ತರುವುದರ ಮೂಲಕ ಉಭಯ ರಾಷ್ಟ್ರಗಳು ಲಾಭ ಹೊಂದಬಹುದಾಗಿದೆ. ಎರಡೂ ರಾಷ್ಟ್ರಗಳು ಗೆಲ್ಲಬಹುದಾಗಿದ್ದು, ಸರಿಯಾದ ಮಾರ್ಗದಲ್ಲಿ ಹೊರಡಬಹುದಾಗಿದೆ ಎಂದು ನವದೆಹಲಿಯ ಚೀನಾ ರಾಯಭಾರ ಕಚೇರಿ ಹೇಳಿದೆ.

ರಾಯಭಾರ ಕಚೇರಿಯ ವಕ್ತಾರ ಜಿ ರೊಂಗ್, ಭಾರತವು ಚೀನಾ ಸೇರಿದಂತೆ ವಿವಿಧ ದೇಶಗಳಿಗೆ ನ್ಯಾಯಯುತ, ನಿಷ್ಪಕ್ಷಪಾತ ಮತ್ತು ತಾರತಮ್ಯವಿಲ್ಲದ ವ್ಯಾಪಾರ ವಾತಾವರಣವನ್ನು ಒದಗಿಸುತ್ತದೆ ಮತ್ತು ಡಬ್ಲ್ಯೂಟಿಒ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ಆಶಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಚೀನಾ-ಇಥಿಯೋಪಿಯಾ ಸಹಕಾರವನ್ನು ಕೋರುತ್ತದೆ: ಕ್ಸಿ ಜಿನ್‌ಪಿಂಗ್

ಚೀನಾದ ಮೇಲೆ ಡಿಜಿಟಲ್ ದಾಳಿ ನಡೆಸುತ್ತಿರುವ ಭಾರತ ಸರ್ಕಾರ ಗಾಲ್ವಾನ್ ಸಂಘರ್ಷದ ಸಮಯದಿಂದಲೂ ಹಲವಾರು ಬಾರಿ ಚೀನಾದ ಮೊಬೈಲ್ ಆ್ಯಪ್​ಗಳನ್ನು ಬ್ಯಾನ್ ಮಾಡುವ ಮೂಲಕ ಆರ್ಥಿಕತೆಯ ಮೇಲೆ ದಾಳಿ ಮಾಡುತ್ತಿದೆ.

ಮಂಗಳವಾರಷ್ಟೇ ಚೀನಾದ ಅಲಿ ಎಕ್ಸ್​ಪ್ರೆಸ್, ಡಿಂಗ್​​ಟಾಕ್​ ಸೇರಿದಂತೆ ​43 ಮೊಬೈಲ್ ಆ್ಯಪ್​ಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದರ ಜೊತೆಗೆ ರಾಷ್ಟ್ರೀಯ ಭದ್ರತೆ ಹಾಗೂ ರಕ್ಷಣೆಗೆ ಕುತ್ತು ತರುವ ಆರೋಪದಲ್ಲಿ ಆ್ಯಪ್​​ಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿತ್ತು.

ಮತ್ತೊಂದೆಡೆ ಭಾರತ-ಚೀನಾ ಹಿರಿಯ ಮಿಲಿಟರಿ ಕಮಾಂಡರ್‌ಗಳ ಎಂಟನೇ ಸುತ್ತಿನ ಮಾತುಕತೆ ನವೆಂಬರ್ 6ರಂದು ಚುಶುಲೋನ್‌ನಲ್ಲಿ ನಡೆದಿದ್ದು, ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಎರಡೂ ದೇಶಗಳು ಒಪ್ಪಿಕೊಂಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.