ETV Bharat / bharat

'ಘರ್ಷಣೆಗೆ ಚೀನಾ ಅತಿಕ್ರಮಣವೇ ಕಾರಣ' - india china war latest news

ಜೂನ್ 15 ರ ಸಂಜೆ ಹಾಗೂ ತಡರಾತ್ರಿ ಚೀನಾ ಸೈನಿಕರು ವಾಸ್ತವ ನಿಯಂತ್ರಣ ರೇಖೆಯ ಯಥಾಸ್ಥಿತಿಯನ್ನು ಬದಲಾಯಿಸಲು ಯತ್ನಿಸಿದ್ದರಿಂದಲೇ ಹಿಂಸಾತ್ಮಕ ಘರ್ಷಣೆ ತಲೆದೋರಿತು. ಹಿರಿಯ ಅಧಿಕಾರಿಗಳ ಮಟ್ಟದ ಮಾತುಕತೆಯ ಒಪ್ಪಂದಗಳನ್ನು ಚೀನಾ ಪಾಲಿಸಿದ್ದರೆ ಎರಡೂ ಕಡೆ ಸಂಭವಿಸಿದ ಸಾವು ನೋವುಗಳನ್ನು ತಡೆಯಬಹುದಾಗಿತ್ತು ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

china responsible for violent clashes; india

author img

By

Published : Jun 16, 2020, 11:50 PM IST

Updated : Jun 18, 2020, 7:35 PM IST

ನವದೆಹಲಿ: ವಾಸ್ತವ ನಿಯಂತ್ರಣ ರೇಖೆಯ ಬಳಿ ಚೀನಾ ಗಡಿ ಅತಿಕ್ರಮಣ ಮಾಡಲು ಯತ್ನಿಸಿದ್ದರಿಂದಲೇ ಲಡಾಖ್​ನ ಗಾಲ್ವನ್ ವ್ಯಾಲಿಯಲ್ಲಿ ಎರಡೂ ಕಡೆಯ ಸೈನಿಕರ ಮಧ್ಯೆ ಸಂಘರ್ಷ ನಡೆಯಲು ಕಾರಣ ಎಂದು ಭಾರತ ಹೇಳಿದೆ. ಮಂಗಳವಾರ ತಡರಾತ್ರಿ ವಿದೇಶಾಂಗ ಸಚಿವಾಲಯ ಈ ಕುರಿತು ಪ್ರಕಟಣೆ ಹೊರಡಿಸಿದೆ. ಚೀನಾ-ಭಾರತ ಪಡೆಗಳ ಮಧ್ಯೆ ನಡೆದ ಸಂಘರ್ಷದಲ್ಲಿ ಎರಡೂ ಕಡೆ ಅಪಾರ ಸಾವು, ನೋವು ಉಂಟಾಗಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

"ಪೂರ್ವ ಲಡಾಖ್​ನಲ್ಲಿ ಉಂಟಾಗಿದ್ದ ಉದ್ವಿಗ್ನ ವಾತಾವರಣವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಭಾರತ ಹಾಗೂ ಚೀನಾ ಮಧ್ಯೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ನಡೆದಿದ್ದವು. ಜೂನ್ 6 ರಂದು ಹಿರಿಯ ಕಮಾಂಡರ್​ಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಕುರಿತು ಫಲಪ್ರದ ಮಾತುಕತೆಗಳು ನಡೆದಿದ್ದವು. ಜೊತೆಗೆ ಸ್ಥಳದಲ್ಲಿರುವ ಕಮಾಂಡರ್​ಗಳು ಸರಣಿ ಮಾತುಕತೆ ನಡೆಸಿದ್ದರು. ಈ ಕುರಿತು ಎಲ್ಲವೂ ಸುಸೂತ್ರವಾಗಿ ನಡೆಲಿದೆ ಎಂಬ ಭರವಸೆಯಲ್ಲಿರುವಾಗಲೇ ಚೀನಾ ಒಪ್ಪಂದವನ್ನು ಉಲ್ಲಂಘಿಸಿ ಗಾಲ್ವನ್ ವ್ಯಾಲಿ ಬಳಿಯ ವಾಸ್ತವ ನಿಯಂತ್ರಣ ರೇಖೆಯನ್ನು ಬದಲಾಯಿಸಲು ಯತ್ನಿಸಿತು. ಜೂನ್ 15 ರ ಸಂಜೆ ಹಾಗೂ ತಡರಾತ್ರಿ ಚೀನಾ ಸೈನಿಕರು ವಾಸ್ತವ ನಿಯಂತ್ರಣ ರೇಖೆಯ ಯಥಾಸ್ಥಿತಿಯನ್ನು ಬದಲಾಯಿಸಲು ಯತ್ನಿಸಿದ್ದರಿಂದಲೇ ಹಿಂಸಾತ್ಮಕ ಘರ್ಷಣೆ ತಲೆದೋರಿತು. ಹಿರಿಯ ಅಧಿಕಾರಿಗಳ ಮಟ್ಟದ ಮಾತುಕತೆಯ ಒಪ್ಪಂದಗಳನ್ನು ಚೀನಾ ಪಾಲಿಸಿದ್ದರೆ ಎರಡೂ ಕಡೆ ಸಂಭವಿಸಿದ ಸಾವು ನೋವುಗಳನ್ನು ತಡೆಯಬಹುದಾಗಿತ್ತು." ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಲೇಖಕರು: ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ

Last Updated : Jun 18, 2020, 7:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.