ETV Bharat / bharat

ಕೊರೊನಾ ವೈರಸ್​​ ಹರಡಲು ಕಾರಣ ಏನು​ ಗೊತ್ತಾ?

author img

By

Published : Feb 2, 2020, 1:28 PM IST

Updated : Feb 2, 2020, 2:58 PM IST

ಚೀನಾದ ಹುನಾನ್ ಪ್ರಾಂತ್ಯವನ್ನು ಮಾರಣಾಂತಿಕ ಹಕ್ಕಿ ಜ್ವರವೂ ಕಾಡುತ್ತಿದೆ. ಇದರಿಂದಲೇ ಕೊರೊನಾ ವೈರಸ್​​ ಹರಡಿರಬಹುದೆಂದು ವರದಿಯೊಂದು ಹೇಳುತ್ತಿದೆ.

China reports bird flu
ಕೊರೊನಾ ವೈರಸ್​​

ಬೀಜಿಂಗ್: ಹುನಾನ್ ಪ್ರಾಂತ್ಯದಲ್ಲಿ ಮಾರಣಾಂತಿಕ ಹಕ್ಕಿ ಜ್ವರವಿದ್ದು ಇದರಿಂದಲೇ ಕೊರೊನಾ ವೈರಸ್​​ ಹರಡಿರಬಹುದೆಂದು ವರದಿಯೊಂದು ಹೇಳುತ್ತಿದೆ.

ಚೀನಾದ ಶುವಾಂಗ್ಕಿಂಗ್ ಜಿಲ್ಲೆಯ ಹುಬೈನ ಪ್ರಾಂತ್ಯದ ಜಮೀನಿನಲ್ಲಿ ಅಪಾರ ಪ್ರಮಾಣದಲ್ಲಿ ಕೋಳಿ ಸಾಕಾಣಿಕೆ ಮಾಡಲಾಗುತ್ತಿದೆ. ಅಲ್ಲಿ ಸುಮಾರು 17,828 ಕೋಳಿಗಳಿದ್ದವು. ಅವುಗಳಲ್ಲಿ 4,500 ಕೋಳಿಗಳಿಗೆ ಸಾಂಕ್ರಾಮಿಕ ರೋಗ ತಗುಲಿ ಸಾವನ್ನಪ್ಪಿವೆ. ಈ ಕೋಳಿಗಳೇ ಕೊರೊನಾ ವೈರಸ್​​ನ ಕೇಂದ್ರಬಿಂದು ಎಂದು ಚೀನಾದಲ್ಲಿ ಖಾಸಗಿ ಸಂಸ್ಥೆಯೊಂದು ನಡೆಸಿದ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸ್ಥಳೀಯ ಅಧಿಕಾರಿಗಳು ರೋಗಬಾಧಿತ ಎಲ್ಲ ಕೋಳಿಗಳನ್ನು ಪರೀಕ್ಷಿಸುತ್ತಿದ್ದಾರೆ. ಅಲ್ಲಿ ನಡೆದಿರುವ ಕೋಳಿಗಳ ಮಾರಣಹೋಮವೇ ಕೊರೊನಾ ವೈರಸ್​ ಉದ್ಭವಿಸಲು ಕಾರಣ. ಆದ್ರೆ ಹುನಾನ್​ ನಗರದಲ್ಲಿ ಮನುಷ್ಯರಲ್ಲಿ ಯಾವುದೇ ಎಚ್‌5ಎನ್1 ವೈರಸ್​ ಪ್ರಕರಣಗಳು ವರದಿಯಾಗಿಲ್ಲ ಎಂದು ಚೀನಾದ ಕೃಷಿ ಮತ್ತು ಗ್ರಾಮೀಣ ವ್ಯವಹಾರಗಳ ಸಚಿವಾಲಯ ಸ್ಷಷ್ಟಪಡಿಸಿದೆ.

ಚೀನಾದಲ್ಲಿ ಕೊರೊನಾ ವೈರಸ್​ನಿಂದ ಇಲ್ಲಿಯವರೆಗೆ ಸುಮಾರು 304 ಜನರು ಸಾವನ್ನಪ್ಪಿದ್ದಾರೆ. ಆಸ್ಟ್ರೇಲಿಯಾ, ಫ್ರಾನ್ಸ್, ಅಮೆರಿಕ ಮತ್ತು ಚೀನಾ ಹೊರತಾಗಿ ಏಷ್ಯಾದ ಏಳು ದೇಶಗಳಲ್ಲಿ ಕೊರೊನಾ ವೈರಸ್​​​ ಪ್ರಕರಣಗಳು ಪತ್ತೆಯಾಗಿದೆ.

Last Updated : Feb 2, 2020, 2:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.