ETV Bharat / bharat

ಭಾರತದ ಯಾವುದೇ ಯೋಧರನ್ನ ಬಂಧನ ಮಾಡಿಲ್ಲ: ಚೀನಾ ವಿದೇಶಾಂಗ ಇಲಾಖೆ ಸ್ಪಷ್ಟನೆ - ಭಾರತೀಯ ಯೋಧರು

ಪೂರ್ವ ಲಡಾಖ್​ನ ಗಾಲ್ವಾನ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಸಂಘರ್ಷದ ವೇಳೆ ನಾವು ಯಾವುದೇ ಭಾರತೀಯ ಯೋಧರನ್ನ ವಶಕ್ಕೆ ಪಡೆದುಕೊಂಡಿಲ್ಲ ಎಂದು ಚೀನಾ ಸ್ಪಷ್ಟನೆ ನೀಡಿದೆ.

Chinese Foreign Ministry
Chinese Foreign Ministry
author img

By

Published : Jun 19, 2020, 3:12 PM IST

ಹೈದರಾಬಾದ್​: ಲಡಾಖ್​ನ ಗಾಲ್ವಾನ​​ ವ್ಯಾಲಿ ಪ್ರದೇಶದಲ್ಲಿ ಭಾರತ - ಚೀನಾ ನಡುವಿನ ಸಂಘರ್ಷದ ವೇಳೆ ನಾವು ಯಾವುದೇ ಭಾರತೀಯ ಯೋಧರ ಬಂಧನ ಮಾಡಿಲ್ಲ ಎಂದ ಚೀನಾ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ.

ಚೀನಾ ವಿದೇಶಾಂಗ ಇಲಾಖೆ ಸುದ್ದಿಗೋಷ್ಠಿ

ಸೋಮವಾರ ರಾತ್ರಿ ನಡೆದ ಸಂಘರ್ಷದಲ್ಲಿ 20 ಯೋಧರು ಹುತಾತ್ಮರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಈ ವೇಳೆ ಭಾರತೀಯ ಕೆಲ ಯೋಧರು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಕೂಡ ಕೆಲವೊಂದು ಮಾಧ್ಯಮಗಳಲ್ಲಿ ಹರಿದಾಡಿತ್ತು. ಆದರೆ, ಈ ವಿಷಯಕ್ಕೆ ನಿನ್ನೆ ಸ್ಪಷ್ಟನೆ ನೀಡಿದ್ದ ಭಾರತೀಯ ಸೇನೆ, ನಮ್ಮ ಯಾವುದೇ ಯೋಧರು ಕಣ್ಮರೆಯಾಗಿಲ್ಲ ಎಂದಿತು. ಇದರ ಬೆನ್ನಲ್ಲೇ ಚೀನಾ - ಭಾರತದ ನಡುವಿನ ಮಾತುಕತೆ ಬಳಿಕ ನಾಲ್ವರು ಸೇನಾಧಿಕಾರಿಗಳು ಸೇರಿದಂತೆ 10 ಮಂದಿ ಯೋಧರನ್ನ ಚೀನಾ ರಿಲೀಸ್​ ಮಾಡಿದೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ.

ಇದೆಲ್ಲದರ ನಡುವೆ ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ​ ಲಿಜಿಯಾನ್​, ನಾವು ಭಾರತದ ಯಾವುದೇ ಯೋಧರ ಬಂಧನ ಮಾಡಿಲ್ಲ ಎಂದಿದ್ದು, ಗಾಲ್ವಾನ​ ವ್ಯಾಲಿಯಲ್ಲಿ ನಡೆದಿರುವ ಸಂಘರ್ಷದ ಬಗ್ಗೆ ಸರಿ - ತಪ್ಪು ಯಾವುದು ಎಂಬುದು ಬಹಳ ಸ್ಪಷ್ಟವಾಗಿದೆ. ಈ ವಿಷಯದಲ್ಲಿ ಭಾರತ ಸಂಪೂರ್ಣವಾಗಿ ಸುಳ್ಳು ಹೇಳುತ್ತಿದ್ದು, ಪರಿಸ್ಥಿತಿ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಉಭಯ ದೇಶಗಳು ಮಾತುಕತೆ ನಡೆಸಿದ್ದು, ಭಾರತದಲ್ಲಿ ಚೀನಾ ಉತ್ಪನ್ನ ಬಹಿಷ್ಕರಿಸುವ ಕುರಿತು ಇಲ್ಲಿಯವರೆಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.