ಲಡಾಖ್: ಲೇಹ್‌ನ ಖರ್ದುಂಗ್ಲಾ ಪಾಸ್ ಬಳಿ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದ ಕಾರ್ಮಿಕರೊಂದಿಗೆ ಕೇಂದ್ರ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ಜಿ.ಕಿಶನ್ ರೆಡ್ಡಿ ಇಂದು ಸಂವಾದ ನಡೆಸಿದರು.
ಲಡಾಖ್ನಲ್ಲಿ ನಡೆಯಲಿರುವ ಲೇಹ್ ಹಿಲ್ಸ್ ಕೌನ್ಸಿಲ್ ಚುನಾವಣೆಯ ಪ್ರಚಾರಕ್ಕಾಗಿ ತೆರಳುತ್ತಿದ್ದ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ಕಿಶನ್ ರೆಡ್ಡಿ, ಖರ್ದುಂಗ್ಲಾ ಪಾಸ್ ಬಳಿ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದ ಕಾರ್ಮಿಕರನ್ನು ಕಂಡು ಕಾರು ನಿಲ್ಲಿಸಿ ಅವರೊಂದಿಗೆ ಸಂವಹನ ನಡೆಸಿ ಅಲ್ಲಿನ ಸ್ಥಿತಿ ಗತಿಗಳ ಬಗ್ಗೆ ವಿಚಾರಿಸಿದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಲೇಹ್‌ನಿಂದ ನುಬ್ರಾಕ್ಕೆ ಹೋಗುವ ಮಾರ್ಗದಲ್ಲಿ ಲಡಾಖ್‌ನ ಪ್ರಶಾಂತ ಭೂಮಿಗೆ ಬರುತ್ತಿದ್ದಂತೆ, 18,600 ಅಡಿ ಎತ್ತರದಲ್ಲಿರುವ ಖರ್ದುಂಗ್ಲಾ - ನುಬ್ರಾ ರಸ್ತೆಯಲ್ಲಿ ಶ್ರಮವಹಿಸಿ ರಸ್ತೆ ನಿರ್ಮಿಸುತ್ತಿರುವ ಕಾರ್ಮಿಕರನ್ನು ಗಮನಿಸಿದೇ ಹಾಗೂ ಅವರೊಂದಿಗೆ ಸಂವಹನ ನಡೆಸಲು ನನಗೆ ಅವಕಾಶ ಸಿಕ್ಕಿತು ಎಂದಿದ್ದಾರೆ.
ಸಂವಹನದ ವೇಳೆ ಚೀನಾ ಗಡಿ ಪ್ರದೇಶದ ಬಳಿ ರಸ್ತೆ ನಿರ್ಮಿಸುತ್ತಿದೆ. ಆದರೆ, ಭಾರತ ಗಡಿ ಬಳಿ ರಸ್ತೆ ನಿರ್ಮಿಸುವುದಿಲ್ಲವೇ? ನಾವು ಇಲ್ಲಿ ರಸ್ತೆಯನ್ನು ನಿರ್ಮಿಸಬೇಕು ಎಂದು ರೆಡ್ಡಿ ಕಾರ್ಮಿಕರಿಗೆ ಹೇಳಿದರು. ಇದಕ್ಕೆ ಪ್ರತ್ಯುತ್ತರವಾಗಿ ಕಳೆದ 70 ವರ್ಷಗಳಿಂದ ನಮ್ಮ ದೇಶದ ಯಾವುದೇ ಸರ್ಕಾರವು ಗಡಿ ಪ್ರದೇಶದ ಬಳಿ ಉತ್ತಮ ರಸ್ತೆ ನಿರ್ಮಿಸಲು ಪ್ರಯತ್ನಿಸಲಿಲ್ಲ ಎಂದು ಕಿಶನ್ ರೆಡ್ಡಿಗೆ ಕಾರ್ಮಿಕರು ಹೇಳಿದ್ದಾರೆ.
ಇನ್ನು ಕಾರ್ಮಿಕರ ಆರೋಗ್ಯ, ವಸತಿ ಸೌಲಭ್ಯ, ಪಾವತಿ ಸೌಲಭ್ಯಗಳ ಬಗ್ಗೆ ಸಚಿವರು ವಿಚಾರಿಸಿದ್ದು, ನಮಗೆ ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಚಳಿ ಅಧಿಕವಾಗಿರುವ ಕಾರಣ ಜಾಕೆಟ್‌ಗಳು, ಆಹಾರ, ಮಲಗುವ ವ್ಯವಸ್ಥೆ ಹಾಗೂ ಒಂದು ದಿನಕ್ಕೆ 350 ರಿಂದ 400ರೂಪಾಯಿಗಳವರೆಗೆ ವೇತನ ನೀಡುತ್ತಾರೆ ಎಂದು ಕಾರ್ಮಿಕರು ತಿಳಿಸಿದರು.
ಸುಮಾರು ಅರ್ಧ ಗಂಟೆಗಳ ಕಾಲ ಸಂವಹನ ನಡೆಸಿ ತೆರಳುವ ವೇಳೆಗೆ ಕಾರ್ಮಿಕರಿಗೆ ನಾನು ಯಾರೆಂದು ನಿಮಗೆ ತಿಳಿದಿದೆಯೇ ಎಂದು ಕಿಶನ್ ರೆಡ್ಡಿ ಪ್ರಶ್ನಿಸಿದ್ದಾರೆ. ಇದಕ್ಕೆ ಯಾವುದೇ ಉತ್ತರ ಬಾರದ ಹಿನ್ನೆಲೆ, ನಾನು ಭಾರತದ ಕೇಂದ್ರ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ಎಂದು ತಮ್ಮ ಬಗ್ಗೆ ಹೇಳಿಕೊಂಡರು.
ಲೇಹ್‌ನಲ್ಲಿ ರಸ್ತೆ ನಿರ್ಮಿಸುತ್ತಿರುವ ಹೆಚ್ಚಿನ ಕಾರ್ಮಿಕರು ಜಾರ್ಖಂಡ್ ಮೂಲದವರಾಗಿದ್ದು, ಲೇಹ್‌ನಲ್ಲಿರುವ ಖರ್ದುಂಗ್ಲಾ ಪಾಸ್ ಸಮುದ್ರ ಮಟ್ಟದಿಂದ 18,380 ಅಡಿ ಎತ್ತರದಲ್ಲಿದೆ, ಅಲ್ಲಿನ ತಾಪಮಾನವು ಮೈನಸ್‌ನಲ್ಲಿ ಇರುವುದರಿಂದ ಆಮ್ಲಜನಕದ ಕೊರತೆ ಹೆಚ್ಚಾಗಿರುತ್ತದೆ.