ಗೋರಕ್ಪುರ (ಉತ್ತರ ಪ್ರದೇಶ) : ಇಂದು ಸಾವನ್ ತಿಂಗಳ ಪ್ರಥಮ ಸೋಮವಾರ ಹಿನ್ನೆಲೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾನಸ ಸರೋವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಸಾವನ್ ಅಂದರೆ ಹಿಂದೂ ಕ್ಯಾಲೆಂಡರ್ ನಾನಕ್ಷಾಹಿಯ ಐದನೇ ತಿಂಗಳಾಗಿದೆ. ಸಾವನ್ ಪದ ಸಂಸ್ಕೃತದ ಶ್ರವಣ್ನಿಂದ ಬಂದಿದೆ. ಹಿಂದೂ ಧರ್ಮದಲ್ಲಿ ಕಾಲಕ್ಕೆ ತಕ್ಕಂತೆ ವಿವಿಧ ಕ್ಯಾಲೆಂಡರ್ಗಳು ಹುಟ್ಟಿಕೊಂಡಿದ್ದು, ಅವುಗಳಲ್ಲಿ, ಶಕಾ, ವಿಕ್ರಮ ಮತ್ತು ನಾನಕ್ಷಾಹಿ ಕೂಡ ಪ್ರಮುಖ ಕ್ಯಾಲೆಂಡರ್ಗಳಾಗಿವೆ.
ಉತ್ತರ ಭಾರತದಲ್ಲಿ ಸಾವನ್ ತಿಂಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಹೀಗಾಗಿ ಇಂದಿನ ದಿನ ಉತ್ತರ ಭಾರತದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ , ಪುನಸ್ಕಾರಗಳು ನಡೆಯುತ್ತಿವೆ.