ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ ನಾಳೆಯಿಂದ ಕೆಲವೊಂದು ಷರತ್ತುಗಳೊಂದಿಗೆ ಪ್ಯಾಸೆಂಜರ್ ರೈಲು ಓಡಾಟ ನಡೆಸಲಿದ್ದು, ಅದಕ್ಕಾಗಿ ಇಂದು ಸಂಜೆ 4 ಗಂಟೆಯಿಂದ ಆನ್ಲೈನ್ ಬುಕ್ಕಿಂಗ್ ಕೂಡ ಆರಂಭಗೊಳ್ಳಲಿದೆ. ಕೇಂದ್ರದ ಈ ನಿರ್ಧಾರಕ್ಕೆ ಚಿದಂಬರಂ ಶಹಬ್ಬಾಸ್ಗಿರಿ ನೀಡಿದ್ದಾರೆ.
ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಡೆ ಸ್ವಾಗತಿಸಿರುವ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ಮುಖಂಡ ಚಿದಂಬರಂ, ಕೇಂದ್ರ ಸರ್ಕಾರ ದೇಶದಲ್ಲಿ ಅಂತರ್ - ರಾಜ್ಯ ರೈಲು ಆರಂಭಿಸಿರುವ ನಿರ್ಧಾರ ಉತ್ತಮ ನಡೆಯಾಗಿದ್ದು, ಅದೇ ರೀತಿಯಲ್ಲಿ ಬಸ್ ಸೇವೆ ಕೂಡ ಆರಂಭ ಮಾಡಬೇಕು ಎಂದಿದ್ದಾರೆ.
-
The only way economic and commercial activity can effectively begin, is to open road, rail and air services for passengersand goods.
— P. Chidambaram (@PChidambaram_IN) May 11, 2020 " class="align-text-top noRightClick twitterSection" data="
">The only way economic and commercial activity can effectively begin, is to open road, rail and air services for passengersand goods.
— P. Chidambaram (@PChidambaram_IN) May 11, 2020The only way economic and commercial activity can effectively begin, is to open road, rail and air services for passengersand goods.
— P. Chidambaram (@PChidambaram_IN) May 11, 2020
ನಾಳೆಯಿಂದ ಪ್ಯಾಸೆಂಜರ್ ರೈಲು ಸೇವೆ... ಇಂದಿನಿಂದಲೇ ಆನ್ಲೈನ್ ಬುಕ್ಕಿಂಗ್ ಆರಂಭ
ದೇಶದ ಆರ್ಥಿಕತೆ ಹಾಗೂ ವಾಣಿಜ್ಯ ಚಟುವಟಿಕೆ ನಿರಂತರವಾಗಿ ನಡೆಯಬೇಕಾದರೆ ರೈಲು ಹಾಗೂ ರಸ್ತೆ ಸಂಚಾರ ಆರಂಭ ಮಾಡುವುದು ಅತಿ ಅವಶ್ಯ ಎಂದಿದ್ದಾರೆ.
ಆರ್ಥಿಕತೆಯ ಮೇಲೆ ಕೋವಿಡ್-19 ಬಿಕ್ಕಟ್ಟಿನ ಪರಿಣಾಮದಿಂದಾಗಿ ಆದಾಯದಲ್ಲಿನ ನಿರೀಕ್ಷಿತ ಕೊರತೆ ಎದುರಿಸಲು ಪ್ರಸಕ್ತ ಹಣಕಾಸು ವರ್ಷದಲ್ಲಿ 4.2 ಲಕ್ಷ ಕೋಟಿ ರೂ.ನಿಂದ 12 ಲಕ್ಷ ಕೋಟಿ ರೂ. ಮಾರುಕಟ್ಟೆ ಸಾಲ ಪಡೆಯಲು ಕೇಂದ್ರ ನಿರ್ಧರಿಸಿದ್ದ ನಡೆಯನ್ನು ಚಿದಂಬರಂ ಶ್ಲಾಘಿಸಿದ್ದರು.