ETV Bharat / bharat

ಛತ್ತೀಸ್‌ಗಢದಲ್ಲಿ ಏಳು ಕೊರೊನಾ ಪಾಸಿಟಿವ್​: 26ಕ್ಕೇರಿದ ಸೋಂಕಿತರ ಸಂಖ್ಯೆ - Korba

ಏಪ್ರಿಲ್ 9 ರಂದು ಕೊರ್ಬಾದ ಕಾಟ್‌ಘೋರಾದಲ್ಲಿ ಕೊರೊನಾ ಪಾಸಿಟಿವ್​ ಪ್ರಕರಣಗಳು ಕಂಡುಬಂದ ಹಿನ್ನೆಲೆ 24 ಗಂಟೆಯೊಳಗೆ ಈ ಪ್ರದೇಶವನ್ನು ಹಾಟ್​​ಸ್ಪಾಟ್​ ಎಂದು ಘೋಷಣೆ ಮಾಡಲಾಗಿದೆ.

ಛತ್ತೀಸ್‌ಗಢದಲ್ಲಿ ಮತ್ತೇ ಏಳು ಕೊರೊನಾ ಪಾಸಿಟಿವ್

author img

By

Published : Apr 12, 2020, 12:48 PM IST

ಕೊರ್ಬಾ (ಛತ್ತೀಸ್‌ಗಢ): ನಗರದಲ್ಲಿ ಮತ್ತೆ ಏಳು ಹೊಸ ಕೊರೊನಾ ಪಾಸಿಟಿವ್​ ಪ್ರಕರಣ ವರದಿಯಾಗಿದ್ದು, ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಒಟ್ಟಾರೆ 25 ಕ್ಕೇರಿದೆ.

ಸೋಂಕಿತರಲ್ಲಿ ಈವರೆಗೆ 9 ಜನರು ಚೇತರಿಸಿಕೊಂಡಿದ್ದು, ರಾಜ್ಯದಲ್ಲಿ ಈವರೆಗೆ ಕೊರೊನಾ ಸಂಬಂಧಿ ಸಾವು ಸಂಭವಿಸಿಲ್ಲ. ಏಪ್ರಿಲ್ 9 ರಂದು ಕೊರ್ಬಾದ ಕಾಟ್‌ಘೋರಾದಲ್ಲಿ ಕೊರೊನಾ ಪಾಸಿಟಿವ್​ ಪ್ರಕರಣಗಳು ಕಂಡುಬಂದ ಹಿನ್ನೆಲೆ 24 ಗಂಟೆಯೊಳಗೆ ಈ ಪ್ರದೇಶವನ್ನು ಹಾಟ್​​ಸ್ಪಾಟ್​ ಎಂದು ಘೋಷಣೆ ಮಾಡಲಾಗಿದೆ.

ಕೊರೊನಾ ಪಾಸಿಟಿವ್​ ಬಂದಿರುವ ಎಂಟು ರೋಗಿಗಳು ತಬ್ಲಿಘಿ ಜಮಾತ್‌ನ 16 ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಐದು ದಿನಗಳ ಹಿಂದೆಯೇ ಒಬ್ಬರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಪಾಸಿಟಿವ್​ ಬಂದ ಹಿನ್ನೆಲೆ ಎಐಐಎಂಎಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಈ 16 ಜನ ತಬ್ಲಿಘಿ ಜಮಾತ್​ನಿಂದ ಬಂದವರು ಮಹಾರಾಷ್ಟ್ರದಿಂದ ಹಿಂದಿರುಗಿದ್ದು, ಕಾಟ್‌ಘೋರಾದ ಮಸೀದಿಯಲ್ಲಿ ಕ್ವಾರಂಟೈನ್​ನಲ್ಲಿ ಇದ್ದರು.

ಕಾಟ್‌ಘೋರಾದಲ್ಲಿ 2,000 ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಜನರು ನೆಲೆಸಿದ್ದಾರೆ. ಇಲ್ಲಿನ ನಿವಾಸಿಗಳೊಂದಿಗೆ ಇವರು ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.