ರಾಯಪುರ್: ಛತ್ತೀಸಗಢದ ಮಾಜಿ ಸಿಎಂ ಅಜಿತ್ ಜೋಗಿ ಅವರು ಮತ್ತೆ ಹೃದಯಾಘಾತಕ್ಕೆ ಒಳಗಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಜಿತ್ ಜೋಗಿ 9 ತಿಂಗಳ ಹಿಂದೆ ಕೋಮಾ ಸ್ಥಿತಿಗೆ ಜಾರಿದ್ದರು. ಶ್ರೀ ನಾರಾಯಣ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರಿಗೆ ಮೇ 9 ರಂದು ಹೃದಯಾಘಾತವಾಗಿತ್ತು.
ಛತ್ತೀಸ್ಗಢದ ಮೊದಲ ಮುಖ್ಯಮಂತ್ರಿಯಾಗಿದ್ದ ಅಜಿತ್ ಜೋಗಿ, 2000-2003ರ ವರೆಗೆ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಮಾರ್ವಾಹಿ ಕ್ಷೇತ್ರದ ಶಾಸಕರಾಗಿದ್ದಾರೆ.