ರಾಯಘಡ್ (ಛತ್ತೀಸಗಢ್): ಪಿಕ್ ಅಪ್ ವಾಹನ ಮತ್ತು ಟ್ರಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟ ಘಟನೆ ರಾಯಘಡ್ನಲ್ಲಿ ನಡೆದಿದೆ.
ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಪಿಕ್ ಅಪ್ ವಾಹನದಲ್ಲಿದ್ದವರೇ ಮೃತಪಟ್ಟಿದ್ದು, ಅವರ ಗುರುತು ಪತ್ತೆಯಾಗಿಲ್ಲ. ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಪಘಾತದಲ್ಲಿ ಪಿಕ್ ಅಪ್ ವಾಹನ ಸಂಪೂರ್ಣವಾಗಿ ಚಚ್ಚಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.