ಹೈದರಾಬಾದ್: ಪಶು ವೈದ್ಯೆ ಅತ್ಯಾಚಾರ ಕೊಲೆ ಆರೋಪಿಗಳು ಎನ್ಕೌಂಟರ್ ಆದ ಬೆನ್ನಿಗೇ ಹತ ಆರೋಪಿಗಳ ಕುಟುಂಬದವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಈ ಪೈಕಿ ಹೇಳಿಕೆ ನೀಡಿರುವ ಆರೋಪಿ ಚನ್ನಕೇಶವುಲು ಪತ್ನಿ, ನಮಗೆ ಮದುವೆಯಾಗಿ ಇನ್ನೂ ಒಂದು ವರ್ಷವಾಗಿದೆ. ಗಂಡನಿಲ್ಲದೆ ನಾನು ಹೇಗೆ ಬದುಕಲಿ ಎಂದು ಪ್ರಶ್ನಿಸಿದ್ದಾರೆ.
ಪೊಲೀಸರು ವಿಚಾರಣೆ ಮಾಡಿ ಬಿಟ್ಟುಬಿಡುವುದಾಗಿ ನನ್ನ ಪತಿಯನ್ನು ಕರೆದುಕೊಂಡು ಹೋದರು. ಆದರೆ, ಕನಿಷ್ಠ ಜೀವಂತವಾಗಿರಲೂ ಬಿಡಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.