ETV Bharat / bharat

Insight: ರೋಗಗಳಿಗೆ ಚಿಕಿತ್ಸೆ ನೀಡುವ ಮೊದಲು ಆರೋಗ್ಯ ವೆಚ್ಚದ ಹೆಚ್ಚಳಕ್ಕೆ ಚಿಕಿತ್ಸೆ ನೀಡೋಣ - increase medical costs

ಪ್ರತಿ ವರ್ಷವೂ, ನಮ್ಮ ದೇಶದಲ್ಲಿ ಕನಿಷ್ಠ 7% ಕುಟುಂಬಗಳು ದುಬಾರಿ ವೈದ್ಯಕೀಯ ಶುಲ್ಕಗಳನ್ನು ಭರಿಸಲಾಗದೇ ಸಾಲದ ವಿಷಚಕ್ರಕ್ಕೆ ಸಿಲುಕಿ ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಮುಂಬರುವ ದಶಕದಲ್ಲಿ ವೈದ್ಯಕೀಯ ವೆಚ್ಚವು ವರ್ಷಕ್ಕೆ ಸರಾಸರಿ 5.5% ದರದಲ್ಲಿ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ!

Changes is needed to the cost of treatment than the actual disease
ರೋಗಗಳಿಗೆ ಚಿಕಿತ್ಸೆ ನೀಡುವ ಮೊದಲು ಆರೋಗ್ಯ ವೆಚ್ಚದ ಹೆಚ್ಚಳಕ್ಕೆ ಚಿಕಿತ್ಸೆ ನೀಡೋಣ
author img

By

Published : Dec 26, 2019, 12:31 PM IST

ಯಾರಾದರೂ ಖಾಯಿಲೆ ಬೀಳುವುದನ್ನು ನೋಡುವುದು ನಮಗೆ ಬಹಳ ನೋವುಂಟುಮಾಡುತ್ತದೆ. ಆದರೆ ಅದಕ್ಕಿಂತಲೂ ಹೆಚ್ಚು ಸಂಕಟವಾಗುವುದು ಆ ವ್ಯಕ್ತಿ ತನ್ನ ಮೆಡಿಕಲ್ ಮತ್ತು ಆಸ್ಪತ್ರೆ ಬಿಲ್ ಪಾವತಿಸಲು ಪಡುವ ಕಷ್ಟವನ್ನು ನೋಡಿದಾಗ. ಯಾರಾದರೂ ಆಸ್ಪತ್ರೆಗೆ ಹೊರಡುತ್ತಿದ್ದಂತೆ ಜೇಬಿನಿಂದ ಎಷ್ಟು ಹಣ ಹೋಗತ್ತದೆಯೋ ಎಂದು ಊಹಿಸಿಕೊಂಡೇ ಅವರ ಎದೆಬಡಿತ ಹೆಚ್ಚತೊಡಗಿರುತ್ತದೆ. ಎಷ್ಟೋ ಕುಟುಂಬಗಳು ಆಸ್ಪತ್ರೆಯ ದುಬಾರಿ ದರಗಳನ್ನು ಭರಿಸಲಾಗದೇ ಸಾಲದ ಹೊಂಡದಲ್ಲಿ ಮುಳುಗಿಬಿಡುತ್ತವೆ. ಔಷಧಿಗಳ ಬೆಲೆಗಳು, ವೈದ್ಯರ ಶುಲ್ಕ, ಕಾಯಿಲೆ ಯಾವುದು ಎಂದು ಕಂಡುಹಿಡಿಯಲು ನಡೆಸುವ ತರಹೇವಾರಿ ಪರೀಕ್ಷೆಗಳ ದರಗಳು ಮತ್ತು ಆಸ್ಪತ್ರೆಯ ಶುಲ್ಕಗಳು ದಿನೇದಿನೇ ಏರುತ್ತಲೇ ಹೋಗುತ್ತಿರುವಾಗ ಮಧ್ಯಮ ವರ್ಗದ ಕುಟುಂಬಗಳು ತೀವ್ರಗತಿಯಲ್ಲಿ ವಿಪರೀತವಾಗಿ ಬಾಧೆಗೊಳಗಾಗುತ್ತಿವೆ.

ಸಧ್ಯದಲ್ಲಿ ಆರಂಭಗೊಳ್ಳಲಿರುವ ಮುಂಬರುವ ದಶಕದಲ್ಲಿ, ವೈದ್ಯಕೀಯ ಶುಲ್ಕಗಳ ವಿಪರೀತ ಹೆಚ್ಚಳವನ್ನು ಇಡೀ ಪ್ರಪಂಚವೇ ಅನುಭವಿಸಲಿದೆ. ಅದರಲ್ಲೂ ವಿಶೇಷವಾಗಿ ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಈ ದುಬಾರಿ ಆರೋಗ್ಯ ವೆಚ್ಚದ ಪರಿಣಾಮ ಹೆಚ್ಚಾಗಿರಲಿದೆ. ಇಂತಹ ಜ್ವಲಂತ ಸಮಸ್ಯೆಗೆ ಇರುವ ಪರಿಹಾರಗಳಾದರೂ ಏನು? ಇಂತಹ ಒಂದು ಖಾಯಿಲೆಯನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಏನಾಗಿರಬೇಕು?

ಪ್ರತಿ ವರ್ಷವೂ, ನಮ್ಮ ದೇಶದಲ್ಲಿ ಕನಿಷ್ಠ 7% ಕುಟುಂಬಗಳು ದುಬಾರಿ ವೈದ್ಯಕೀಯ ಶುಲ್ಕಗಳನ್ನು ಭರಿಸಲಾಗದೇ ಸಾಲದ ವಿಷಚಕ್ರಕ್ಕೆ ಸಿಲುಕಿ ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಮುಂಬರುವ ದಶಕದಲ್ಲಿ ವೈದ್ಯಕೀಯ ವೆಚ್ಚವು ವರ್ಷಕ್ಕೆ ಸರಾಸರಿ 5.5% ದರದಲ್ಲಿ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ!

  1. ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಹಂಗಿಲ್ಲದಂತೆ ಹೃದಯಾಘಾತ, ಕ್ಯಾನ್ಸರ್‍ ನಂತಹ ಭೀಕರ ಖಾಯಿಲೆಗಳಿಂದ ಬಾಧೆಗೊಳಗಾಗುವವರ ಸಂಖ್ಯೆ ಜಗತ್ತಿನಾದ್ಯಂತ ಹೆಚ್ಚುತ್ತಿದೆ.

  2. ಸುಲಭವಾಗಿ ಗುಣವಾಗದ ದೊಡ್ಡ ಖಾಯಿಲೆಗಳಿಗೆ ಗುಣಮಟ್ಟದ ಹಾಗೂ ಅತ್ಯಾಧುನಿಕ ಚಿಕಿತ್ಸೆಗಳಿಗೆ ತಗಲುವ ವೆಚ್ಚ ತೀರಾ ಹೆಚ್ಚಾಗಿದೆ.

  3. ಔಷಧಿಗಳ ಬೆಲೆಗಳು ಮತ್ತು ರೋಗ ಕಂಡುಹಿಡಿಯಲು ನಡೆಸುವ ವೈದ್ಯಕೀಯ ಪರೀಕ್ಷೆಗಳ ವೆಚ್ಚವೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ವೈದ್ಯಕೀಯ ವೆಚ್ಚದ ಶೇಕಡಾ 52ರಷ್ಟು ಹಣ ಕೇವಲ ಔಷಧಿ ಅಂಗಡಿಗಳಿಗೆ ಹೋಗುತ್ತಿದೆ.

  4. ವಯಸ್ಸಾದ ಜನರು ನಿರಂತರವಾಗಿ ಔಷಧೋಪಚಾರಗಳನ್ನು ಪಡೆದುಕೊಳ್ಳುತ್ತಿರುವುದರಿಂದ ವಯೋವೃದ್ಧರ ಔಷಧೋಪಚಾರದ ವೆಚ್ಚವೂ ದಿನೇ ದಿನೇ ಹೆಚ್ಚುತ್ತಿದೆ.

  5. ವ್ಯಕ್ತಿಯೊಬ್ಬನು ಸದೃಢವಾಗಿ, ಆರೋಗ್ಯವಾಗಿ ಇರುವವರೆಗೂ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುತ್ತದೆ. ಆದರೆ ಆ ವ್ಯಕ್ತಿ ಖಾಯಿಲೆ ಬಿದ್ದ ಕ್ಷಣದಲ್ಲಿ ಎಡೆಬಿಡದ ತೊಂದರೆಗಳು ಶುರುವಾಗುತ್ತವೆ. ವೈದ್ಯರಿಗೆ ಕೊಡಬೇಕಾದ ಶುಲ್ಕ, ರೋಗ ಪರೀಕ್ಷೆಯ ಶುಲ್ಕಗಳು, ಚಿಕಿತ್ಸೆಯ ವೆಚ್ಚಗಳು ಮತ್ತು ಮಾತ್ರೆ ಔಷಧಿಗಳ ವೆಚ್ಚಗಳು ಹೀಗೆ ಒಂದಾದ ಮೇಲೆ ಮತ್ತೊಂದರಂತೆ ವಿಪರೀತ ಹಣವನ್ನು ಖರ್ಚು ಮಾಡುತ್ತಾ ಆ ವ್ಯಕ್ತಿಯ ಇಡೀ ಕುಟುಂಬ ತೀರಿಸಲಾಗದ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತದೆ. ಒಂದು ಅಂದಾಜಿನ ಪ್ರಕಾರ ಖಾಯಿಲೆ ಬಿದ್ದು ಚಿಕಿತ್ಸೆಯ ವೆಚ್ಚವನ್ನು ಭರಿಸುವುದಕ್ಕಾಗಿ ಶೇಕಡಾ 20ರಷ್ಟು ರೋಗಿಗಳು ತಮ್ಮ ಆಸ್ತಿಪಾಸ್ತಿಗಳನ್ನು ಮಾರಿಕೊಳ್ಳುತ್ತಾರೆ. ಮುಂಬರಲಿರುವ ದಶಕದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಇವತ್ತಿನ ಪೀಳಿಗೆಯ ಜನರಿಗೆ ಇಂದು ಎದುರಾಗಿರುವ ದೊಡ್ಡ ಸವಾಲೇ ಇದಾಗಿದೆ. ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಆದಷ್ಟು ಹಗುರವಾಗಿ ನಿಭಾಯಿಸುವ ಸವಾಲು ಇಂದಿನವರ ಅತಿದೊಡ್ಡ ಸವಾಲಾಗಿದೆ.

  6. ಭಾರತೀಯ ವೈದ್ಯರೊಬ್ಬರು ತಾವು ಯುನೈಟೆಡ್ ಕಿಂಗ್ಡಂನಲ್ಲಿ (ಯು.ಕೆ) ಕೆಲಸ ಮಾಡಿ ಭಾರತಕ್ಕೆ ಮರಳಿದ ತಕ್ಷಣದಲ್ಲಿ ಅವರಿಗೆ ಬ್ರಿಟನ್ ಮತ್ತು ಭಾರತಗಳಲ್ಲಿ ವೈದ್ಯಕೀಯ ಚಿಕಿತ್ಸೆಗಳಲ್ಲಿ ಯಾವ ವ್ಯತ್ಯಾಸ ಗುರುತಿಸಿದ್ದೀರಿ ಎಂದು ಪ್ರಶ್ನಿಸಿದಾಗ ಅವರು ತಮ್ಮ ಅಚ್ಚರಿ ವ್ಯಕ್ತಪಡಿಸುತ್ತಾ ಉತ್ತರಿಸಿದ್ದರು. ಅವರ ಪ್ರಕಾರ ಬ್ರಿಟನ್ ನಲ್ಲಿ ಖಾಯಿಲೆ ಇದೆ ಎಂದು ರೋಗಿಯೊಬ್ಬರು ವೈದ್ಯರನ್ನು ಭೇಟಿ ಮಾಡಿದಾಗ ವೈದ್ಯರಾದವರು ಆ ಖಾಯಿಲೆ ಯಾವುದೆಂದು ಕಂಡು ಹಿಡಿಯಲು ತಮ್ಮ ಗಮನ ನೀಡುತ್ತಾರಲ್ಲದೆ ಆ ರೋಗಿಗೆ ಚಿಕಿತ್ಸೆ ನೀಡಬಹುದಾದ ಅತ್ಯುತ್ತಮ ದಾರಿ ಯಾವುದು ಮತ್ತು ಅದಕ್ಕೆ ಅಗತ್ಯವಿರುವ ರೋಗ ಕಂಡುಹಿಡಯುವ ಪರೀಕ್ಷೆಗಳು ಯಾವುದು ಎಂಬ ಬಗ್ಗೆ ಗಮನ ನೀಡುತ್ತಾರೆ. ಆದರೆ ಭಾರತದಲ್ಲಿ ಇಂತಹುದೇ ಸನ್ನಿವೇಶದಲ್ಲಿ ವೈದ್ಯರ ಮನಸ್ಸಿನಲ್ಲಿ ಬರುವ ವಿಷಯವೇನೆಂದರೆ ರೋಗಿಯ ಹಣಕಾಸು ಸ್ಥಿತಿ ಏನು, ಅವನ ಅಂತಸ್ತು ಯಾವುದು, ಅವನಿಗೆ ಆಸ್ತಿ ಎಷ್ಟಿದೆ, ಚಿಕಿತ್ಸೆಗೆ ಹಣ ಭರಿಸಲು ಅವನಿಗೆ ಸಾಧ್ಯವಿದೆಯೇ ಅಥವಾ ದೇಶದಲ್ಲಿ ಚಾಲ್ತಿಯಲ್ಲಿರುವ ಯಾವುದಾದರೂ ಸರ್ಕಾರಿ ಸ್ಕೀಮಿನಲ್ಲಿ ಅವನ ಚಿಕಿತ್ಸೆಯ ಹಣವನ್ನು ಪಡೆದುಕೊಳ್ಳಬಹುದೇ ಇಂತಹುದೇ ವಿಚಾರಗಳು ಭಾರತದ ವೈದ್ಯರ ಮನಸ್ಸಿಗೆ ಬರುತ್ತವೆ. “ನನಗೆ ಕಾಣಿಸಿರುವ ಪ್ರಮುಖ ವ್ಯತ್ಯಾಸ ಇದೇ ಆಗಿದೆ” ಎಂದು ಅವರು ಹೇಳುತ್ತಾರೆ. ಇಂದು ಭಾರತದಲ್ಲಿ ವೈದ್ಯಕೀಯ ಕ್ಷೇತ್ರದ ಸ್ಥಿತಿಗತಿ ಹೇಗಿದೆ ಎಂದು ಅರ್ಥಮಾಡಿಕೊಳ್ಳಲು ಈ ವೈದ್ಯರ ಒಂದು ಹೇಳಿಕೆಯೇ ಸಾಕು. “ದೇಶದಲ್ಲಿನ 70% ರೋಗಿಗಳು ಖಾಸಗಿ ವೈದ್ಯಕೀಯ ಸೇವೆಯನ್ನೇ ಅವಲಂಬಿಸಬೇಕಾಗಿದೆ, ಇವರಲ್ಲಿ ಬಹುತೇಕರಿಗೆ ಯಾವುದೇ ವೈದ್ಯಕೀಯ ವಿಮೆಗಳೂ ಇರುವುದಿಲ್ಲ. ಡೆಂಗ್ಯೂ ಜ್ವರದಂತಹ ಖಾಯಿಲೆಗೆ ಚಿಕಿತ್ಸೆ ನೀಡುವಾಗಲೂ ಎಷ್ಟೋ ಕುಟುಂಬಗಳಿಗೆ ಅದರ ವೆಚ್ಚವನ್ನು ಭರಿಸಲಾಗದೇ ಸಾಲ ಕೇಳುವ ಸ್ಥಿತಿಗೆ ನೂಕಲ್ಪಡುತ್ತಿದ್ದಾರೆ.

ನಾವೇನು ಮಾಡಬಹುದು?

ಸಮಾಜದಲ್ಲಿರುವ ಶ‍್ರೀಮಂತ ವರ್ಗಕ್ಕೆ ವೈದ್ಯಕೀಯ ವೆಚ್ಚಗಳನ್ನು ಭರಿಸುವುದು ಒಂದು ಸಮಸ್ಯೆಯೇ ಅಲ್ಲ. ಬಡ ವರ್ಗಗಳಿಗೂ ಆರೋಗ್ಯ ಶ್ರೀ, ಆಯುಷ್ಮಾನ್ ಭಾರತ್ ಮೊದಲಾದ ಯೋಜನೆಗಳಿದ್ದು ಅವರ ವೆಚ್ಚವನ್ನು ಸರ್ಕಾರಗಳು ಭರಿಸುತ್ತವೆ. ಖಾಸಗಿ ಮತ್ತು ಸರ್ಕಾರಿ ನೌಕರರಿಗೂ ವೈದ್ಯಕೀಯ ವಿಮೆಗಳಿದ್ದು ಅವುಗಳ ಮೂಲಕ ಅವರ ವೈದ್ಯಕೀಯ ಚಿಕಿತ್ಸೆಗಳ ವೆಚ್ಚ ಭರ್ತಿಯಾಗುತ್ತದೆ. ಆದರೆ ಈ ಎಲ್ಲ ವರ್ಗಗಳು ಪಡೆಯುವ ಅನುಕೂಲತೆಗಳಿಂದ ಹೊರಕ್ಕಿರುವ ಮಧ್ಯಮ ವರ್ಗದ ನಾಗರಿಕರಿದ್ದಾರಲ್ಲ ಅವರಿಗೆ ಹಣ ಪಾವತಿಗೆ ಯಾವುದೇ ಸಹಾಯವಿರುವುದಿಲ್ಲ. ಅವರು ಮಾಡಿದ ವೈದ್ಯಕೀಯ ವೆಚ್ಚಕ್ಕೆ ಹಿಂದಿನಿಂದ ಯಾವುದಾದರೂ ಯೋಜನೆಗಳ ಮೂಲಕ ಮೂಲಕ ಭರಿಸೋಣವೆಂದರೆ ಅದಕ್ಕೂ ಅವಕಾಶವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ದಶಕದಲ್ಲಿ ಅಗಾಧವಾಗಿ ಹೆಚ್ಚಲಿರುವ ವೈದ್ಯಕೀಯ ವೆಚ್ಚಗಳನ್ನು ನಿಭಾಯಿಸುವುದು ನಮಗೆ ಬಹಳ ಮುಖ್ಯವಾಗಿದೆ.

ಆರೋಗ್ಯ ಪ್ರಜ್ಞೆ

ಆರೋಗ್ಯದ ಸಮಸ್ಯೆಗಳ ವಿಷಯದಲ್ಲಿ ಹೆಚ್ಚೆಚ್ಚು ತಿಳುವಳಿಕೆ ಪಡೆದುಕೊಳ್ಳುವುದು ಕಾಯಿಲೆಗಳು ದೇಹಕ್ಕೆ ಅಂಟಿಕೊಳ್ಳುವುದಕ್ಕೆ ಮೊದಲೇ ಮುನ್ನೆಚ್ಚರಿಕೆ ವಹಿಸಿ ರೋಗ ಬರುವುದನ್ನು ತಡೆಯಲು ಸಹಾಯವಾಗುತ್ತದೆ. ಆರೋಗ್ಯ ಕಾಪಾಡಿಕೊಳ್ಳುವುದು ಎಂದರೆ ಏನು, ಆಹಾರದಲ್ಲಿ ಪೌಷ್ಟಿಕತೆ ಕಾಪಾಡಿಕೊಳ್ಳುವುದು ಹೇಗೆ, ನಿರಂತರ ವ್ಯಾಯಾಮದಿಂದ ಆಗುವ ಪ್ರಯೋಜನೆವೆನು, ಶುಚಿತ್ವ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಮತ್ತು ಕಾಯಿಲೆ ಕಸಾಲೆ ಬರದಂತೆ ತಡೆಯುವುದು ಹೇಗೆ ಮುಂತಾದ ವಿಷಯಗಳ ಕುರಿತು ಪ್ರತಿಯೊಬ್ಬರಿಗೂ ಸಂಪೂರ್ಣ ಅರಿವು ಇರಬೇಕು. ಬಾಲ್ಯದಿಂದಲೇ ಈ ತಿಳುವಳಿಕೆಯನ್ನು ನಾವು ಮಕ್ಕಳಿಗೆ ನೀಡಬೇಕಿರುತ್ತದೆ.

ಮುಂಚಿತ ಆರೋಗ್ಯ ತಪಾಸಣೆಗಳು

ಪ್ರತಿ ವರ್ಷವೂ ಕೆಲವರು ವೈದ್ಯಕೀಯ ಮುಂಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದರಿಂದ ಬಹಳ ಲಾಭವಿದೆ. ಖಾಯಿಲೆ ಬಂದ ಮೇಲೆ ಆಸ್ಪತ್ರೆಗಳಿಗೆ ಎಡತಾಕುವುದಕ್ಕಿಂತ ಮೊದಲೇ ಆರೋಗ್ಯ ತಪಾಸೆಣೆ ಮಾಡಿಕೊಳ್ಳುವುದರಿಂದ ಮುಂದೆ ಬರಬಹುದಾದ ಕಾಯಿಲೆಗಳನ್ನು ತಡೆಯಬಹುದು. ಇಂತಹ ಮುಂಚಿತ ಪರೀಕ್ಷೆಗಳು ಕ್ಯಾನ್ಸರ್ ಒಳಗೊಂಡಂತೆ ಕೆಲವು ಗಂಭೀರ ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಕೆಲವೊಮ್ಮೆ ದೇಹಕ್ಕೆ ಕಾಯಿಲೆ ಬಂದಿರುವುದು ತಿಳಿಯದೇ ಹೋಗುವ ಸಂಭವವಿದ್ದು ಎಷ್ಟೋ ಸಮಯವಾಗಿ ಗುಣಪಡಿಲಾಗದ ಮಟ್ಟ ತಲುಪಿದ ಮೇಲೆ ನಮಗೆ ಗೊತ್ತಾಗುತ್ತದೆ. ಆದರೆ ಆಗ ಸಮಯ ಮೀರಿರುತ್ತದೆ. ಕಾಲಕಾಲಕ್ಕೆ ನಡೆಸುವ ಮುಂಚಿತ ಆರೋಗ್ಯ ತಪಾಸಣೆಗಳಿಂದ ಇದನ್ನು ತಡೆಯಬಹುದು. ಇಂದು ನೌಕರ ವರ್ಗದ ಕುಟುಂಬಗಳು ಮತ್ತು ಉತ್ತಮ ಶಿಕ್ಷಣ ಪಡೆದಿರುವ ಕುಟುಂಬಗಳು ಮಾತ್ರ ಈ ಮುಂಚಿತ ಆರೋಗ್ಯ ತಪಾಸಣೆಗಳನ್ನು ಕೈಗೊಳ್ಳುತ್ತಾರೆ. ಆದರೆ ಪ್ರತಿಯೊಂದು ಬಡ ಕುಟುಂಬವೂ ಇಂತಹ ಆರೋಗ್ಯ ತಪಾಸಣೆ ಕೈಗೊಳ್ಳಬೇಕಾಗಿದೆ.

ಆರೋಗ್ಯ ವಿಮೆ

ಇಂದು ವೈದ್ಯಕೀಯ ವೆಚ್ಚಗಳನ್ನು ಭರಿಸುವ ಏಕೈಕ ಮುಖ್ಯ ಮೂಲವೇ ವೈದ್ಯಕೀಯ ಅಥವಾ ಆರೋಗ್ಯ ವಿಮೆಯಾಗಿದೆ. ದೇಶದಲ್ಲಿರುವ ಒಟ್ಟು ವೈದ್ಯಕೀಯ ವಿಮಾ ಪಾಲಿಸಿಗಳ ಸಂಖ್ಯೆ 2.07 ಕೋಟಿ; ಫಲಾನುಭವಿಗಳ ಸಂಖ್ಯೆ 47.20 ಕೋಟಿ. ಸರ್ಕಾರಿ ನೌಕರರು ಮತ್ತು ಬಡವರ ವೆಚ್ಚವನ್ನು ಸರ್ಕಾರಗಳು ಮತ್ತು ಖಾಸಗಿ/ಸಾರ್ವಜನಿಕ ಕಂಪನಿಗಳು ಭರಿಸುತ್ತಿವೆ. ಮಿಕ್ಕ 80 ಮಿಲಿಯನ್ ಜನರಿಗೆ ಯಾವುದೇ ವೈದ್ಯಕೀಯ ವಿಮೆಯಿಲ್ಲ. ಇವರಲ್ಲಿ ಹಲವರು ಆರೋಗ್ಯ ವಿಮೆ ಮಾಡಿಸಿ ವಿಮೆಯ ಕಂತನ್ನು ಮೊದಲ 2-3 ವರ್ಷ ಕಟ್ಟುತ್ತಾರೆ, ನಂತರ ಸರಿಯಾಗಿ ಕಂತು ಕಟ್ಟಲಾರದೇ ನಿಲ್ಲಿಸಿಬಿಡುತ್ತಾರೆ. ಇದರಿಂದ ವಿಮೆ ನಷ್ಟವಾಗುತ್ತದೆ. ಆದರೆ ಖಾಯಿಲೆ ಬಂದಾಗ ಚಿಕಿತ್ಸೆಗೆ ನೀಡುವ ಹಣದ ಮೊತ್ತಕ್ಕಿಂತ ವೈದ್ಯಕೀಯ ವಿಮೆಯ ಕಂತಿನ ಮೊತ್ತ ಯಾವಾಗಲೂ ಕಡಿಮೆ ಇರುತ್ತದೆ ಎಂಬುದನ್ನು ಗುರುತಿಸಬೇಕು.

ಇದು ನಮ್ಮ ಸಧ್ಯದ ಸ್ಥಿತಿ (ಹಲವಾರು ಸಮೀಕ್ಷೆಗಳನ್ನು ಅವಲಂಬಿಸಿದೆ)

  • 2000-2014ರ ನಡುವೆ ಜನರ ಆರೋಗ್ಯ ವೆಚ್ಚದಲ್ಲಿ ಆಗಿರುವ ಹೆಚ್ಚಳ ಬರೋಬ್ಬರಿ 370%ನಷ್ಟು;

  • ಮುಂದಿನ ದಶಕದಲ್ಲಿ ಇದು ಇನ್ನೂ ಎಷ್ಟು ನೂರು ಪಟ್ಟು ಹೆಚ್ಚಾಗಲಿದೆ ಎಂಬುದನ್ನು ಊಹಿಸಿಕೊಳ್ಳುವುದೂ ಅಸಾಧ್ಯವಾಗಿದೆ.

  • ಬೇರೆ ಬೇರೆ ದೇಶಗಳಲ್ಲಿ ವೈದ್ಯಕೀಯ ವೆಚ್ಚದಲ್ಲಿ ಸರ್ಕಾರ ಭರಿಸುವ ಪಾಲು ಇಂತಿದೆ:

  • ಬ್ರಿಟನ್ 83%, ಚೀನಾ 56%, ಅಮೆರಿಕ 48%, ಬ್ರಜಿಲ್ 46% ಇಂಡೊನೇಶಿಯಾ 39%, ಭಾರತ 30%

(ಮಿಕ್ಕ ಪ್ರತಿಯೊಂದಕ್ಕೂ ತಮ್ಮ ಜೇಬಿನಿಂದಲೇ ಭರಿಸಬೇಕು)

  • ಜನರಲ್ಲಿ ತಾವಾಗಿಯೇ ವೈದ್ಯಕೀಯ ವೆಚ್ಚಗಳನ್ನು ಭರಿಸಬಹುದಾದವರ ಶೇಕಡಾವಾರು ಪ್ರಮಾಣ

  • ಅಮರಿಕದಲ್ಲಿ 13.4%, ಬ್ರಿಟನ್ ನಲ್ಲಿ 10%, ಚೀನಾದಲ್ಲಿ 13.4%, ನಮ್ಮ ದೇಶದ 62% (ಇದಕ್ಕೆ ಕಾರಣ ವೈದ್ಯಕೀಯ ವಿಮೆಯ ಕೊರತೆ, ಇದರಲ್ಲಿ ಎಲ್ಲಾ ಖಾಯಿಲೆಗಳೂ ಒಳಗೊಳ್ಳುವುದಿಲ್ಲ)

  • ಕಳೆದ ವರ್ಷ ಸರ್ಕಾರವು ಸರಾಸರಿ ತಲಾ 1657 ರೂಪಾಯಿಗಳನ್ನು ವೆಚ್ಚ ಮಾಡಿತ್ತು.

  • ಖಾಸಗಿಯಾಗಿ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುವ ಜನರಲ್ಲಿ ಕಳೆದ ವರ್ಷ ದಾಖಲಾಗಿರುವ ಸರಾಸರಿ ವೆಚ್ಚ 31,845 ರೂಪಾಯಿಗಳು.

---------- Forwarded message ---------
From: Harshakumar Kugwe <mailharsha09@gmail.com>
Date: Thu, Dec 26, 2019, 09:19
Subject: Re: Please translate it ASAP
To: Ravi S <ravi.s@etvbharat.com>, <englishdesk@etvbharat.com>

English title: Let’s treat medical expenses before treating the actual illness..
Word Count- 830

PFA

--
Regards,

Harshakumar Kugwe
http://hasirele.blogspot.in/
Cell: 9008401873
ETV Bharat Logo

Copyright © 2025 Ushodaya Enterprises Pvt. Ltd., All Rights Reserved.