ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆಗೆ ಸಜ್ಜಾಗಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಂದ್ರಯಾನ-2ರ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.
ಎರಡನೇ ಬಾರಿಗೆ ಚಂದ್ರನ ಅಂಗಳಕ್ಕೆ ಕಾಲಿಡಲು ಸಜ್ಜಾಗಿರುವ ಇಸ್ರೋ ನಿಗದಿಯಂತೆ ಇದೇ ತಿಂಗಳ 15ಕ್ಕೆ ರಾಕೆಟ್ ಉಡಾವಣೆ ಮಾಡಬೇಕಿತ್ತು. ಕೊನೇ ಕ್ಷಣದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಉಡಾವಣೆಯನ್ನು ಮುಂದೂಡಲಾಗಿತ್ತು.
ಚಂದ್ರಯಾನ-2ರ ಉಡಾವಣಾ ರಿಹರ್ಸಲ್ ಯಶಸ್ವಿ... ನಾಳೆ ನಭಕ್ಕೆ ಹಾರಲಿದೆ ನೌಕೆ!
ಆಂಧ್ರ ಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ (ಜುಲೈ 22)ರ ಮಧ್ಯಾಹ್ನ 2.43ಕ್ಕೆ ಚಂದ್ರಯಾನ-2ರ ರಾಕೆಟ್ ನಭಕ್ಕೆ ಜಿಗಿಯಲಿದೆ. ಈ ನಿಟ್ಟಿನಲ್ಲಿ ಇಂದು ಸಂಜೆ 6.43ಕ್ಕೆ ಕ್ಷಣಗಣನೆ ಆರಂಭಿಸಲಾಗಿದೆ.
-
🇮🇳 #ISROMissions 🇮🇳
— ISRO (@isro) 21 July 2019 " class="align-text-top noRightClick twitterSection" data="
The launch countdown of #GSLVMkIII-M1/#Chandrayaan2 commenced today at 1843 Hrs IST. The launch is scheduled at 1443 Hrs IST on July 22nd.
More updates to follow... pic.twitter.com/WVghixIca6
">🇮🇳 #ISROMissions 🇮🇳
— ISRO (@isro) 21 July 2019
The launch countdown of #GSLVMkIII-M1/#Chandrayaan2 commenced today at 1843 Hrs IST. The launch is scheduled at 1443 Hrs IST on July 22nd.
More updates to follow... pic.twitter.com/WVghixIca6🇮🇳 #ISROMissions 🇮🇳
— ISRO (@isro) 21 July 2019
The launch countdown of #GSLVMkIII-M1/#Chandrayaan2 commenced today at 1843 Hrs IST. The launch is scheduled at 1443 Hrs IST on July 22nd.
More updates to follow... pic.twitter.com/WVghixIca6
ಚಂದ್ರಯಾನ-2ರ ಉಡಾವಣೆಗೆ ಈಗಾಗಲೇ ನಡೆಸಲಾದ ರಿಹರ್ಸಲ್ ಯಶಸ್ವಿಯಾಗಿದೆ. ಜುಲೈ 22ರಂದು ಉಡಾವಣೆಯಾಗಲಿರುವ ಚಂದ್ರಯಾನ-2 ರಾಕೆಟ್ ಸೆಪ್ಟೆಂಬರ್ 6ರಂದು ಚಂದ್ರನ ಅಂಗಳಕ್ಕೆ ಕಾಲಿಡಲಿದೆ.