ಬೆಂಗಳೂರು: ಯಾರೂ ಅನ್ವೇಷಿಸದ ಚಂದ್ರನ ದಕ್ಷಿಣ ಧ್ರುವವನ್ನ ಅನ್ವೇಷಿಸಲು ಹೊರಟ ಚಂದ್ರಯಾನ-2 ಒಂದು ಸಂಕೀರ್ಣವಾದ ಪ್ರಯತ್ನವಾಗಿದ್ದು, ಇದರಲ್ಲಿ ನಾವು ಶೇ. 95ರಷ್ಟು ಯಶಸ್ಸು ಸಾಧಿಸಿದ್ದೇವೆ ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.
-
#Chandrayaan2 mission was a highly complex mission, which represented a significant technological leap compared to the previous missions of #ISRO to explore the unexplored south pole of the Moon.
— ISRO (@isro) September 7, 2019 " class="align-text-top noRightClick twitterSection" data="
For more updates please visit https://t.co/4vIrztVnng
">#Chandrayaan2 mission was a highly complex mission, which represented a significant technological leap compared to the previous missions of #ISRO to explore the unexplored south pole of the Moon.
— ISRO (@isro) September 7, 2019
For more updates please visit https://t.co/4vIrztVnng#Chandrayaan2 mission was a highly complex mission, which represented a significant technological leap compared to the previous missions of #ISRO to explore the unexplored south pole of the Moon.
— ISRO (@isro) September 7, 2019
For more updates please visit https://t.co/4vIrztVnng
ಚಂದ್ರಯಾನ-2 ಒಂದು ಸಂಕೀರ್ಣವಾದ ಮಿಷನ್ ಆಗಿದ್ದು, ಈ ಹಿಂದಿನ ಇಸ್ರೋ ಮಿಷನ್ಗಳಿಗೆ ಹೋಲಿಕೆ ಮಾಡಿದರೆ ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ಗಳನ್ನ ಹೊತ್ತು ಸಾಗಿದ ಚಂದ್ರಯಾನ-2 ಅಧಿಕ ತಾಂತ್ರಿಕ ಕ್ಲಿಷ್ಟತೆಯನ್ನ ಹೊಂದಿತ್ತು. ಜುಲೈ 22ರಂದು ಚಂದ್ರಯಾನ-2 ಉಡಾವಣೆ ಆದಾಗಿನಿಂದ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಹಲವು ನಿರೀಕ್ಷೆಗಳಿಂದ ಎದುರು ನೋಡುತ್ತಿತ್ತು.
ಇದು ಚಂದ್ರನ ಒಂದು ಪ್ರದೇಶವನ್ನು ಮಾತ್ರವಲ್ಲದೆ, ಚಂದ್ರನ ಮೇಲ್ಮೈ ಮತ್ತು ಚಂದ್ರನ ಉಪ-ಮೇಲ್ಮೈ ಸೇರಿದಂತೆ ಒಂದೇ ಮಿಷನ್‌ನಲ್ಲಿ ಎಲ್ಲವನ್ನ ಅಧ್ಯಯನ ಮಾಡುವ ಗುರಿ ಹೊಂದಿತ್ತು. ಈಗಾಗಲೇ ಆರ್ಬಿಟರ್ಅನ್ನು ಚಂದ್ರನ ಸುತ್ತ ಅದರ ಉದ್ದೇಶಿತ ಕಕ್ಷೆಯಲ್ಲಿ ಇರಿಸಲಾಗಿದೆ. ಅದರಲ್ಲಿನ ಎಂಟು ಅತ್ಯಾಧುನಿಕ ವೈಜ್ಞಾನಿಕ ಸಾಧನಗಳನ್ನು ಬಳಸಿ ಧ್ರುವ ಪ್ರದೇಶಗಳಲ್ಲಿನ ಖನಿಜಗಳು, ನೀರಿನ ಅಣುಗಳು, ಚಂದ್ರನ ವಿಕಾಸ ಮತ್ತು ನಕ್ಷೆಯ ಬಗ್ಗೆ ಅಧ್ಯಯನ ಮಾಡಲು ಸಹಕಾರಿಯಾಗಲಿದೆ.
ಈ ಆರ್ಬಿಟರ್ನಲ್ಲಿ ಇಲ್ಲಿಯವರೆಗೆ ಯಾವುದೇ ಚಂದ್ರಯಾನದಲ್ಲಿ ಬಳಸದ ಅತ್ಯಾದುನಿಕ ಕ್ಯಾಮರಾ(0.03m) ಅಳವಡಿಸಲಾಗಿದ್ದು, ಜಾಗತಿಕ ವಿಜ್ಞಾನ ಸಮುದಾಯಕ್ಕೆ ಉತ್ಕೃಷ್ಟ ಛಾಯಾಚಿತ್ರಗಳನ್ನ ಒದಗಿಸಲಿದೆ. ಉದ್ದೇಶಿತ ಒಂದು ವರ್ಷದ ಬದಲು 7 ವರ್ಷ ಕಾರ್ಯಾಚರಣೆ ನಡೆಸಲಿದೆ.
ಇನ್ನು ವಿಕ್ರಮ್ ಲ್ಯಾಂಡರ್ ತನ್ನ ಕಕ್ಷೆಯಿಂದ 35 ಕಿಲೋ ಮೀಟರ್ನಿಂದ ಚಂದ್ರನ ಮೇಲ್ಮೈಯಿಂದ ಕೇವಲ 2 ಕಿಲೋ ಮೀಟರ್ವರೆಗೆ ತಲುಪುವವರೆಗೂ ಮೂಲದ ಪಥದಲ್ಲೇ ಸಾಗಿದೆ. ಈ ವೇಳೆ ಲ್ಯಾಂಡರ್‌ನ ಎಲ್ಲಾ ವ್ಯವಸ್ಥೆಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದವು.
ಯಶಸ್ಸಿನ ಮಾನದಂಡಗಳನ್ನು ಮಿಷನ್‌ನ ಪ್ರತಿಯೊಂದು ಹಂತಕ್ಕೂ ವ್ಯಾಖ್ಯಾನಿಸಲಾಗಿದೆ. ಈ ಯತ್ನದಲ್ಲಿ ಇಲ್ಲಿಯವರೆಗೆ ಶೇ. 90ರಿಂದ 95ರಷ್ಟು ಯಶಸ್ಸು ಸಾಧಿಸಲಾಗಿದೆ. ಲ್ಯಾಂಡರ್ನೊಂದಿಗೆ ಸಂಪರ್ಕ ಕಳೆದುಕೊಂಡ ಹೊರತಾಗಿಯೂ ಚಂದ್ರ ವಿಜ್ಞಾನಕ್ಕೆ ನಮ್ಮ ಕೊಡುಗೆ ನೀಡುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.