ETV Bharat / bharat

ಪತಿ-ಪತ್ನಿ ಕೊರೊನಾ ವಾರಿಯರ್ಸ್​... 7 ವರ್ಷದ ಮಗನನ್ನು ಒಂಟಿಯಾಗೇ ಬಿಡಲು ಹೆತ್ತಮ್ಮನ ಸಂಕಟ - ಡಾ. ಸಂಜಯ್ ಜಸ್ವಾಲ್

ಡಾ. ಗೀತಿಕಾ ಸಿಂಗ್ ಅವರ ಪತಿಯನ್ನು ನಗರದ COVID-19 ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಗೀತಿಕಾ ಕೂಡ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದಾರೆ. ಇದೀಗ ಅವರಿಗೆ 7 ವರ್ಷದ ಮಗನ ಚಿಂತೆ ಕಾಡುತ್ತಿದೆ. ಕೊರೊನಾ ತಂದಿಟ್ಟ ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಡಾ. ಗೀತಿಕಾ ಸಿಂಗ್​.

ಕೊರೊನಾ ಯೋಧನ ಪತ್ನಿ
ಕೊರೊನಾ ಯೋಧನ ಪತ್ನಿ
author img

By

Published : Apr 21, 2020, 7:29 PM IST

Updated : Apr 21, 2020, 7:46 PM IST

ಚಂಡೀಗಢ (ಪಂಜಾಬ್): ಮಹಾಮಾರಿ ಕೊರೊನಾ ವೈರಸ್​ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಬಹುತೇಕ ಕುಟುಂಬಸ್ಥರು ಲಾಕ್​ಡೌನ್​ನಿಂದ ಮನೆಯಲ್ಲೇ ಒಟ್ಟಿಗೆ ಬೆರೆತು, ಸಂತಸದಿಂದ ಇದ್ದಾರೆ. ಆದರೆ ವೈದ್ಯರು, ಭದ್ರತಾ ಸೇವೆಯಲ್ಲಿರುವ ಸಿಬ್ಬಂದಿಗೆ ಮಾತ್ರ ಇತರರ ಜೀವ ರಕ್ಷಣೆಗೆ ಜೀವ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ.

ಹೌದು, ಕೊರೊನಾ ವೈರಸ್​ ವಿರುದ್ಧದ ಯುದ್ಧವೂ ಮುಂದುವರೆದಿದೆ. ಈ ಹೋರಾಟದಲ್ಲಿ ಭಾಗಿಯಾಗಿರುವ ವೈದ್ಯರು, ಪೊಲೀಸರು, ನರ್ಸ್​ಗಳು ತಮ್ಮ ಪ್ರಾಣ ಮತ್ತು ಕುಟುಂಬವನ್ನು ಲೆಕ್ಕಿಸದೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹೋರಾಟದಲ್ಲಿ ಭಾಗಿಯಾಗಿರುವ ವೈದ್ಯರೊಬ್ಬರ ಪತ್ನಿ ಕೂಡ ವೈದ್ಯೆಯಾಗಿದ್ದು, ತಾವಿಬ್ಬರೂ ಕರ್ತವ್ಯಕ್ಕೆ ತೆರಳಿದಾಗ ಮನೆಯಲ್ಲಿ 7 ವರ್ಷದ ಮಗನನ್ನು ಒಬ್ಬಂಟಿಯಾಗಿ ಮನೆಯಲ್ಲಿ ಬಿಟ್ಟೋಗುತ್ತಿದ್ದೇವೆ. ಮತ್ತೊಂದೆಡೆ ಪತಿ ಕೂಡ ಹಲವು ದಿನಗಳಿಂದ ಸೇವಾನಿರತರಾಗಿದ್ದು, ಸೋಂಕಿನ ಭಯದಿಂದ ಅವರೊಂದಿಗೆ ಬೆರೆಯಲು ನಮಗೆ ಆಗುತ್ತಿಲ್ಲ ಎಂದು ಸುದ್ದಿ ಸಂಸ್ಥೆಯೊಂದಿಗೆ ನೋವನ್ನು ಬಿಚ್ಚಿಟ್ಟಿದ್ದಾರೆ.

ಪತಿ-ಪತ್ನಿ ಕೊರೊನಾ ವಾರಿಯರ್ಸ್

ಡಾ. ಗೀತಿಕಾ ಸಿಂಗ್ ಅವರ ಪತಿಯನ್ನು ನಗರದ COVID-19 ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅವರು ತಮ್ಮ ಗಂಡನನ್ನು ಕಳೆದ 17 ದಿನಗಳಿಂದ ನೋಡಿಲ್ಲ ಮತ್ತು ತಮ್ಮ ಕೆಲಸದ ನಡುವೆ ಅಪ್ರಾಪ್ತ ಮಗನನ್ನು ನೋಡಿಕೊಳ್ಳಲು ಯಾರೂ ಸಹ ಮುಂದೆ ಬರುತ್ತಿಲ್ಲ ಎಂದು ಭಾವುಕರಾದರು.

ಸಿಂಗ್ ಅವರ ಪತಿ ಡಾ. ಸಂಜಯ್ ಜಸ್ವಾಲ್ ಅವರನ್ನು ಚಂಡೀಗಢದ (ಪಿಜಿಐಎಂಆರ್) ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇನ್ನೂ ಆರು ದಿನಗಳ ಬಳಿಕ ಅವರು ಮನೆಗೆ ಮರಳುವ ನಿರೀಕ್ಷೆಯಿದೆ. ಅದೂ ಕೂಡ ಜಸ್ವಾಲ್ ಅವರನ್ನು ಕೆಲವು ದಿನಗಳವರೆಗೆ ಕ್ವಾರಂಟೈನ್​ನಲ್ಲಿ ಇಡಲಾಗುತ್ತದೆ. ಈ ವೇಳೆ ಅವರಲ್ಲಿ ಕೊರೊನಾ ನೆಗೆಟಿವ್​​ ಎಂದು ಕಂಡುಬಂದರೇ ಮಾತ್ರ ಮನೆಗೆ ಕಳುಹಿಸಲಾಗುತ್ತದೆ. ಹಾಗಾಗಿ ವರದಿಯಲ್ಲಿ ನೆಗೆಟಿವ್​​ ಬರಲೆಂದು ಆಶಿಸುತ್ತೇನೆ ಎಂದು ಅವರ ಪತ್ನಿ ಪ್ರಾರ್ಥಿಸಿದರು.

'ನಾನು ರೋಗಿಗಳನ್ನು ನೋಡಲು ಹೋಗುವಾಗಲೆಲ್ಲಾ, ನನ್ನ ಮಗುವನ್ನು ಮನೆಯಲ್ಲಿಯೇ ಬಂಧಿಸಿಡಬೇಕು. ಅವನಿಗೆ 7 ವರ್ಷ ಅಷ್ಟೇ, ಕೊರೊನಾ ಭಯದಿಂದ ಜನರು ಭಯಭೀತರಾಗಿ, ತಮ್ಮ ಜೊತೆ ಅವನನ್ನು ಇರಿಸಿಕೊಳ್ಳಲು ಮುಂದೆ ಬರುವುದಿಲ್ಲ' ಎಂದು ಹೇಳುವ ಮುಖೇನ ತಮ್ಮ ಪರಿಸ್ಥಿತಿ ಹೇಗಿದೆ ಎಂಬುದನ್ನು ವಿವರಿಸಿದರು.

Last Updated : Apr 21, 2020, 7:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.