ವಾರಣಾಸಿ (ಉತ್ತರ ಪ್ರದೇಶ): ಅನಾರೋಗ್ಯದಿಂದ ಬಳಲುತ್ತಿದ್ದ ಗರ್ಭಿಣಿ ನಾಯಿಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಬಿಹೆಚ್ಯು ಆಸ್ಪತ್ರೆ ವೈದ್ಯರು ಸಿಸೇರಿಯನ್ ಹೆರಿಗೆ ಮಾಡಿಸಿದ್ದಾರೆ.
ಲ್ಯಾಬ್ರಡಾರ್ ರಿಟ್ರೈವರ್ ತಳಿಯ ನಾಯಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ನಾಯಿ ಹಾಗೂ ಅದರ ಗರ್ಭದಲ್ಲಿದ್ದ ಮರಿಗಳು ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆಯಿತ್ತು. ಹೀಗಾಗಿ ಬಿಹೆಚ್ಯು ಆಸ್ಪತ್ರೆಯ ಪಶುವೈದ್ಯರ ಬಳಿ ನಾಯಿಯನ್ನು ಅದರ ಮಾಲೀಕ ಕರೆತಂದಿದ್ದಾರೆ.
ಇದನ್ನೂ ಓದಿ: ತಾಯಿ, ಮಕ್ಕಳ ಪೋಷಣೆಗೆ ಆದ್ಯತೆ ನೀಡುವಲ್ಲಿ ಎಡವಿತಾ ಸರ್ಕಾರ?
ಪಶುವೈದ್ಯ ಎನ್‌ಕೆ ಸಿಂಗ್ ಅವರ ನೇತೃತ್ವದಲ್ಲಿ ವೈದ್ಯರ ತಂಡ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಸೇರಿ ನಾಯಿಗೆ ಶಸ್ತ್ರಚಿಕಿತ್ಸೆ ಮಾಡಿ ಹೆರಿಗೆ ಮಾಡಿಸಿದ್ದಾರೆ. 9 ಮರಿಗಳಿಗೆ ಲ್ಯಾಬ್ರಡಾರ್ ರಿಟ್ರೈವರ್ ಜನ್ಮ ನೀಡಿದೆ.