ETV Bharat / bharat

ಒನ್ ನೇಷನ್ - ಒನ್ ರೇಷನ್​ ಕಾರ್ಡ್​ ಅನುಷ್ಠಾನಕ್ಕೆ 2020 ಡೆಡ್​ಲೈನ್​:  ಎಲ್ಲೇ ಇದ್ದರೂ ಸಿಗುತ್ತೆ ಪಡಿತರ! - undefined

ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮಾತನಾಡಿ, 2020 ಜೂನ್ 30ರೊಳಗೆ ಒನ್ ನೇಷನ್ ಒನ್ ರೇಷನ್ ಕಾರ್ಡ್​ ಯೋಜನೆ ಎಲ್ಲೆಡೆ ಜಾರಿಯಾಗಬೇಕು. ಶೀಘ್ರ ಅನುಷ್ಠಾನಕ್ಕೆ ತರುವ ಸಂಬಂಧ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ತಿಳಿಸಲಾಗಿದೆ ಎಂದರು.

ರಾಮ್ ವಿಲಾಸ್ ಪಸ್ವಾನ್
author img

By

Published : Jun 29, 2019, 6:41 PM IST

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಒನ್ ನೇಷನ್ -ಒನ್ ರೇಷನ್ ಕಾರ್ಡ್​' ವ್ಯವಸ್ಥೆಯನ್ನು 2020 ಜೂನ್ 30ರೊಳಗೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅನುಷ್ಠಾನ ಮಾಡಬೇಕೆಂದು ಡೆಡ್​ಲೈನ್ ನೀಡಲಾಗಿದೆ.

ಈ ಬಗ್ಗೆ ಆಹಾರ ಸಚಿವ ರಾಮ್ ವಿಲಾಸ್ ಪಸ್ವಾನ್ ಮಾತನಾಡಿ, ಈಗಾಗಲೆ ಆಂಧ್ರಪ್ರದೇಶ, ಗುಜರಾತ್​, ಹರ್ಯಾಣ, ಜಾಂರ್ಖಂಡ್​, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ ಹಾಗೂ ತ್ರಿಪುರಗಳು ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಜಾರಿಗೆ ತಂದಿವೆ. 2020 ಜೂನ್ 30ರೊಳಗೆ ಒನ್ ನೇಷನ್ ಒನ್ ರೇಷನ್ ಕಾರ್ಡ್​ ಯೋಜನೆ ಎಲ್ಲೆಡೆ ಜಾರಿಯಾಗಬೇಕು. ಶೀಘ್ರ ಅನುಷ್ಠಾನಕ್ಕೆ ತರುವ ಸಂಬಂಧ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ತಿಳಿಸಲಾಗಿದೆ ಎಂದರು.

ಹೊಸ ರೇಷನ್ ಕಾರ್ಡ್​ ವ್ಯವಸ್ಥೆಯಿಂದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳಿದ ವ್ಯಕ್ತಿ/ಕುಟುಂಬ ಪಡಿತರದಿಂದ ವಂಚಿತರಾಗುವುದನ್ನು ತಡೆಯುತ್ತದೆ. ಅಲ್ಲದೆ, ನಕಲಿ ರೇಷನ್​ ಕಾರ್ಡ್​ಗೂ ಬ್ರೇಕ್ ಹಾಕುತ್ತದೆ ಎನ್ನಲಾಗ್ತಿದೆ.

ಈ ಯೋಜನೆಯ ಮೋದಿ 2.0 ಸರ್ಕಾರರ 100 ದಿನಗಳ ಅಜೆಂಡಾದಲ್ಲಿ ಒಂದಾಗಿದೆ. ಮತ್ತೊಂದು ರಾಜ್ಯಕ್ಕೆ ತೆರಳಿದ ವ್ಯಕ್ತಿಯು ಉಚಿತವಾಗಿ ಅಲ್ಲದೆ, ಸರ್ಕಾರ ವಿಧಿಸಿದ ಮೌಲ್ಯ ನೀಡಿ ಪಡಿತರ ಪಡೆಯುಬೇಕಾಗುತ್ತೆ. ಕೆಜಿಗೆ 1-3 ರೂ ಮಾತ್ರ ಬೆಲೆ ವಿಧಿಸಲಾಗುತ್ತೆ ಎಂದೂ ಹೇಳಿದರು.

ಇನ್ನು ಬೇರೊಂದು ಪ್ರದೇಶಕ್ಕೆ ತೆರಳಿದ ವ್ಯಕ್ತಿ ತನ್ನ ಇಡೀ ಕುಟುಂಬದ ಪಡಿತರ ಪಡೆಯಲಾಗದು. ಶೇ50ರಷ್ಟು ಮಾತ್ರ ಪಡಿತರ ನೀಡಲಾಗುತ್ತೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಶೀಘ್ರದಲ್ಲಿಯೆ ಈ ಎಲ್ಲಾ ಮಾರ್ಗಸೂಚಿಗಳನ್ನು ಇಲಾಖೆ ಬಿಡುಗಡೆ ಮಾಡಲಿದೆ ಎಂದು ಸಚಿವರು ಇದೇ ವೇಳೆ ಹೇಳಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.