ETV Bharat / bharat

ಕೋವಿಡ್​ ಲಸಿಕೆ ಆಡಳಿತಾತ್ಮಕ ತಜ್ಞರ ಸಮಿತಿ ರಚನೆ: ಸಮಿತಿ ಕಾರ್ಯಗಳು ಹೀಗಿವೆ... - ಡಾ ವಿಕೆ ಪಾಲ್

ತಜ್ಞರ ಸಮಿತಿಯು ಲಸಿಕೆಯ ಉಲ್ಲೇಖಿತ ನಿಯಮಗಳನ್ನು ಸೂಕ್ತವಾಗಿ ಸುವ್ಯವಸ್ಥಿತಗೊಳಿಸಲಿದೆ. ಲಸಿಕೆ ಸಂಗ್ರಹಣೆ ಹೇಗೆ ಮಾಡಬೇಕು, ಲಸಿಕೆಯನ್ನು ಹೇಗೆ ತಲುಪಿಸಬೇಕು ಮತ್ತು ಲಸಿಕೆಯನ್ನು ಮೊದಲು ಯಾರಿಗೆ ಆದ್ಯತೆ ನೀಡಬೇಕು ಎಂಬುದರ ನಿರ್ವಹಣೆ ಮಾಡಲಿದ್ದಾರೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದರು.

Covid
ಕೋವಿಡ್
author img

By

Published : Aug 11, 2020, 10:04 PM IST

ನವದೆಹಲಿ: ಕೋವಿಡ್​-19 ಲಸಿಕೆಯ ಸಾಗಾಟ, ಸಂಗ್ರಹಣೆಯಂತಹ ನೈತಿಕ ಅಂಶಗಳು ಮತ್ತು ಆಡಳಿತ ನಿರ್ಧಾರ ತೆಗೆದುಕೊಳ್ಳಲು ಸಮಿತಿಯೊಂದನ್ನು ರಚನೆಯಾಗಿದೆ.

ನೀತಿ ಆಯೋಗದ ಸದಸ್ಯರಾಗಿರುವ ಡಾ.ವಿ.ಕೆ.ಪಾಲ್ ಅವರ ಅಧ್ಯಕ್ಷತೆಯಲ್ಲಿ ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ಎಂಬ ಸಮಿತಿಯನ್ನು ರಚಿಸಲಾಗಿದೆ.

ಈ ತಜ್ಞರ ಸಮಿತಿಯು ಲಸಿಕೆಯ ಉಲ್ಲೇಖಿತ ನಿಯಮಗಳನ್ನು ಸೂಕ್ತವಾಗಿ ಸುವ್ಯವಸ್ಥಿತಗೊಳಿಸಲಿದೆ. ಲಸಿಕೆ ಸಂಗ್ರಹಣೆ ಹೇಗೆ ಮಾಡಬೇಕು, ಲಸಿಕೆಯನ್ನು ಹೇಗೆ ತಲುಪಿಸಬೇಕು ಮತ್ತು ಲಸಿಕೆಯನ್ನು ಮೊದಲು ಯಾರಿಗೆ ಆದ್ಯತೆ ನೀಡಬೇಕು ಎಂಬುದರ ನಿರ್ವಹಣೆ ಮಾಡಲಿದ್ದಾರೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದರು.

ಕೋಲ್ಡ್​ ಚೈನ್​, ದಾಸ್ತಾನು, ಲಸಿಕೆ ಸಂಗ್ರಹಿಸಲು ಸಂಪನ್ಮೂಲಗಳನ್ನು ಹೇಗೆ ವ್ಯವಸ್ಥೆ ಮಾಡುವುದು. ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದ ಈಕ್ವಿಟಿ ಸಮಸ್ಯೆಗಳನ್ನು ಹೇಗೆ ಪರಿಹರಿಸುವುದು, ಲಸಿಕೆಯ ಲಾಜಿಸ್ಟಿಕ್ಸ್‌ಗೆ ಸಂಬಂಧಿಸಿದ ಇತರ ವಿಷಯಗಳನ್ನೂ ಸಮಿತಿ ಪರಿಗಣಿಸುತ್ತದೆ. ಈ ತಜ್ಞರ ಗುಂಪು ಎಲ್ಲಾ ರಾಜ್ಯಗಳೊಂದಿಗೆ ಚರ್ಚಿಸಲಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.