ETV Bharat / bharat

ಕುವೈತ್​​ ದೊರೆ ನಿಧನ: ಅಕ್ಟೋಬರ್​​​ 4ರಂದು ರಾಷ್ಟ್ರದಾದ್ಯಂತ ಶೋಕಾಚರಣೆ! - ಕುವೈತ್​​ ದೊರೆ ನಿಧನ ಸುದ್ದಿ

ಕುವೈತ್​ ದೊರೆ ನಿಧನಕ್ಕೆ ಭಾರತ ಸರ್ಕಾರ ಗೌರವ ನೀಡಲು ಮುಂದಾಗಿದ್ದು, ಅಕ್ಟೋಬರ್​ 4ರಂದು ದೇಶಾದ್ಯಂತ ಒಂದು ದಿನ ಶೋಕಾಚರಣೆ ಆಚರಣೆ ಮಾಡಲಿದೆ.

Emir of Kuwait
Emir of Kuwait
author img

By

Published : Oct 1, 2020, 8:25 PM IST

ನವದೆಹಲಿ: ತೀವ್ರ ಅನಾರೋಗ್ಯದ ಕಾರಣ ಕುವೈತ್​ ದೊರೆ ಎಮಿರ್​​ ಶೇಖ್​ ಸಬಾ ಅಲ್ ​- ಅಹ್ಮದ್​​​ ಅಲ್​ ಜಾಬರ್​​​ ಅಲ್ ​​- ಸಬಾಹ್​ ಕಳೆದ ಎರಡು ದಿನಗಳ ಹಿಂದೆ ವಿಧಿವಶರಾಗಿದ್ದಾರೆ. ಅವರಿಗೆ ಗೌರವ ಸೂಚಕವಾಗಿ ಅಕ್ಟೋಬರ್​​ 4ರಂದು ಕೇಂದ್ರ ಸರ್ಕಾರ ಶೋಕಾಚರಣೆ ಆಚರಿಸಲು ನಿರ್ಧರಿಸಿದೆ.

ಅಕ್ಟೋಬರ್​​ 4ರಂದು ಗುರುವಾರ ಭಾರತದಾದ್ಯಂತ ಏಕದಿನ ರಾಜ್ಯ ಶೋಕಾಚರಣೆ ಪ್ರಕಟಿಸಲಾಗಿದ್ದು, ತ್ರಿವರ್ಣ ಧ್ವಜ ಎಲ್ಲ ಸರ್ಕಾರಿ ಕಟ್ಟಡಗಳ ಮೇಲೆ ಅರ್ಧ ಹಾರಿಸಲಾಗುತ್ತದೆ. ಕೇಂದ್ರ ಗೃಹ ಸಚಿವಾಲಯ ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದೆ.

ಕುವೈತ್ ದೊರೆ (ಅಮೀರ್) ಸಬಾಹ್ ಅಲ್ ಅಹಮದ್ ಅಲ್ ಜಾಬೀರ್ ಅಲ್ ಸಬಾಹ್ (91 ) ಅಮೆರಿಕದ ಆಸ್ಪತ್ರೆಯಲ್ಲಿ ನಿಧನರಾಗಿದ್ದು, 2006ರ ಜನವರಿಯಿಂದ ಕುವೈತ್​ನ ದೊರೆಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.