ನವದೆಹಲಿ: ಮಾಜಿ ವಿತ್ತ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರ ಮೇಲೆ ಕೇಳಿ ಬಂದಿರುವ ಐಎನ್ಎಕ್ಸ್ ಮೀಡಿಯಾ ಕೇಸ್ನಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರದಲ್ಲಿ ಅವರೇ ಕಿಂಗ್ಪಿನ್ ಎಂಬ ಆರೋಪ ಕೇಳಿಬಂದಿದ್ದು ಈ ಕಾರಣ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಸಲ್ಲಿಕೆ ಮಾಡಿದ್ದ ಅರ್ಜಿ ಇದೀಗ ತಿರಸ್ಕೃತಗೊಂಡಿದೆ.
ಅರ್ಜಿ ತಿರಸ್ಕೃತವಾದ ಪರಿಣಾಮ ಕಾಂಗ್ರೆಸ್ ಹಿರಿಯ ನಾಯಕ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಮಂಗಳವಾರ ರಾತ್ರಿ ಚಿದಂಬರಂ ಬಂಧನಕ್ಕೆ ಸಿಬಿಐ ಅಧಿಕಾರಿಗಳು ಜೋರ್ಬಾಗ್ನಲ್ಲಿನ ನಿವಾಸಕ್ಕೆ ಆಗಮಿಸಿ ಬರಿಗೈಲಿ ವಾಪಾಸಾಗಿದ್ದಾರೆ.
ಸದ್ಯ ಇಂದು ಮುಂಜಾನೆ ಮತ್ತೊಮ್ಮೆ ಸಿಬಿಐ ಅಧಿಕಾರಿಗಳು ಚಿದು ನಿವಾಸಕ್ಕೆ ಆಗಮಿಸಿದ್ದಾರೆ. ಆದರೆ, ಮಾಜಿ ವಿತ್ತ ಸಚಿವ ಪ್ರಸ್ತುತ ಕಣ್ಮರೆಯಾಗಿರುವ ಕಾರಣ ಅಧಿಕಾರಿಗಳಿಂದ ಬಂಧನ ಸಾಧ್ಯವಾಗಿಲ್ಲ. ಚಿದಂಬರಂ ಫೋನ್ ಸ್ವಿಚ್ಡ್ ಆಫ್ ಆಗಿರುವ ಕಾರಣದಿಂದ ಸಂಪರ್ಕ ಸಾಧ್ಯವಾಗುತ್ತಿಲ್ಲ.
-
The Central Bureau of Investigation (CBI) team has left from the residence of P Chidambaram. #Delhi https://t.co/sUhqMwwZ2t
— ANI (@ANI) August 21, 2019 " class="align-text-top noRightClick twitterSection" data="
">The Central Bureau of Investigation (CBI) team has left from the residence of P Chidambaram. #Delhi https://t.co/sUhqMwwZ2t
— ANI (@ANI) August 21, 2019The Central Bureau of Investigation (CBI) team has left from the residence of P Chidambaram. #Delhi https://t.co/sUhqMwwZ2t
— ANI (@ANI) August 21, 2019
ಚಿದಂಬರಂ ಪರ ವಾದ ಮಂಡನೆ ಮಾಡುತ್ತಿರುವ ಕಾಂಗ್ರೆಸ್ ನಾಯಕ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್, ಐಎನ್ಎಕ್ಸ್ ಪ್ರಕರಣದ ವಿಚಾರಣೆಯನ್ನು ದಾಖಲು ಮಾಡುವಂತೆ ಸುಪ್ರೀಂಕೋರ್ಟ್ನಲ್ಲಿ ಮನವಿ ಮಾಡಲಿದ್ದಾರೆ. ಇಂದು 10.30ಕ್ಕೆ ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ದಾಖಲು ಮಾಡಲಿದ್ದು, ಅಯೋಧ್ಯೆ ನಿತ್ಯ ವಿಚಾರಣೆ ಸದ್ಯ ನಡೆಯುತ್ತಿರುವ ಕಾರಣ ವಿಚಾರಣೆ ಇಂದು ನಡೆಯುವುದು ಬಹುತೇಕ ಅನುಮಾನ ಎನ್ನಲಾಗಿದೆ.
ಏನಿದು ಪ್ರಕರಣ..?
ಪಿ.ಚಿದಂಬರಂ ಕೇಂದ್ರ ವಿತ್ತ ಸಚಿವರಾಗಿದ್ದಾಗ, ಮೀಡಿಯಾ ಕುಳಗಳಾದ ಪೀಟರ್ ಮುಖರ್ಜಿಯಾ ಮತ್ತು ಇಂದ್ರಾಣಿ ಮುಖರ್ಜಿಯಾ ಒಡೆತನದಲ್ಲಿದ್ದ ಐಎನ್ಎಕ್ಸ್ ಮೀಡಿಯಾ ಮಲೇಷ್ಯಾದ ಕಂಪನಿಯಿಂದ 305 ಕೋಟಿ ರೂಪಾಯಿಗಳನ್ನು ಪಡೆದಿತ್ತು. ಆದರೆ, ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯಿಂದ 4.62 ಕೋಟಿ ರೂಪಾಯಿ ಹೂಡಿಕೆ ಮಾಡಲು ಮಾತ್ರ ಅನುಮತಿ ನೀಡಲಾಗಿತ್ತು.
ಈ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಂದಾಯ ಸಚಿವಾಲಯ ವಿಚಾರಣೆಗೆ ಆದೇಶಿಸಿತ್ತು. ಆದರೆ, ಪಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಅವರು ಮಧ್ಯಸ್ಥಿಕೆ ವಹಿಸಿ, ತಂದೆಯ ಪ್ರಭಾವವನ್ನು ಬಳಸಿಕೊಂಡು ವಿಚಾರಣೆಯನ್ನು ತಪ್ಪಿಸಲು ತಮ್ಮ ಕಂಪನಿಯ ಮೂಲಕ 10 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕಾಗಿ ಅವರು ಕೆಲ ಕಾಲ ಬಂಧನಕ್ಕೂ ಒಳಗಾಗಿದ್ದರು.
ವಿಚಾರಣೆಗೆ ಪಿ.ಚಿದಂಬರಂ ಸಹಕರಿಸುತ್ತಿಲ್ಲ ಎಂಬ ಆರೋಪ ಅಧಿಕಾರಿಗಳಿಂದ ವ್ಯಕ್ತವಾಗಿದೆ. ಇದು ಕೂಡಾ ಮಾಜಿ ಸಚಿವರಿಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಕೇಂದ್ರ ಮಾಜಿ ಸಚಿವ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್, ಸುಪ್ರೀಂಕೋರ್ಟ್ನಲ್ಲಿ ಪಿ ಚಿದಂಬರಂ ಪರವಾಗಿ ವಾದ ಮಂಡಿಸಲಿದ್ದಾರೆ.
ಕಳೆದ ವರ್ಷದಿಂದ ಈ ಪ್ರಕರಣದ ವಿಚಾರಣೆ ತೀವ್ರಗೊಂಡಿದ್ದರೂ ಪಿ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ನಿರೀಕ್ಷಣ ಜಾಮೀನುಗಳನ್ನ ಪಡೆಯುತ್ತಲೇ ಬಂದಿದ್ದರಲ್ಲದೇ ಬಂಧನ ಭೀತಿಯಿಂದ ಪಾರಾಗಿದ್ದರು. ಇದೀಗ ದೆಹಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದಲ್ಲದೇ ಮೇಲ್ನೋಟಕ್ಕೆ ನೀವೇ ಕಿಂಗ್ಪಿನ್ ಎಂಬಂತೆ ತೋರುತ್ತದೆ ಎನ್ನುವ ಮೂಲಕ ಮಾಜಿ ಹಣಕಾಸು ಸಚಿವರಿಗೆ ಬಂಧನ ಭೀತಿಯನ್ನ ಹೆಚ್ಚುವಂತೆ ಮಾಡಿದೆ.