ETV Bharat / bharat

ಕೈ- ತೆನೆ ಸರ್ಕಾರದಲ್ಲಿನ ಫೋನ್​ ಟ್ಯಾಪಿಂಗ್​ನ FIR ದಾಖಲಿಸಿದ CBI.. ಯಾರಿಗೆಲ್ಲ ಉರುಳು? - ದೂರವಾಣಿ ಕದ್ದಾಲಿಕೆ

ಕರ್ನಾಟಕ ರಾಜ್ಯ ಸರ್ಕಾರವು ದೂರವಾಣಿ ಕದ್ದಾಲಿಕೆಯ ಕುರಿತು ತನಿಖೆ ನಡೆಸುವಂತೆ ಅಗಸ್ಟ್​ 19ರಂದು ಸಿಬಿಐಗೆ ಮನವಿ ಮಾಡಿತ್ತು. ರಾಜ್ಯ ಸರ್ಕಾರದ ಕೋರಿಕೆ ಮನ್ನಿಸಿದ ಸಿಬಿಐ, ಮಾಹಿತಿ ತಂತ್ರಜ್ಞಾನ ಕಾಯ್ದೆ 22 ಮತ್ತು ಇಂಡಿಯನ್​​ ಟೆಲಿಗ್ರಾಪ್​​ ಕಾಯ್ದೆ 26 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.

ಸಾಂದರ್ಭಿಕ ಚಿತ್ರ
author img

By

Published : Aug 31, 2019, 9:06 PM IST

ನವದೆಹಲಿ: ಕರ್ನಾಟಕದ ಜೆಡಿಎಸ್​ ಮತ್ತು ಕಾಂಗ್ರೆಸ್​ ಮೈತ್ರಿ ಸರ್ಕಾರದ ಅವದಿಯಲ್ಲಿ ನಡೆದಿದೆ ಎನ್ನಲಾದ ದೂರವಾಣಿ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಕೇಂದ್ರಿಯ ತನಿಖಾ ತಂಡ (ಸಿಬಿಐ) ಎಫ್​ಐಆರ್​ ದಾಖಲಿಸಿಕೊಂಡಿದೆ.

ಕರ್ನಾಟಕ ರಾಜ್ಯ ಸರ್ಕಾರವು ದೂರವಾಣಿ ಕದ್ದಾಲಿಕೆಯ ಕುರಿತು ತನಿಖೆ ನಡೆಸುವಂತೆ ಅಗಸ್ಟ್​ 19ರಂದು ಸಿಬಿಐಗೆ ಮನವಿ ಮಾಡಿತ್ತು. ಇದರ ಕೋರಿಕೆಯನ್ನು ಮನ್ನಿಸಿದ ಸಿಬಿಐ, ಮಾಹಿತಿ ತಂತ್ರಜ್ಞಾನ ಕಾಯ್ದೆ 22 ಮತ್ತು ಇಂಡಿಯನ್​​ ಟೆಲಿಗ್ರಾಪ್​​ ಕಾಯ್ದೆ 26ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.

ಸಿಬಿಐ ಅಧಿಕಾರಿಗಳ ಫೋನ್ ಟ್ಯಾಪಿಂಗ್​ ಸಂಬಂಧಪಟ್ಟ ಅಧಿಕಾರಿ, ಆಡಳಿತರೂಢ ಮತ್ತು ವಿರೋಧ ಪಕ್ಷಗಳ ಮುಖಂಡರ ಹಾಗೂ ಅವರು ಸಂಬಂಧಿಗಳನ್ನು ವಿಚಾರಣೆಗೆ ಒಳಪಡಿಸಲಿದೆ. 2018ರ ಅಗಸ್ಟ್​ 1ರಿಂದ 2019ರ ಅಗಸ್ಟ್​ 19ರ ವರೆಗೆ ರಾಜ್ಯ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ತನಿಖೆಗೆ ಒಳಗಾಗಲಿದ್ದಾರೆ.

ಸಿಬಿಐ ಎಸ್​ಪಿ ಎಸ್​ ಕಿರಣ್​ ಅವರು ತನಿಖಾ ತಂಡವನ್ನು ರಚಿಸಿದ್ದು, ಸಿಬಿಐನ ಡಿವೈಎಸ್​ಪಿ ಮುಖೇಶ್​ ಕುಮಾರ್​ ಅವರು ಇದ್ದಾರೆ. ಪ್ರಸ್ತುತ ದಾಖಲಾದ ಎಫ್​ಐಆರ್​ನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರಿಲ್ಲ. ದೂರಿನಲ್ಲಿ ಸಾರ್ವಜನಿಕ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು ಮತ್ತು ಅಪರಿಚಿತ ಜನಪ್ರತಿನಿಧಿಗಳು ಎಂದು ಉಲ್ಲೇಖವಾಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.