ಅಮರಾವತಿ(ಆಂಧ್ರಪ್ರದೇಶ): ನರ್ಸಿ ಪಟ್ಟಣದ ಮಾನಸಿಕ ವೈದ್ಯ ಡಾ. ಸುಧಾಕರ್ ಪ್ರಕರಣ ಸಂಬಂಧ ಸಿಬಿಐ ವಿಚಾರಣೆ ಆರಂಭಿಸಿದೆ.
ಪೊಲೀಸರು, ಸರ್ಕಾರದ ಅಧಿಕಾರಿಗಳ ವಿರುದ್ಧ ಈ ಪ್ರಕರಣ ದಾಖಲಾಗಿದ್ದು, ಸಿಬಿಐ ಇದರ ತನಿಖೆ ಕೈಗೊಂಡಿದೆ. ಪ್ರಸ್ತುತ ಆರೋಪಿಗಳ ಹೆಸರುಗಳು ತಿಳಿಯದ ಹಿನ್ನೆಲೆಯಲ್ಲಿ ಗುರುತು ಇಲ್ಲದವರು ಎಂದು ಪ್ರಕರಣದಲ್ಲಿ ನಮೂದಿಸಿದೆ. ಹೈಕೋರ್ಟ್ ಆದೇಶದ ಮೇರೆಗೆ ಮ್ಯಾಜಿಸ್ಟ್ರೇಟ್ ದಾಖಲಿಸಿಕೊಂಡಿರುವ ಹೇಳಿಕೆಯ ಅಂಶಗಳನ್ನು ಆಧರಿಸಿ ಸಿಬಿಐ ಎಸ್ಪಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡಾ. ಸುಧಾಕರ್ ಅವರನ್ನು ಹಗ್ಗದಲ್ಲಿ ಕಟ್ಟಿಹಾಕಿದ್ದು, ಅವರ ಮೈಮೇಲೆ ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸಿದ ಗುರುತುಗಳಿವೆ. ಮೂರು ದಿನಗಳಿಗೂ ಹೆಚ್ಚು ಕಾಲ ನಿರ್ಬಂಧ ಹೇರಿದ್ದು ಮತ್ತು ತಮ್ಮ ಬಳಿ ಇದ್ದ ಸೊತ್ತುಗಳು ಕಳ್ಳತನವಾದ ಬಗ್ಗೆ ಸಿಬಿಐ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ತಮ್ಮ ದ್ವಿಚಕ್ರ ವಾಹನ, ಕಾರು ಕೀ, 10 ಲಕ್ಷ ರೂಪಾಯಿ ಹಣ, ಎಟಿಎಂ ಕಾರ್ಡ್‌ಗಳು, ಪರ್ಸ್ ಹಾಗೂ ಅದರಲ್ಲಿದ್ದ 1 ಸಾವಿರ ರೂಪಾಯಿ ಹಣವನ್ನು ಕದ್ದಿದ್ದಾರೆ ಎಂದು ಡಾ. ಸುಧಾಕರ್ ದೂರಿನಲ್ಲಿ ಉಲ್ಲೇಖಿಸಿದ್ದರು.