ETV Bharat / bharat

ಬಾಬರಿ ಮಸೀದಿ ಧ್ವಂಸ ಕೇಸ್​: ಆರೋಪಿಗಳ ಹೇಳಿಕೆ ರೆಕಾರ್ಡ್​ ಮಾಡಲು ಸಿಬಿಐ ಕೋರ್ಟ್​ ಸಜ್ಜು - ಬಾಬರಿ ಮಸೀದಿ

1992 ಡಿಸೆಂಬರ್‌ 6 ರಂದು ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಮತ್ತೆ ಇಂದಿನಿಂದ ಆರಂಭವಾಗಲಿದೆ.

CBI court set to record statements of accused in Babri case
ಬಾಬರಿ ಮಸೀದಿ
author img

By

Published : Jun 4, 2020, 10:44 AM IST

ಲಖನೌ: ಇಂದಿನಿಂದ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಮತ್ತೆ ಆರಂಭವಾಗಲಿದ್ದು, ಬಿಜೆಪಿ ಹಿರಿಯ ನಾಯಕರು ಸೇರಿ ಒಟ್ಟು 32 ಆರೋಪಿಗಳ ಹೇಳಿಕೆಗಳನ್ನು ಲಖನೌದ ಸಿಬಿಐ ವಿಶೇಷ ನ್ಯಾಯಾಲಯ ರೆಕಾರ್ಡ್​ ಮಾಡಲಿದೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್​ ಸಿಂಗ್​​, ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ, ಬಿಜೆಪಿ ಹಿರಿಯ ನಾಯಕರಾದ ಮುರಳಿ ಮನೋಹರ ಜೋಶಿ, ಉಮಾ ಭಾರತಿ, ವಿನಯ್ ಕಟಿಯಾರ್, ಸಾಕ್ಷಿ ಮಹಾರಾಜ್​, ರಾಮ್​ ವಿಲಾಸ್ ವೇದಾಂತಿ ಸೇರಿ 32 ಮಂದಿ 1992 ಡಿಸೆಂಬರ್‌ 6 ರಂದು ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣದ ಆರೋಪ ಹೊತ್ತಿದ್ದಾರೆ.

ಲಖನೌ ಸಿಬಿಐ ವಿಶೇಷ ನ್ಯಾಯಾಯಲದ ನ್ಯಾಯಮೂರ್ತಿ ಎಸ್‌.ಕೆ.ಯಾದವ್‌ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಐಪಿಸಿ‌ ಸೆಕ್ಷನ್​ 313ರ ಅಡಿ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.