ETV Bharat / bharat

ಯುಕೊ ಬ್ಯಾಂಕ್​ಗೆ ವಂಚನೆ ಆರೋಪ.. ಮಧ್ಯಪ್ರದೇಶ ಮೂಲದ ಕಂಪನಿ ವಿರುದ್ಧ ಪ್ರಕರಣ ದಾಖಲು

author img

By

Published : Nov 9, 2020, 4:28 PM IST

ಮಧ್ಯಪ್ರದೇಶ ಮೂಲದ ನಾರಾಯಣ್ ನಿರ್ಯಾಟ್ ಕಂಪನಿಯೊಂದು ಯುಕೊ ಕಂಪನಿಗೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ, ತನಿಖೆ ಮುಂದುವರಿಸಿದ್ದಾರೆ.

crore
ದಾಖಲು

ದೆಹಲಿ: ಮಧ್ಯಪ್ರದೇಶ ಮೂಲದ ಕಂಪನಿಯೊಂದು ಯುಕೊ (UCO) ಬ್ಯಾಂಕ್​ಗೆ 105 ಕೋಟಿ ರೂಪಾಯಿ ವಂಚಿಸಿರುವ ಆರೋಪ ಕೇಳಿ ಬಂದಿದೆ. ಕಂಪನಿ ನಾರಾಯಣ್ ನಿರ್ಯಾಟ್ ಮತ್ತು ನಿರ್ದೇಶಕ ಕೈಲಾಶ್ ಚಂದ್ ಗರ್ಗ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

2011 ರಿಂದ 2013 ರವರೆಗೆ ಕಂಪನಿಯ ಯುಕೊ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್​ಗಳ ಒಕ್ಕೂಟದಿಂದ 110 ಕೋಟಿ ರೂಪಾಯಿ ಸಾಲ ಪಡೆದಿದೆ ಎಂದು ಸಂಸ್ಥೆ ಆರೋಪಿಸಿದೆ.

ಸಿಬಿಐ, 2011 ರ ಅವಧಿಯಲ್ಲಿ ಕಂಪನಿ ನಿರ್ದೇಶಕರಾಗಿದ್ದ ದಿವಂಗತ ಸುರೇಶ್ ಚಂದ್ ಗರ್ಗ್​​ ಅವರನ್ನು ಆರೋಪಿಯನ್ನಾಗಿಸಿದೆ.

ನಾರಾಯಣ್ ನಿರ್ಯಾಟ್​ ಕಂಪನಿ ಮತ್ತು ನಿರ್ದೇಶಕರು ನೇರವಾಗಿ ಯಾವುದೇ ಸರಕುಗಳನ್ನ ಮಾರಾಟ ಮಾಡದೆ, ಇತರರ ಹೆಸರಲ್ಲಿ ವಸ್ತುಗಳನ್ನು ಮಾರುತ್ತಿದೆ. ಜತೆಗೆ ಬ್ಯಾಲೆನ್ಸ್​ ಶೀಟ್​ನಲ್ಲೂ ಲೆಕ್ಕ ಸರಿಯಾಗಿ ನಮೂದಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕುಗಳಿಂದ ಪಡೆದ ಸಾಲವನ್ನು ಉದ್ದೇಶಪೂರ್ವಕವಾಗಿ ಇತರೆ ಕೆಲಸಗಳಿಗೆ ಬಳಸಿಕೊಂಡಿದ್ದಾರೆ. ಅಲ್ಲದೆ, ಅವಧಿ ಮೀರಿದರೂ ಬಡ್ಡಿ ಕಟ್ಟಿಲ್ಲ ಎಂದು ಬ್ಯಾಂಕ್ ಆರೋಪಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.