ETV Bharat / bharat

ಸಂಸದನ ಪೆಟ್ರೋಲ್​ ಬಂಕ್​​ನಲ್ಲಿ ಫುಲ್ ಟ್ಯಾಂಕ್​ ಮಾಡಿಸಿಕೊಂಡು ಹಣ ಲೂಟಿ ಹೊಡೆದ ಖದೀಮರು

ಅಪರಿಚಿತರು ಮಂಗಳವಾರ ರಾತ್ರಿ ಉತ್ತರ ಪ್ರದೇಶದ ಬಿಜೆಪಿ ಸಂಸದರ ಪೆಟ್ರೋಲ್ ಪಂಪ್‌ನಿಂದ 50,000 ರೂ. ಲೂಟಿ ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ.

ಉತ್ತರ ಪ್ರದೇಶದ ಬಿಜೆಪಿ ಸಂಸದನ ಮಾಲೀಕತ್ವದ ಪೆಟ್ರೋಲ್ ಪಂಪ್

author img

By

Published : May 6, 2020, 2:28 PM IST

ಚಿತ್ರಕೂಟ: ಉತ್ತರ ಪ್ರದೇಶದ ಬಿಜೆಪಿ ಸಂಸದನ ಮಾಲೀಕತ್ವದ ಪೆಟ್ರೋಲ್ ಪಂಪ್‌ವೊಂದರಲ್ಲಿ ತಮ್ಮ ವಾಹನಗಳಿಗೆ ಟ್ಯಾಂಕ್​ ಪೂರ ಪೆಟ್ರೋಲ್​ ಹಾಕಿಸಿಕೊಂಡಿದ್ದಲ್ಲದೆ, 50 ಸಾವಿರ ಲೂಟಿ ಮಾಡಿಕೊಂಡು ಖದೀಮರು ಪರಾರಿಯಾಗಿದ್ದಾರೆ.

ಮಂಗಳವಾರ ರಾತ್ರಿ 7.30 ರ ಸುಮಾರಿಗೆ ಈ ಘಟನೆ ನಡೆದಿದೆ. ಪೋಖ್ರಿ ಬರ್ಹತ್‌ನಲ್ಲಿರುವ ಆರ್.ಕೆ.ಸಿಂಗ್ ಪಟೇಲ್ ಅವರ ಪೆಟ್ರೋಲ್ ಪಂಪ್‌ನಲ್ಲಿ ಈ ಘಟನೆ ನಡೆದಿದೆ ಎಂದು ರಾಯ್‌ಪುರದ ಸ್ಟೇಷನ್ ಹೌಸ್ ಅಧಿಕಾರಿ ರಮೇಶ್ ಚಂದ್ರ ತಿಳಿಸಿದ್ದಾರೆ.

ಐದು ಜನರು ಮೊದಲು ತಮ್ಮ ವಾಹನಗಳಿಗೆ ಪೆಟ್ರೋಲ್ ಭರ್ತಿ ಮಾಡಿಸಿಕೊಂಡರು. ನಂತರ 50,000 ರೂ. ತೆಗೆದುಕೊಂಡು ಪರಾರಿಯಾದರು. ಆ ವೇಳೆ ಸ್ಥಳೀಯರು ಬೆನ್ನಟ್ಟಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಖದೀಮರು ಹೋಗುವ ಭರದಲ್ಲಿ ಬೈಕ್​ನಿಂದ ಬಿದ್ದರಾದರೂ ಸ್ಥಳೀಯರ ಭಯದಿಂದ ಮತ್ತೇ ತಪ್ಪಿಸಿಕೊಂಡು ಓಡಿಹೋಗಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪೆಟ್ರೋಲ್ ಪಂಪ್ ವ್ಯವಸ್ಥಾಪಕರ ದೂರಿನ ಮೇರೆಗೆ ಐದು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.