ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ದೀರ್ಘಕಾಲದವರೆಗೆ ನ್ಯಾಯಾಲಯಗಳನ್ನು ಮುಚ್ಚುವುದು "ಸ್ವಯಂ-ವಿನಾಶಕಾರಿ ಕಲ್ಪನೆ" ಎಂದು ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದು, ಸಾಮಾಜಿಕ - ಅಂತರದ ಮಾನದಂಡಗಳನ್ನು ಗೌರವಿಸಿ ನ್ಯಾಯಾಲಯಗಳು ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ಸಹ ಸೂಚಿಸಿದ್ದಾರೆ.
ನ್ಯಾಯಾಲಯಗಳನ್ನು ದೀರ್ಘಕಾಲದವರೆಗೆ ಮುಚ್ಚುವುದು ಒಂದು ಸ್ವಯಂ - ವಿನಾಶಕಾರಿ ಕಲ್ಪನೆ ಎಂದಿರುವ ಅವರು,ನ್ಯಾಯಾಲಯಗಳು ಮೂಲಭೂತ ಹಕ್ಕುಗಳ ಸೆಂಟಿನೆಲ್‌ಗಳಾಗಿವೆ. ಜನರ ಪ್ರಮುಖ ಹಿತಾಸಕ್ತಿಗಳು ಮತ್ತು ಪ್ರಕರಣಗಳು ಮೂಲೆಗುಂಪಾಗಿವೆ. ಆದ್ದರಿಂದ ಸ್ವಲ್ಪ ಉತ್ತಮವಾದ ಕಾರ್ಯವನ್ನು ಪುನಃಸ್ಥಾಪಿಸಲು ನಾವು ಹೇಗೆ ಹೋಗಬಹುದು "ಎಂದು ವಕೀಲರು ಸಿಜೆಐ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ.
ನ್ಯಾಯಾಧೀಶರು ಮತ್ತು ವಕೀಲರು ಮಾಸ್ಕ್ ಹಾಗೂ ಕೈಗವಸುಗಳನ್ನು ಧರಿಸಬೇಕೆಂದು ಅವರು ಸಲಹೆ ನೀಡಿದ್ದು, ನ್ಯಾಯಮೂರ್ತಿಗಳು ಪೀಠದ ಮೇಲೆ ಕುಳಿತುಕೊಳ್ಳುವುದರಿಂದ ಅವರು ವಕೀಲರಿಂದ ಉತ್ತಮ ಅಂತರದಿಂದ ಬೇರ್ಪಡಿಸಲಾಗುತ್ತದೆ. ಅವರೇ ಸ್ವತಃ ಐದು ಅಡಿ ಅಂತರದಲ್ಲಿ ಕುಳಿತುಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ.
"ಎಲ್ಲಾ ನ್ಯಾಯಾಲಯಗಳಲ್ಲಿ ತಲಾ 25 ಪ್ರಕರಣಗಳನ್ನು ಹಂಚುವುದು. ವಿಚಾರಣೆಯ ದಿನಗಳಲ್ಲಿ 5 ಪ್ರಕರಣಗಳು ಮತ್ತು ಉಳಿದವುಗಳನ್ನ 5 ಅಂತಿಮ ವಿಲೇವಾರಿ ಕೇಸ್ಗಳಾಗಿರುತ್ತವೆ ಎಂದಿರುವ ಅವರು,
ನೌಕರರನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು, ಪ್ರತಿಯೊಂದೂ ಗುಂಪು ಒಂದು ವಾರ ಕೆಲಸ ಮಾಡುತ್ತದೆ. ಹೀಗಾಗಿ ಅವರನ್ನು ಮೊದಲೇ ಪರೀಕ್ಷಿಸಬಹುದು ಎಂದಿದ್ದಾರೆ.
ಇದರಿಂದಾಗಿ ಕೆಲವೇ ಕೆಲವು ಉದ್ಯೋಗಿಗಳು ನ್ಯಾಯಮೂರ್ತಿಗಳನ್ನ ಸಂಪರ್ಕಿಸಬೇಕು. ಹಾಗೆಯೇ ಪ್ರಕರಣಗಳನ್ನು ಗಂಟೆಯ ಆಧಾರದ ಮೇಲೆ ವಿಂಗಡಿಸಬೇಕು. ಗಂಟೆಗೆ 5 ಪ್ರಕರಣಗಳು. ಇದರಿಂದಾಗಿ ನ್ಯಾಯಾಲಯದಲ್ಲಿ ವಕೀಲರು ಕಡಿಮೆ ಸೇರಿದಂತಾಗುತ್ತದೆ ಎಂದಿದ್ದಾರೆ.