ETV Bharat / bharat

ಅಕ್ರಮವಾಗಿ ಹಣ ವಿತರಣೆ ಆರೋಪ: ಸರ್​ಪಂಚ್ ವಿರುದ್ಧ ದೂರು ದಾಖಲು

ಅಕ್ರಮವಾಗಿ ಹಣ ವಿತರಿಸಿದ ಆರೋಪದ ಹಿನ್ನೆಲೆ ಸರ್​ಪಂಚ್ (ಗ್ರಾಮ ಪಂಚಾಯತ್ ಅಧ್ಯಕ್ಷ)ನ ವಿರುದ್ಧ ಬಿಜೆಪಿ ವಕ್ತಾರ ಉಮೇಶ್ ಶರ್ಮಾ ಅವರು ದೂರು ನೀಡಿದ್ದಾರೆ.

ಸರ್​ಪಂಚ್ ವಿರುದ್ಧ ದೂರು ದಾಖಲು
ಸರ್​ಪಂಚ್ ವಿರುದ್ಧ ದೂರು ದಾಖಲು
author img

By

Published : Oct 26, 2020, 1:27 PM IST

ಇಂದೋರ್: ಉಪಚುನಾವಣೆ ಹಿನ್ನೆಲೆ ಮತದಾರರನ್ನು ಸೆಳೆಯಲು ಅಕ್ರಮವಾಗಿ ಹಣ ವಿತರಿಸಿದ ಆರೋಪದ ಹಿನ್ನೆಲೆ ಸರ್​ಪಂಚ್ (ಗ್ರಾಮ ಪಂಚಾಯತ್ ಅಧ್ಯಕ್ಷ)ನ ವಿರುದ್ಧ ಹತೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ವಕ್ತಾರ ಉಮೇಶ್ ಶರ್ಮಾ ಅವರು ಹತೋಡ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೇಮ್‌ಚಂದ್ ಗುಡ್ಡು ಅವರ ಬೆಂಬಲಿಗ ಮತ್ತು ಸರ್​ಪಂಚ್, ಗೋಪಾಲ್ ಪಂಚಲ್ ಅವರ ವಿರುದ್ಧ ದೂರು ನೀಡಿದ್ದು, ಚುನಾವಣೆ ಹಿನ್ನೆಲೆ ಮತದಾರರನ್ನು ಸೆಳೆಯಲು ಹಣವನ್ನು ವಿತರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಪಂಚಲ್​ ವಿರುದ್ಧ ವಿಡಿಯೋವೊಂದನ್ನು ಭಾನುವಾರ ಪೊಲೀಸರಿಗೆ ಬಿಜೆಪಿ ವಕ್ತಾರ ನೀಡಿದ್ದಾರೆ.

ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರದಲ್ಲಿ ನವೆಂಬರ್ 3 ರಂದು ಮತದಾನ ನಡೆಯಲಿದ್ದು, ಮತ ಎಣಿಕೆ ನವೆಂಬರ್ 10 ರಂದು ನಡೆಯಲಿದೆ. 25 ಶಾಸಕರ ರಾಜೀನಾಮೆ ಮತ್ತು ಮೂವರು ಶಾಸಕರ ಸಾವಿನ ಹಿನ್ನೆಲೆ 28 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.