ETV Bharat / bharat

ಕೊರೊನಾ ಸೋಂಕಿತ ಕ್ಯಾನ್ಸರ್ ರೋಗಿಗಳಲ್ಲಿ ಮರಣ ಪ್ರಮಾಣ ಹೆಚ್ಚು ಸಾಧ್ಯತೆ: ಸಂಶೋಧನಾ ವರದಿ

ಕೊರೊನಾ ಸೋಂಕಿತ ಕ್ಯಾನ್ಸರ್​ ರೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ಮರಣ ಹೊಂದುವ ಸಾಧ್ಯತೆ ಇದೆ ಎಂದು ಭಾರತೀಯ ಮೂಲದ ಅಮೆರಿಕದಲ್ಲಿನ ಸಂಶೋಧಕರ ತಂಡ ತಿಳಿಸಿದೆ.

Cancer
ಕೊರೊನಾ
author img

By

Published : May 2, 2020, 3:01 PM IST

ನ್ಯೂಯಾರ್ಕ್ (ಅಮೆರಿಕ): ಸಾಮಾನ್ಯ ಕೊರೊನಾ ಸೋಂಕಿತರಿಗಿಂತ ಕ್ಯಾನ್ಸರ್​ ಇರುವ ಕೊರೊನಾ ಸೋಂಕಿತರ ಮರಣ ಪ್ರಮಾಣ ಹೆಚ್ಚಿರುವ ಸಾಧ್ಯತೆ ಇದೆ ಎಂದು ಅಮೆರಿಕದಲ್ಲಿರುವ ಭಾರತೀಯ ಮೂಲದ ಸಂಶೋಧಕರ ತಂಡ ಹೇಳಿದೆ.

ಅಮೆರಿಕದ ಆಲ್ಬರ್ಟ್​ ಐನ್​​ಸ್ಟಿನ್​ ಕಾಲೇಜ್​ ಆಫ್​ ಮೆಡಿಸಿನ್​ನ ಸಂಶೋಧಕ ವಿಕಾಸ್ ಮೆಹ್ತಾ ''ನಾವು ಕ್ಯಾನ್ಸರ್ ರೋಗಿಗಳಿಗೆ ಸೋಂಕು ಬರದಂತೆ ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇವೆ. ಜೊತೆಗೆ ಕೊರೊನಾ ಸೋಂಕು ಕ್ಯಾನ್ಸರ್ ಇರುವವರ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆಯೂ ಕೂಡಾ ನಮ್ಮ ಸಂಶೋಧನೆಗಳು ಬೆಳಕು ಚೆಲ್ಲುತ್ತವೆ'' ಎಂದಿದ್ದಾರೆ.

ಈ ಸಂಶೋಧನೆಯು ಕ್ಯಾನ್ಸರ್​ ಡಿಸ್ಕವರಿ ಜರ್ನಲ್​ನಲ್ಲಿ ಪ್ರಕಟವಾಗಿದ್ದು ಸಂಶೋಧನಾ ತಂಡವು 218 ಕ್ಯಾನ್ಸರ್​ ರೋಗಿಗಳನ್ನು ತನ್ನ ಸಂಶೋಧನೆಗೆ ಒಳಪಡಿಸಿಕೊಂಡಿತ್ತು. ಇವರಿಗೆ ಮಾರ್ಚ್​​ 18ರಿಂದ ಏಪ್ರಿಲ್ 26ರವರೆಗೆ ಮಾಂಟೆಫೀಯೋರ್ ಎಂಬ ವೈದ್ಯಕೀಯ ಕೇಂದ್ರದಲ್ಲಿ ಕೊರೊನಾ ಪರೀಕ್ಷೆ ನಡೆಸಿತ್ತು. ಈ ಕೊರೊನಾ ಸೋಂಕಿತ ಕ್ಯಾನ್ಸರ್​ ರೋಗಿಗಳಲ್ಲಿ 61 ಮಂದಿ ಅಂದರೆ ಶೇಕಡಾ 28ರಷ್ಟು ಮಂದಿ ಸಾವನ್ನಪ್ಪಿದ್ದರು.

''ಕ್ಯಾನ್ಸರ್​ ಚಿಕಿತ್ಸೆ ಮಾತ್ರವಲ್ಲದೇ ಕೊರೊನಾ ಸೋಂಕಿತ ವ್ಯಕ್ತಿಯ ಸಾವು ವ್ಯಕ್ತಿಯ ವಯಸ್ಸು, ಸೋಂಕಿತನಿಗೆ ಇರುವ ಕಾಯಿಲೆಗಳು ಹಾಗೂ ರೋಗನಿರೋಧಕ ಶಕ್ತಿಯನ್ನೂ ಕೂಡಾ ಆಧರಿಸಿರುತ್ತದೆ. ಕೋವಿಡ್​-19 ಹೊಂದಿರುವ ಕ್ಯಾನ್ಸರ್​ ರೋಗಿಯ ಚಿಕಿತ್ಸೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಕ್ಯಾನ್ಸರ್ ಕೊರೊನಾ ಸೋಂಕಿತನ ಸಾವಿಗೆ ಕಾರಣವಾಗದ ಹಾಗೆ ನೋಡಿಕೊಳ್ಳುವ ಬಗ್ಗೆ ಗಮನಹರಿಸಬೇಕಿದೆ'' ಎಂದು ಮತ್ತೊಬ್ಬ ಸಂಶೋಧಕ ಅಮಿತ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಸೋಂಕಿತ ಲ್ಯುಕೇಮಿಯಾ ಹಾಗೂ ಲಿಂಪೋಮಾದಂತಹ ಕ್ಯಾನ್ಸರ್​ ಹೊಂದಿರುವ ಶೇ 37ರಷ್ಟು, ಶ್ವಾಸಕೋಶ ಕ್ಯಾನ್ಸರ್ ಹೊಂದಿರುವವರಲ್ಲಿ ಶೇಕಡಾ 55ರಷ್ಟು, ಸ್ತನ ಕ್ಯಾನ್ಸರ್​ ಹೊಂದಿರುವವರಲ್ಲಿ ಶೇ 14ರಷ್ಟು ಮರಣ ಪ್ರಮಾಣವಿದೆ ಎಂದು ಸಂಶೋಧನೆ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.