ಜನರ ಜೀವವನ್ನು ಬಲಿ ತೆಗೆದುಕೊಳ್ಳುವ ಯಾವುದೇ ಬಗೆಯ ಅಪಘಾತ ನೋಡಿದಾಗ ದುರಾದೃಷ್ಟದ ಬಗ್ಗೆ ಮಾತನಾಡಿ ನಿಟ್ಟುಸಿರು ಬಿಡುವುದಕ್ಕೆ ನಾವು ಒಗ್ಗಿಕೊಂಡಿದ್ದೇವೆ. ಆದರೆ ನಾವು ಅಂತಹ ಅನಾಹುತಗಳನ್ನು ಹತ್ತಿರದಿಂದ ಪರಿಶೀಲಿಸಿದಾಗ ಮಾತ್ರ ಅದರಲ್ಲಿನ ವ್ಯವಸ್ಥಿತ ವೈಫಲ್ಯಗಳನ್ನು ನೋಡಬಹುದು.
ಇತ್ತೀಚೆಗೆ ಉತ್ತರ ದೆಹಲಿಯ ಧಾನ್ಯ ಮಂಡಿಯೊಂದರಲ್ಲಿನ ಅಕ್ರಮ ಚೀಲ ಉತ್ಪಾದನಾ ಘಟಕದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 43 ಕಾರ್ಮಿಕರು ಸಾವನ್ನಪ್ಪಿದ್ದಾರೆ. ದೆಹಲಿಯ ಉಪಹಾರ್ ಸಿನಿಮಾ ಹಾಲ್‌ನಲ್ಲಿ 1997ರಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ 59 ಜನ ಸಾವನ್ನಪಿದ್ದರು. ಅದರ ಬಳಿಕದ 2ನೇ ದೊಡ್ಡ ಅಗ್ನಿ ದುರಂತ ಇದಾಗಿದೆ. ಈ ಅಗ್ನಿ ಅನಾಹುತಕ್ಕೆ ಕಾರಣ ಶಾರ್ಟ್ ಸರ್ಕ್ಯೂಟ್ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
600 ಅಡಿ ಪ್ರದೇಶದಲ್ಲಿ ನಿರ್ಮಿಸಲಾದ ನಾಲ್ಕು ಅಂತಸ್ತಿನ ಉತ್ಪಾದನಾ ಘಟಕವು ಅಗ್ನಿಶಾಮಕ ಇಲಾಖೆಯ ಅನುಮತಿ ಅಥವಾ ಸಾಮಾನ್ಯ ಅಗ್ನಿಶಾಮಕ ಮುನ್ನೆಚ್ಚರಿಕೆಗಳನ್ನು ಹೊಂದಿಲ್ಲ. ಅಗ್ನಿಶಾಮಕ ದಳದ 150 ಸಿಬ್ಬಂದಿ ಮತ್ತು 30 ಅಗ್ನಿಶಾಮಕ ಯಂತ್ರಗಳು ಗಂಟೆಗಳ ಕಾಲ ಬೆಂಕಿ ನಂದಿಸಿ ಅಂತಿಮವಾಗಿ 63 ಜನರ ಪ್ರಾಣ ಕಾಪಾಡಿದರು. ಸುತ್ತಲೂ ಆವರಿಸಿದ್ದ ದಟ್ಟನೆಯ ಬೆಂಕಿಯ ಜ್ವಾಲೆಗಳು ರಕ್ಷಣಾ ಕಾರ್ಯಾಚರಣೆ ಪ್ರಕ್ರಿಯೆಯಲ್ಲೂ ಕೆಲವರು ಬಲಿಯಾದರು.
ಈ ಫೆಬ್ರವರಿಯಲ್ಲಿ, ದೆಹಲಿಯ ಕರೋಲ್ ಬಾಗ್‌ನ ಹೋಟೆಲ್‌ನ 17 ನಿವಾಸಿಗಳು ಇದೇ ರೀತಿಯ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅಗ್ನಿಶಾಮಕ ಇಲಾಖೆ ಪ್ರಾಧಿಕಾರವು ಈ ಘಟನೆಯೊಂದಿಗೆ ಎಚ್ಚೆತ್ತುಕೊಂಡಿದೆ ಮತ್ತು 57 ಹೋಟೆಲ್‌ಗಳ ಎನ್‌ಒಸಿಯನ್ನು ಹಿಂತೆಗೆದುಕೊಂಡಿತು. ಎನ್ಒಸಿ ಅಥವಾ ಎನ್ಒಸಿ ಇಲ್ಲ ಎಂಬಿತ್ಯಾದಿ ಸುರಕ್ಷತೆ ಮತ್ತು ನಿರ್ವಹಣೆಯ ನಿಜವಾದ ಸ್ಥಿತಿಯ ಬಗ್ಗೆ ಯಾರಿಗೂ ಅರಿವಿಲ್ಲ. 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ 144 ನಗರಗಳಲ್ಲಿ ಬೆಂಕಿ ತಡೆಗಟ್ಟುವ ವ್ಯವಸ್ಥೆ ತೀರ ದುರ್ಬಲವಾಗಿದೆ. ಕಟ್ಟಡಗಳಲ್ಲಿನ ಸುರಕ್ಷತೆಯ ವೆಚ್ಚವನ್ನು ಉಳಿಸಿ ಲಾಭವನ್ನು ಪಡೆಯುವ ಬಿಲ್ಡರ್‌ಗಳ ಆಗಮನದೊಂದಿಗೆ, ಗುಣಮಟ್ಟದ ಕಟ್ಟಡಗಳ ಸಂಖ್ಯೆ ಅಣಬೆಯಂತೆ ತಲೆ ಎತ್ತುತ್ತಿದ್ದು, ಇವರ ಲಾಭದ ದುರಾಸೆಗೆ ಅನ್ಯಾಯವಾಗಿ ಜನರ ಜೀವ ಬಲಿಯಾಗುತ್ತಿದೆ. ಆದರೆ ನಾವು ಮಾತ್ರ ಕೊನೆಗೆ ಹಣಬರಹ, ದುರಾದೃಷ್ಟ ಎಂಬಿತ್ಯಾದಿ ಮಾತುಗಳೊಂದಿಗೆ ಪ್ರಕರಣವನ್ನು ಮರೆತುಬಿಡುತ್ತೇವೆ!
ಅಗ್ನಿಶಾಮಕ ಸುರಕ್ಷತಾ ಯೋಜನೆಯ ಕೊರತೆಯನ್ನು ದೆಹಲಿಯ ಹೈಕೋರ್ಟ್ ಅಪಾಯದ ಅಂಚಿನ ತೂಗುಗತ್ತಿ ಎಂದು ಸರಿಯಾಗಿ ವಿವರಿಸಿದೆ. ನಾಗರಿಕರನ್ನು ರಕ್ಷಿಸಲು ರಾಷ್ಟ್ರೀಯ ಕಟ್ಟಡ ಸಂಹಿತೆ (ಎನ್‌ಬಿಸಿ) ಪರಿಚಯಿಸಲಾಗಿದ್ದರೂ, ಭ್ರಷ್ಟ ಅಧಿಕಾರಿಗಳು ತಮ್ಮ ದುರಾಸೆಯಿಂದಾಗಿ ಅದನ್ನು ನಿಷ್ಪ್ರಯೋಜಕವಾಗಿಸಿದ್ದಾರೆ.
ಇನ್ನು, ಗುಜರಾತ್ನಲ್ಲಿ ಮೇ ತಿಂಗಳಲ್ಲಿ ಸಂಭವಿಸಿದ್ದ ಕಟ್ಟಡವೊಂದರ ಬೆಂಕಿ ಅವಘಡದಲ್ಲಿ 22 ವಿದ್ಯಾರ್ಥಿಗಳು ಸುಟ್ಟುಹೋದರು. ಮುಂಬೈನ ಕಮಲಾ ಮಿಲ್ಸ್‌ನಲ್ಲಿ ಡಿಸೆಂಬರ್ 2017 ರ ಬೆಂಕಿ ಅಪಘಾತದಲ್ಲಿ 14 ಕಾರ್ಮಿಕರು ಸಾವನ್ನಪ್ಪಿದ್ದರು. ಆಗಸ್ಟ್‌ನಲ್ಲಿ, ನವದೆಹಲಿಯ ಏಮ್ಸ್‌ನ ವೈರಾಲಜಿ ಘಟಕವು ಬೆಂಕಿಯ ಅನಾಹುತಕ್ಕೆ ತುತ್ತಾಗಿತ್ತು. ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಸಿನಿಮಾ ಹಾಲ್‌ಗಳು, ಕೈಗಾರಿಕೆಗಳು ಇವುಗಳಲ್ಲಿ ಯಾವುದೂ ಅಗ್ನಿ ದುರಂತದಿಂದ ದೂರ ಉಳಿದಿಲ್ಲ. ದೇಶಾದ್ಯಂತ ಬೆಂಕಿ ಅಪಘಾತಗಳಿಂದ ಸರಾಸರಿ 60 ಜೀವಗಳು ಕಳೆದುಹೋಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಪ್ರಕಾರ, 2010-14ರಲ್ಲಿ 1,12,000 ಅಗ್ನಿ ಅಪಘಾತಗಳಲ್ಲಿ 1,13,000 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸರಿಯಾದ ಯೋಜನೆ, ಮಾದರಿ ಇಲ್ಲದ ನಗರೀಕರಣವು ಅಪಾಯಗಳ ಸಂಭವನೀಯತೆಗೆ ಹೆಚ್ಚಿನ ಅವಕಾಶವನ್ನು ನೀಡಿದ್ದರೂ, ಅದನ್ನು ಎದುರಿಸಲು ಯಾವುದೇ ಸಮಾನವಾದ ಯೋಜನೆಗಳು ನಮ್ಮ ಬಳಿ ಇಲ್ಲವಾಗಿವೆ ಎಂಬುದು ದುರಂತ.
ದೃಢವಾದ ಅಗ್ನಿ ಸುರಕ್ಷತಾ ಕಾರ್ಯವಿಧಾನಗಳನ್ನು ಹೊಂದಿರುವ ರಾಷ್ಟ್ರಗಳು ಅಣಕು ಕಸರತ್ತುಗಳನ್ನು ನಡೆಸುವ ಮೂಲಕ ತಮ್ಮ ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿವೆ. 1995ರಲ್ಲಿನ ದಬ್ವಾಲಿ ಅಗ್ನಿ ದುರಂತವು 445 ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿತ್ತು. 2004 ರಲ್ಲಿ ಕುಂಬಕೋಣಂ ಬೆಂಕಿ ದುರಂತದಲ್ಲಿ 94 ಮಕ್ಕಳು ಸಾವನ್ನಪ್ಪಿದ್ದರು. ಈ ಹೃದಯ ವಿದ್ರಾವಕ ಅಪಘಾತಗಳ ನೆನಪುಗಳು ಇನ್ನೂ ಹಾಗೇ ಉಳಿದಿವೆ. ಆದರೆ ಅನೇಕ ಅಗ್ನಿ ಅನಾಹುತಗಳ ನಂತರವೂ ಅಗ್ನಿ ಸುರಕ್ಷತೆಯ ಬಗೆಗಿನ ಸರ್ಕಾರಗಳ ಕ್ರಮಗಳಲ್ಲಿ ಹಿನ್ನಡೆ ಉಂಟಾಗಿದೆ. ಅಗ್ನಿಶಾಮಕ ಸೇವೆಗಳನ್ನು ಭಾರತೀಯ ಸಂವಿಧಾನದ ಹನ್ನೆರಡನೇ ಪರಿಚ್ಛೇದದಡಿ ಸೇರಿಸಲಾಗಿದೆ.
ಕಟ್ಟಡ ಸುರಕ್ಷತಾ ಮಾರ್ಗಸೂಚಿಗಳು ಮತ್ತು ಅಗ್ನಿಶಾಮಕ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ವಿಫಲರಾದ ಅಸಮರ್ಥ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಗಳು ನಾಗರಿಕರ ಸುರಕ್ಷತೆಯನ್ನು ಅಪಾಯಕ್ಕೆ ದೂಡುತ್ತಿವೆ. ರಾಷ್ಟ್ರೀಯ ಕಟ್ಟಡ ಸಂಹಿತೆಯನ್ನು ಉಲ್ಲಂಘಿಸುವಲ್ಲಿ ಸರ್ಕಾರಿ ಕಟ್ಟಡಗಳು ಖಾಸಗಿ ನಿರ್ಮಾಣಕಾರರೊಂದಿಗೆ ಸ್ಪರ್ಧಿಸುತ್ತಿವೆ. 2014 ರಲ್ಲಿ, ಕೇಂದ್ರ ಮಾಹಿತಿ ಆಯೋಗವು ಸಂಸತ್ತು ಮತ್ತು ಸುಪ್ರೀಂಕೋರ್ಟ್ ಕಟ್ಟಡಗಳಲ್ಲಿನ ಅಗ್ನಿ ಸುರಕ್ಷತೆಯ ಕೊರತೆಯನ್ನು ಎತ್ತಿ ತೋರಿಸಿದೆ. ಎನ್‌ಬಿಸಿ ಜಾರಿಗೊಳಿಸುವ ಬಗ್ಗೆ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆಯಾಗಿ, ಸುಪ್ರೀಂ ಕೋರ್ಟ್ 2018 ರ ಜುಲೈನಲ್ಲಿ ನೋಟಿಸ್ ನೀಡಿತ್ತು. ಸುಪ್ರೀಂಕೋರ್ಟ್ ಅಗ್ನಿಶಾಮಕ ಮತ್ತು ಜೀವ ಸುರಕ್ಷತಾ ಕ್ರಮಗಳ ಅನುಚಿತ ಅನುಷ್ಠಾನಕ್ಕೆ ಸ್ಪಷ್ಟವಾಗಿ ಸೂಚಿಸಿತ್ತು. ಸಂಪೂರ್ಣ ಪರಿಶೀಲನೆಯ ನಂತರವೇ ನಿರ್ಮಾಣ ಪರವಾನಗಿಗಳನ್ನು ನೀಡಬೇಕು. ಅಗ್ನಿಶಾಮಕ ಇಲಾಖೆಯನ್ನು ಬಲಪಡಿಸಬೇಕು ಮತ್ತು ಅಗ್ನಿ ಸುರಕ್ಷತೆ ಜಾಗೃತಿ ಅಧಿವೇಶನಗಳನ್ನು ನಡೆಸಬೇಕು. ಈ ಹಂತಗಳ ಸಂಯೋಗದ ಅನುಷ್ಠಾನವು ಬೆಂಕಿಯ ಅನಾಹುತ ಮತ್ತು ಅವುಗಳಿಂದಾಗುತ್ತಿರುವ ಸಾವಿನಿಂದ ದೇಶವನ್ನು ಕಾಪಾಡಬಹುದು.