ETV Bharat / bharat

ನಿಶ್ಚಿತ ಠೇವಣಿ ಕುರಿತ ಕೇಂದ್ರದ ಇತ್ತೀಚಿನ ನಿರ್ಧಾರ ಹೂಡಿಕೆದಾರರಿಗೆ ಸಹಾಯ ಮಾಡಬಲ್ಲದೆ?

author img

By

Published : Feb 11, 2020, 10:20 PM IST

ಭವಿಷ್ಯದ ಅಗತ್ಯಗಳಿಗಾಗಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಉಳಿತಾಯ ಮಾಡುವುದು ಭಾರತೀಯರ ಜೀವನದ ಭಾಗ. ಮಕ್ಕಳ ಖರ್ಚಿಗೆ ನೀಡಿದ ಹಣದಲ್ಲಿ ಉಳಿತಾಯ ಮಾಡಿ ಮಣ್ಣಿನ ಮಡಿಕೆಯಲ್ಲಿಯೋ, ಚಿಲ್ಲರೆ ಡಬ್ಬಿಯಲ್ಲಿಯೋ ಕೂಡಿಡುವ ಸಂಸ್ಕೃತಿ ಹೇಳಿಕೊಡುವ ಆ ನಿಟ್ಟಿನಲ್ಲಿ ಮಕ್ಕಳನ್ನೂ ಉಳಿತಾಯಕ್ಕೆ ಪ್ರೋತ್ಸಾಹಿಸಿ ಬೆಳೆಸುವ ಸಮಾಜ ನಮ್ಮದು. ಹೀಗಾಗಿ ಉಳಿತಾಯ ಖಾತೆಗೆ ಸಾಮಾನ್ಯವಾಗಿ ಅವಲಂಬಿತವಾಗುವ ಬ್ಯಾಂಕುಗಳನ್ನು ನಂಬಿಕೆ ಮತ್ತು ವಿಶ್ವಾಸಾರ್ಹತೆಯ ಸಾಕಾರವೆಂದು ಪರಿಗಣಿಸಲಾಗುತ್ತದೆ.

Central Government recent decision, Central Government recent decision on fixed deposits, fixed deposits news, fixed deposits latest news,  ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರ, ನಿಶ್ಚಿತ ಠೇವಣಿ ಕುರಿತ ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರ, ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರ ಹೂಡಿಕೆದಾರರಿಗೆ ಸಹಾಯ ಮಾಡಬಲ್ಲದೆ,
ಸಂಗ್ರಹ ಚಿತ್ರ

ಸ್ವಲ್ಪ ಹೆಚ್ಚಿನ ಬಡ್ಡಿದರದಿಂದ ಆಕರ್ಷಿತರಾಗಿ ಮತ್ತು ಹಣವಿಡಲು ಬ್ಯಾಂಕ್ ಒಂದು ಸುರಕ್ಷಿತ ಸ್ಥಳ ಎಂಬ ನಂಬಿಕೆಯಿಂದಾಗಿ, ಲಕ್ಷಾಂತರ ಜನರು ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸಹಕಾರಿ ಬ್ಯಾಂಕುಗಳಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ ಇಂದು ಗ್ರಾಹಕರ ಆ ನಂಬಿಕೆಯೇ ಅಲ್ಲಾಡುತ್ತಿದೆ. ಪಂಜಾಬ್ ಮಹಾರಾಷ್ಟ್ರ ಸಹಕಾರ ಬ್ಯಾಂಕ್ (ಪಿಎಮ್‌ಸಿ)ನ ಇತ್ತೀಚಿನ ಹಣಕಾಸು ಹಗರಣವು ಬ್ಯಾಂಕುಗಳ ಪುರಾಣವನ್ನು ಮತ್ತು ಆರ್‌ಬಿಐನಂತಹ ನಿಯಂತ್ರಕ ಘಟಕವು ಬ್ಯಾಂಕಿಂಗ್‌ ವ್ಯವಸ್ಥೆಯನ್ನು ನಿಯಂತ್ರಿಸುವಲ್ಲಿ ಹೇಗೆ ವಿಫಲವಾಗಿದೆ ಎಂವ ಅಂಶವನ್ನು ಬೆಳಕಿಗೆ ತಂದಿದೆ. ಎಷ್ಟೊ ಬ್ಯಾಂಕ್‌ಗಳ ಮುಳುಗಡೆ ಗ್ರಾಹಕರಲ್ಲಿ ಭೀತಿ ಹುಟ್ಟಿಸಿದೆ. ಸಹಕಾರಿ ಬ್ಯಾಂಕ್‌ಗಳ ಹಗರಣಗಳು ಇತ್ತೀಚಿನ ದಿನಗಳಲ್ಲಿ ತೀರ ಸಹಜ ಎಂಬಂತಾಗಿದೆ. ಅಂತಹ ಹಗರಣಗಳನ್ನು ಪುನರಾವರ್ತಿಸಲು ಬಿಡಬಾರದು ಎಂಬ ಸಂಕಲ್ಪವನ್ನು ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇತ್ತೀಚಿಗೆ ಮಂಡಿಸಿದ ಬಜೆಟ್ ಅದರ ಪ್ರತಿಬಿಂಬದಂತೆ ಕಾಣುತ್ತಿದೆ.

ಸಹಕಾರಿ ಬ್ಯಾಂಕುಗಳ ವೃತ್ತಿಪರತೆಯನ್ನು ಹೆಚ್ಚಿಸಲು, ಅವುಗಳಲ್ಲಿ ಹೂಡಿಕೆ ಅವಕಾಶಗಳನ್ನು ಹೆಚ್ಚಿಸಲು ಮತ್ತು ಆರ್‌ಬಿಐ ಮೇಲ್ವಿಚಾರಣೆಯ ಮೂಲಕ ವರ್ಧಿತ ಕಾರ್ಯಕ್ಷಮತೆಗಾಗಿ 'ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ' ತಿದ್ದುಪಡಿ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅದರಂತೆ, 1,540 ಸಹಕಾರಿ ಬ್ಯಾಂಕುಗಳ 8.6 ಕೋಟಿ ದೇಶೀಯ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸಲು ಆರ್‌ಬಿಐ ತನ್ನ ನಿಯಂತ್ರಕ ಅಧಿಕಾರವನ್ನು ಚಲಾಯಿಸಲು ಅಧಿಕಾರ ನೀಡುವ ಪ್ರಮುಖ ಶಾಸನವನ್ನು ಮೋದಿ ಸರ್ಕಾರ ಅಂಗೀಕರಿಸಿತು.

ಹಿಂದಿನಂತೆ, ಸಹಕಾರಿ ರಿಜಿಸ್ಟ್ರಾರ್, ಸಹಕಾರಿ ಬ್ಯಾಂಕುಗಳ ಸ್ವಾಮ್ಯದ ಮೇಲ್ವಿಚಾರಣೆ ಮಾಡಬೇಕು. ಬ್ಯಾಂಕುಗಳ ನಿಯಂತ್ರಣಕ್ಕಾಗಿ ಕಾಲಕಾಲಕ್ಕೆ ಆರ್‌ಬಿಐ ಹೊರಡಿಸಿದ ಮಾರ್ಗಸೂಚಿಗಳನ್ನು ಸಹಕಾರಿ ಬ್ಯಾಂಕುಗಳು ಪಾಲಿಸಬೇಕು. ವಾಣಿಜ್ಯ ಬ್ಯಾಂಕುಗಳ ಮಾದರಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು (ಸಿಇಒ) ನೇಮಕ ಮಾಡಲು ಸಹಕಾರಿ ಬ್ಯಾಂಕುಗಳಿಗೆ ಆರ್‌ಬಿಐ ಅನುಮೋದನೆ ಅತ್ಯಗತ್ಯ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ನಿಯಮಿತ ಲೆಕ್ಕಪರಿಶೋಧನಾ ಪ್ರಕ್ರಿಯೆಯನ್ನು ಕೈಗೊಳ್ಳಬೇಕು. ದುರ್ಬಲ ಸಹಕಾರಿ ಬ್ಯಾಂಕುಗಳ ನಿರ್ವಹಣೆಯನ್ನು ಸ್ವಾಧೀನಪಡಿಸಿಕೊಳ್ಳಲು ಆರ್‌ಬಿಐಗೆ ಅಧಿಕಾರ ನೀಡಲಾಗುವುದು ಎಂಬಿತ್ಯಾದಿ ಕಠಿಣ ನಿಯಮಗಳಿಗೆ ಮೋದಿ ಸರ್ಕಾರ ಅನುಮೋದನೆ ನೀಡಿದೆ. ವಾಸ್ತವವಾಗಿ, ಈ ಸುಧಾರಣೆಗಳು ಹಗರಣಗಳನ್ನು ತಡೆಗಟ್ಟಲು ಮತ್ತು ಸಹಕಾರಿ ಬ್ಯಾಂಕುಗಳ ಹೆಸರನ್ನು ರಕ್ಷಿಸಲು ಮೊದಲೇ ಕಾರ್ಯಗತಗೊಳಿಸಬೇಕಿತ್ತು.

ನಗರ ಸಹಕಾರಿ ಬ್ಯಾಂಕುಗಳು ನಗರ ಪ್ರದೇಶಗಳಲ್ಲಿನ ಸಣ್ಣ ಪ್ರಮಾಣದ ಕೈಗಾರಿಕೆಗಳು, ಚಿಲ್ಲರೆ ವ್ಯಾಪಾರಿಗಳು, ಉದ್ಯಮಿಗಳು, ವೃತ್ತಿಪರರು ಮತ್ತು ಸ್ಥಿರ ಆದಾಯ ಗುಂಪುಗಳಿಗೆ ಹಣಕಾಸು ಸೇವೆಗಳನ್ನು ವಿತರಿಸುವ ಗುರಿಯನ್ನು ಹೊಂದಿದ್ದವು. ಇವುಗಳು ಗುರಿಯಂತೆ ಸರಿಯಾಗಿ ಕಾರ್ಯ ನಿರ್ವಹಿಸಿದರೆ, ಈ ಬ್ಯಾಂಕುಗಳು ಮೇಲೆ ತಿಳಿಸಿದ ಎಲ್ಲ ಕ್ಷೇತ್ರಗಳ ಆರ್ಥಿಕತೆ ಅಭಿವೃದ್ಧಿಗೆ ಹೊಸ ಜೀವವನ್ನೇ ತುಂಬಬಹುದಿತ್ತು. ಆದರೆ, ಸ್ವಾರ್ಥಿ ಮತ್ತು ಹಿತಾಸಕ್ತಿಗಳ ಕೈಯಲ್ಲಿ ಸಿಕ್ಕಿಹಾಕಿಕೊಂಡಿರುವ ಈ ವ್ಯವಸ್ಥೆಯು ಅತ್ಯಂತ ವಿಶ್ವಾಸದಿಂದ ಈ ವ್ಯವಸ್ಥೆಯನ್ನು ನಂಬಿ ವ್ಯವಹಾರ ನಡೆಸುವ ಅಸಹಾಯಕ ಹೂಡಿಕೆದಾರರನ್ನು ಮೋಸಗೊಳಿಸುತ್ತಿದೆ.

ಈ ವಲಯದ ಪುಶ್ಚೇತನಕ್ಕಾಗಿ ರಚಿತವಾದ ನರಸಿಂಹಮೂರ್ತಿ ನೇತೃತ್ವದ ಸಮಿತಿಯು ನಗರ ಸಹಕಾರಿ ಬ್ಯಾಂಕುಗಳ ಅಸಂಘಟಿತ ಸ್ಥಿತಿಯ ಮೂಲ ಕಾರಣಗಳನ್ನು ವಿಶ್ಲೇಷಿಸಿದೆ: ಸಮರ್ಪಕ ಬಂಡವಾಳದ ಕೊರತೆ, ನಕಲಿ ಸದಸ್ಯತ್ವ, ಸಾಲ ನೀಡುವ ಅಧಿಕಾರಗಳ ಕೇಂದ್ರೀಕರಣ, ಹತ್ತಿರದ ವ್ಯಕ್ತಿಗಳಿಗೆ ಮತ್ತು ಪ್ರಿಯರಿಗೆ ವಿವೇಚನೆಯಿಲ್ಲದ ಸಾಲ ವಿತರಣೆ, ಕಳಪೆ ಸಾಲ ಮರುಪಡೆಯುವಿಕೆ, ಇತ್ಯಾದಿಗಳು ಈ ಕ್ಷೇತ್ರದ ವೈಫಲ್ಯಕ್ಕೆ ಕಾರಣ ಎಂದಿದೆ. ಬ್ಯಾಂಕುಗಳ ಸಂಖ್ಯೆ ಮತ್ತು ಠೇವಣಿಗಳ ಗಾತ್ರವು ಗಣನೀಯವಾಗಿ ವಿಸ್ತರಣೆಗೊಂಡಿರುವುದ ಕೂಡ ಕ್ಷೇತ್ರದ ಹಿನ್ನಡೆಗೆ ಬಲವಾದ ಕಾರಣವಾಗಿದೆ ಎಂದು ಸಮಿತಿ ತಿಳಿಸಿದೆ.

1991ರಲ್ಲಿ ದೇಶದಾದ್ಯಂತ ನಗರ ಸಹಕಾರಿ ಬ್ಯಾಂಕ್‌ಗಳ ಸಂಖ್ಯೆ 1,307 ಆಗಿತ್ತು ಮತ್ತು ಅವುಗಳಲ್ಲಿದ್ದ ಠೇವಣಿ ಮೊತ್ತ 8,600 ಕೋಟಿ ರೂ.ನಷ್ಟಿತ್ತು. 2004ರ ವೇಳೆಗೆ ಸಹಕಾರಿ ಬ್ಯಾಂಕುಗಳ ಸಂಖ್ಯೆ 2,105 ಕ್ಕೆ ಏರಿದೆ ಮತ್ತು ಠೇವಣಿ 1 ಲಕ್ಷ ಕೋಟಿ ರೂ. ದಾಟಿದೆ. ಸತತ ವೈಫಲ್ಯಗಳಿಂದಾಗಿ ಬ್ಯಾಂಕುಗಳ ಸಂಖ್ಯೆ ಇಂದು 1,540ಕ್ಕೆ ಇಳಿದಿದ್ದರೂ, ಠೇವಣಿ 5 ಲಕ್ಷ ಕೋಟಿ ರೂ.ಗೆ ಏರಿದೆ. ಹಾಗೆಯೇ ದೊಡ್ಡ ಪ್ರಮಾಣದ ಹಗರಣಗಳ ಅಪಾಯವೂ ಹೆಚ್ಚಾಗಿದೆ! 11,600 ಕೋಟಿ ರೂ.ಗಳ ಠೇವಣಿ ಹೊಂದಿರುವ ಏಳು ರಾಜ್ಯಗಳಿಗೆ ಹರಡಿರುವ ಪಿಎಮ್‌ಸಿ ಬ್ಯಾಂಕ್ ತನ್ನ ಶೇ.70ಕ್ಕಿಂತ ಹೆಚ್ಚಿನ ಆಸ್ತಿಯನ್ನು ಲೂಟಿ ಮಾಡಲು ಅಂದರೆ ಹೌಸಿಂಗ್‌ ಡೆವಲಪ್‌ಮೆಂಟ್‌ ಆಂಡ್‌ ಇನ್ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ಗೆ 6,500 ಕೋಟಿ ರೂ. ನೀಡಲು 21,000 ನಕಲಿ ಖಾತೆಗಳನ್ನು ಸೃಷ್ಟಿಸಿತ್ತು. ಈ ಪ್ರಕರಣ ಈಗಾಗಲೇ ಆರ್‌ಬಿಐ ನೇರ ಮೇಲ್ವಿಚಾರಣೆಯಲ್ಲಿದೆ. ಆರ್‌ಬಿಐ ನೇರ ಮೇಲ್ವಿಚಾರಣೆಯಲ್ಲಿರುವ ಬ್ಯಾಂಕುಗಳ ಸಂಖ್ಯೆ ಇಪ್ಪತ್ತೈದಕ್ಕೆ ತಲುಪಿರುವ ಹಿನ್ನೆಲೆಯಲ್ಲಿ, ಅವುಗಳ ಅಕ್ರಮ ಚಟುವಟಿಕೆಗಳನ್ನು ತಡೆಯಲು ಕಾನೂನು ನಿಯಂತ್ರಣಗಳನ್ನು ಖಾತ್ರಿಪಡಿಸಿಕೊಳ್ಳಬೇಕು.

2002ಕ್ಕಿಂತ ಮೊದಲೇ ಕೇಂದ್ರ ಸರ್ಕಾರವು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಜಂಟಿ ನಿಯಂತ್ರಣ ವ್ಯವಸ್ಥೆಯು ಈ ರೀತಿ ಮೋಸ, ವಂಚನೆಯಂತಹ ಪ್ರಕರಣಗಳಿಗೆ ಕಾರಣ ಎಂದು ಕಂಡುಹಿಡಿದಿತ್ತು. ಬ್ಯಾಂಕುಗಳು ರಾತ್ರಿ ಬೆಳಗಾಗುವುದರೊಳಗೆ ತಮ್ಮ ಆಡಳಿತ ಮಂಡಳಿಯನ್ನು ಬದಲಿಸುವುದು, ಸಹಕಾರಿ ರಿಜಿಸ್ಟ್ರಾರ್ ಮತ್ತು ರಿಸರ್ವ್ ಬ್ಯಾಂಕ್ ತಮ್ಮ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳಲು ಒಬ್ಬರ ಮೇಲೊಬ್ಬರು ಬೆರಳು ತೋರಿಸುವುದು ಸಾಮಾನ್ಯ ಅಭ್ಯಾಸವಾಗಿದೆ. ಹೀಗಾಗಿಯೇ ಇಂತಹ ವಂಚನೆ ಪ್ರಕರಣಗಳಲ್ಲಿ ಹೂಡಿಕೆದಾರರಿಗೆ ನ್ಯಾಯ ಸಿಗುತ್ತಿಲ್ಲ. ಈ ರೀತಿ ಹಗರಣಗಳಿಂದ ಕೋಟ್ಯಂತರ ರೂಪಾಯಿ ಕಳೆದುಕೊಂಡ ಅದೆಷ್ಟೋ ಕುಟುಂಬಗಳಿವೆ.

ಮೌಲ್ಯವರ್ಧನೆಗೆ ಗುಣಾತ್ಮಕ ಶಿಫಾರಸುಗಳು:

ಬ್ಯಾಂಕುಗಳ ನಿರ್ವಹಣಾ ಮಂಡಳಿಗಳು ಹಣಕಾಸು ಬ್ಯಾಂಕಿಂಗ್ ಮತ್ತು ಲೆಕ್ಕಪರಿಶೋಧಕ ಕ್ಷೇತ್ರಗಳ ತಜ್ಞರನ್ನು ಒಳಗೊಂಡಿರಬೇಕು. ಜನ ಹೆಚ್ಚಿನ ಬಡ್ಡಿದರದ ಆಸೆಗೆ ಸಹಕಾರಿ ಬ್ಯಾಂಕ್‌ಗಳತ್ತ ಆಕರ್ಷಿತರಾಗುತ್ತಾರೆ. ಹೀಗಾಗಿ ಸಹಕಾರಿ ಬ್ಯಾಂಕುಗಳು ನಿಗದಿತ ಬ್ಯಾಂಕುಗಳಿಗಿಂತ ಶೇ.2ಕ್ಕಿಂತ ಹೆಚ್ಚಿನ ಬಡ್ಡಿ ದರವನ್ನು ಪಾವತಿಸದಂತೆ ನಿರ್ಬಂಧಿಸಬೇಕು, ಕಳೆದ ಹದಿನಾರು ವರ್ಷಗಳಿಂದ ಧೂಳು ಹಿಡಿದಿರುವ ಇಲ್ಲಿನ ಠೇವಣಿಗಳ ಮೇಲಿನ ವಿಮೆಯನ್ನು 2.5 ಲಕ್ಷ ರೂ.ವರೆಗೆ ವಿಸ್ತರಿಸಬೇಕು.

ಇತ್ತೀಚಿನ ಬಜೆಟ್‌ನಲ್ಲಿ ಠೇವಣಿ ವಿಮೆಯನ್ನು ಒಂದು ಲಕ್ಷದಿಂದ ಐದು ಲಕ್ಷಕ್ಕೆ ಏರಿಸುವ ಮೂಲಕ ಸಹಕಾರಿ ಬ್ಯಾಂಕುಗಳಲ್ಲಿನ ಠೇವಣಿದಾರರ ವಿಶ್ವಾಸವನ್ನು ಮರಳಿ ಪಡೆಯಲು ಕೇಂದ್ರ ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಂಡಿದೆ. ಸಹಕಾರಿ ಸಂಘಗಳ ಕಾಯ್ದೆಗೆ ಸಂವಿಧಾನದ ಬೆಂಬಲವಿದೆ ಮತ್ತು ಅದನ್ನು ರದ್ದುಗೊಳಿಸಲು ನಮಗೆ ಸಾಧ್ಯವಿಲ್ಲ ಎಂದಿರುವ ಮಾಜಿ ಉಪ ಗವರ್ನರ್ ಆರ್.ಗಾಂಧಿ ಅವರ ನೇತೃತ್ವದ ಸಮಿತಿಯು, ಸಹಕಾರಿ ಬ್ಯಾಂಕುಗಳು ಇತರೆ ರಾಷ್ಟ್ರೀಕೃತ ಬ್ಯಾಂಕುಗಳಂತೆ ನಿರ್ದೇಶಕರ ಅಧಿಕಾರವನ್ನು ತಮ್ಮ 'ಆಡಳಿತ ಮಂಡಳಿಗೆ ಒಪ್ಪಿಸಬೇಕು' ಎಂದು ಶಿಫಾರಸು ಮಾಡಿದೆ. ಇದರ ಕಾರ್ಯಾನುಷ್ಠಾನವಾಗಬೇಕಿದೆ.

ನೂರು ಕೋಟಿಗೂ ಹೆಚ್ಚು ಠೇವಣಿ ಹೊಂದಿರುವ ಸಹಕಾರಿ ಬ್ಯಾಂಕುಗಳು ನಿರ್ದೇಶಕರ ಮಂಡಳಿ ಮತ್ತು ನಿರ್ವಹಣಾ ಮಂಡಳಿಯನ್ನು ಸ್ಥಾಪಿಸಬೇಕು ಎಂದು ಈ ವರ್ಷದ ಆರಂಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿಗಳನ್ನು ಹೊರಡಿಸಿತು. ಅದರ ಪಾಲನೆಯಾಗುತ್ತಿದೆಯೆ ಎಂಬ ಮೇಲ್ವಿಚಾರಣೆ ಆಗಬೇಕಿದೆ. ಬಲವಾದ ನಿಯಮಗಳು ಮತ್ತು ನಿಬಂಧನೆಗಳೊಂದಿಗೆ, ಬಲವಾದ ವ್ಯವಸ್ಥೆಗಳು ಮತ್ತು ತೀಕ್ಷ್ಣವಾದ ಕಣ್ಗಾವಲು 'ಆಂತರಿಕ ಬೆಂಬಲದೊಂದಿಗೆ ಮೋಸ' ಮಾಡುವ ಭೀತಿಯಿಂದ ಠೇವಣಿದಾರರನ್ನು ರಕ್ಷಿಸಬಹುದು. ಈ ನಿಟ್ಟಿನಲ್ಲಿ ಸರ್ಕಾರವೂ ದಿಟ್ಟ ಹೆಜ್ಜೆಯನ್ನು ತೆಗೆದುಕೊಳ್ಳಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.