ETV Bharat / bharat

ಅಗತ್ಯ ಸರಕುಗಳ ಕಾಯ್ದೆಯಲ್ಲಿ ತಿದ್ದುಪಡಿ ಸೇರಿ ಮಹತ್ವದ ನಿರ್ಧಾರಗಳಿಗೆ ಕೇಂದ್ರ ಸಂಪುಟದ ಒಪ್ಪಿಗೆ - ಪ್ರಕಾಶ್ ಜಾವಡೇಕರ್ ಸುದ್ದಿಗೋಷ್ಠಿ

ರೈತರು ಈಗ ತಮ್ಮಉತ್ಪನ್ನವನ್ನು ಎಲ್ಲಿಯಾದರೂ ಮಾರಾಟ ಮಾಡುವ ಸ್ವಾತಂತ್ರ್ಯವಿದೆ. ದೇಶದಲ್ಲಿ ಕೃಷಿ ಉತ್ಪನ್ನಗಳು ಹೇರಳವಾಗಿವೆ. ಈ ನಿರ್ಧಾರದ ಮೂಲಕ ರೈತರನ್ನು ಕೃಷಿ ಉತ್ಪಾದಕ ಮಾರುಕಟ್ಟೆ ಸಮಿತಿಯಿಂದ ಮುಕ್ತಗೊಳಿಸಲಾಗಿದೆ. ಉತ್ತಮ ಪಾವತಿ ಮಾಡುವವರಿಗೆ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ರೈತರಿಗೆ ಈಗ ಅವಕಾಶವಿದೆ. ನಾವು ಒನ್ ನೇಷನ್ ಒನ್ ಮಾರುಕಟ್ಟೆಯತ್ತ ಸಾಗಿದ್ದೇವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.

praksh javadekar
ಪ್ರಕಾಶ್ ಜಾವಡೇಕರ್
author img

By

Published : Jun 3, 2020, 6:28 PM IST

Updated : Jun 3, 2020, 6:38 PM IST

ನವದೆಹಲಿ: ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರವೊಂದರಲ್ಲಿ, ರೈತರಿಗೆ ಸಂಬಂಧಿಸಿದ ಅಗತ್ಯ ಸರಕುಗಳ ಕಾಯ್ದೆಯಲ್ಲಿ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.

ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯ ನಿರ್ಧಾರಗಳ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ಇದು ಪ್ರಮುಖ ನಿರ್ಧಾರವಾಗಿದ್ದು, ಈ ನಿರ್ಣಯದಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

"ನಾವು ಅಗತ್ಯ ಸರಕುಗಳ ಕಾಯ್ದೆಗೆ ರೈತ ಸ್ನೇಹಿ ತಿದ್ದುಪಡಿಗಳನ್ನು ಮಾಡಿದ್ದೇವೆ. ಈ ನಿರ್ಧಾರದ ಮೂಲಕ ರೈತರಿಗೆ ನಿಯಂತ್ರಕ ವಾತಾವರಣವನ್ನು ಉದಾರೀಕರಣಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ರೈತರಿಗೆ ಅನುಕೂಲವಾಗಲು ಈ ನಿರ್ಧಾರಕ್ಕೆ ಬರಲಾಗಿದೆ.

ಕೃಷಿ ಕ್ಷೇತ್ರವನ್ನು ಪರಿವರ್ತಿಸಲು ಈ ನಿರ್ಧಾರ ಮಹತ್ವದ್ದಾಗಲಿದೆ ಎಂದು ಜಾವಡೇಕರ್ ತಿಳಿಸಿದ್ದಾರೆ.

ರೈತರು ಈಗ ತಮ್ಮಉತ್ಪನ್ನವನ್ನು ಎಲ್ಲಿಯಾದರೂ ಮಾರಾಟ ಮಾಡುವ ಸ್ವಾತಂತ್ರ್ಯವಿದೆ. ದೇಶದಲ್ಲಿ ಕೃಷಿ ಉತ್ಪನ್ನಗಳು ಹೇರಳವಾಗಿವೆ. ಈ ನಿರ್ಧಾರದ ಮೂಲಕ ರೈತರನ್ನು ಕೃಷಿ ಉತ್ಪಾದಕ ಮಾರುಕಟ್ಟೆ ಸಮಿತಿಯಿಂದ ಮುಕ್ತಗೊಳಿಸಲಾಗಿದೆ. ಉತ್ತಮ ಪಾವತಿ ಮಾಡುವವರಿಗೆ ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ರೈತರಿಗೆ ಈಗ ಸ್ವಾತಂತ್ರ್ಯವಿದೆ. ನಾವು ವನ್ ನೇಷನ್ ವನ್ ಮಾರುಕಟ್ಟೆಯತ್ತ ಸಾಗಿದ್ದೇವೆ ಎಂದು ಅವರು ಹೇಳಿದರು.

ಕೋಲ್ಕತಾ ಪೋರ್ಟ್ ಟ್ರಸ್ಟ್​ಗೆ ಮರುನಾಮಕರಣ

ಕೋಲ್ಕತಾ ಪೋರ್ಟ್ ಟ್ರಸ್ಟ್ ಅನ್ನು ಶ್ಯಾಮ ಪ್ರಸಾದ್ ಮುಖರ್ಜಿ ಪೋರ್ಟ್ ಟ್ರಸ್ಟ್ ಎಂದು ಮರುನಾಮಕರಣ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಜಾವಡೇಕರ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Last Updated : Jun 3, 2020, 6:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.