ETV Bharat / bharat

ರಾಜಧಾನಿಯಲ್ಲಿ ಧಾರಾಕಾರ ಮಳೆ: ಮನೆ ಕುಸಿದು ಮೂವರಿಗೆ ಗಾಯ - paschim vihar

ಮುಲ್ತಾನ್ ನಗರದ ಹರಿಸಿಂಗ್ ಪಾರ್ಕ್‌ ಬಳಿ ವಾಸ ಮಾಡುತ್ತಿದ್ದ ಕುಟುಂಬವೊಂದು ಭಾರಿ ಮಳೆಗೆ ತತ್ತರಿಸಿದೆ. ಇನ್ನು ಈ ಕುಟುಂಬ ಮಲಗಿದ್ದ ವೇಳೆ ಮುಂಜಾನೆ 5 ಗಂಟೆ ಸುಮಾರಿಗೆ ಮನೆ ಕುಸಿದಿದೆ. ಘಟನೆಯಲ್ಲಿ ಗಾಯಗೊಂಡ ಮೂವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿ ಪ್ರಕಾರ ಈ ಮನೆ ಸುಮಾರು 40 ವರ್ಷ ಹಳೆಯದ್ದು ಎಂದು ತಿಳಿದು ಬಂದಿದೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ದೆಹಲಿಯಲ್ಲಿ ಮನೆ ಕುಸಿದು ಮೂವರಿಗೆ ಗಾಯ
ದೆಹಲಿಯಲ್ಲಿ ಮನೆ ಕುಸಿದು ಮೂವರಿಗೆ ಗಾಯ
author img

By

Published : Aug 20, 2020, 10:52 AM IST

ನವದೆಹಲಿ: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಲ್ಲಿನ ಮುಲ್ತಾನ್ ನಗರದ ಹರಿಸಿಂಗ್ ಪಾರ್ಕ್ ಪ್ರದೇಶದಲ್ಲಿ ಮನೆ ಕುಸಿದಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಮುಲ್ತಾನ್ ನಗರದ ಹರಿಸಿಂಗ್ ಪಾರ್ಕ್‌ ಬಳಿ ವಾಸ ಮಾಡುತ್ತಿದ್ದ ಕುಟುಂಬವೊಂದು ಭಾರಿ ಮಳೆಗೆ ತತ್ತರಿಸಿದೆ. ಇನ್ನು ಈ ಕುಟುಂಬ ಮಲಗಿದ್ದ ವೇಳೆ, ಮುಂಜಾನೆ 5 ಗಂಟೆ ಸುಮಾರಿಗೆ ಮನೆ ಕುಸಿದಿದೆ. ಘಟನೆಯಲ್ಲಿ ಗಾಯಗೊಂಡ ಮೂವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿ ಪ್ರಕಾರ ಈ ಮನೆ ಸುಮಾರು 40 ವರ್ಷ ಹಳೆಯದ್ದಾಗಿದೆ ಎಂದು ತಿಳಿದು ಬಂದಿದೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ದೆಹಲಿಯಲ್ಲಿ ಮನೆ ಕುಸಿದು ಮೂವರಿಗೆ ಗಾಯ

ಇನ್ನು ಈ ಘಟನೆ ಮಾತ್ರವಲ್ಲದೇ ಕಿರಾರಿ ಅಸೆಂಬ್ಲಿಯ ಹಿಂದ್ ವಿಹಾರ್ ಪ್ರದೇಶದಲ್ಲಿ 70 ಗಜಗಳಷ್ಟು ಮನೆ ಕುಸಿದಿದ್ದು, ಭೀತಿಯ ವಾತಾವರಣ ಸೃಷ್ಟಿಸಿದೆ. ಅಷ್ಟೇ ಅಲ್ಲದೆ, ಅನೇಕ ಮನೆಗಳು ಬಿರುಕು ಬಿಟ್ಟಿವೆ. ಈಗಾಗಲೇ ಹಲವಾರು ಕುಟುಂಬಗಳು ವಲಸೆ ಹೋಗುತ್ತಿವೆ. ಈ ಪ್ರದೇಶದಲ್ಲಿ ವಾಸ ಮಾಡುವ ಜನರಿಗೆ ಸರಿಯಾದ ಮೂಲ ಸೌಕರ್ಯಗಳಿಲ್ಲ. ಚರಂಡಿ ನೀರು ಮನೆಯೊಳಗೆ ನುಗ್ಗಿದ್ದು, ಸಂಕಷ್ಟ ಅನುಭವಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಇಲ್ಲಿನ ಜನಪ್ರತಿನಿಧಿ ಅಭಿವೃದ್ಧಿ ಹೆಸರಲ್ಲಿ ಮೋಸ ಮಾಡುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

ಇನ್ನು ಕುಸಿದ ಮನೆಯ ಮಾಲೀಕ ಮಾತನಾಡಿದ್ದು, "2 ದಿನಗಳ ಹಿಂದೆ ನಾವು ಮನೆ ಖಾಲಿ ಮಾಡಿದ್ದೆವು. ಒಂದು ವೇಳೆ ನಾವು ಮನೆ ಬಿಟ್ಟು ಬರದಿದ್ದರೆ ನಮ್ಮಲ್ಲಿ ಯಾರಾದರೂ ಸಾವನ್ನಪ್ಪುವ ಸಂಭವವಿತ್ತು. ಇದೀಗ ಇಡೀ ಜಾಗ ನೀರಿನಿಂದ ಆವೃತವಾಗಿದೆ. ವಾಸ ಮಾಡಲು ಮನೆಯಿಲ್ಲ. ನಮ್ಮ ಸಮಸ್ಯೆಗಳನ್ನು ಕೇಳಲು ಶಾಸಕರು, ಸಂಸದರು ಮುಂದೆ ಬರುತ್ತಿಲ್ಲ" ಎಂದು ಆರೋಪ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.