ETV Bharat / bharat

ಕೇಂದ್ರ ಬಜೆಟ್​ ಅಧಿವೇಶನದ ಹಿನ್ನೆಲೆ: ಜ.30ರಂದು ಸರ್ವಪಕ್ಷ ಸಭೆ ಕರೆ ಪ್ರಧಾನಿ - Budget session 2021

ಕೇಂದ್ರ ಬಜೆಟ್ ಮಂಡನೆ ಫೆ.1ರಂದು ನಡೆಯಲಿದ್ದು, ಈ ಹಿನ್ನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 30 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ.

Budget session
ಪ್ರಧಾನಿ ನರೇಂದ್ರ ಮೋದಿ
author img

By

Published : Jan 20, 2021, 11:43 AM IST

ನವದೆಹಲಿ: 2021-2022ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಫೆ.1ರಂದು ನಡೆಯಲಿದ್ದು, ಈ ಹಿನ್ನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜನವರಿ 30 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ ಹೇಳಿದ್ದಾರೆ.

ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜನವರಿ 30 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿಯವರು ಸರ್ವಪಕ್ಷ ಸಭೆ ನಡೆಸಲಿದ್ದಾರೆಂದು ಹೇಳಿದ್ದಾರೆ. ಬಜೆಟ್ ಅಧಿವೇಶನವು ಮೊದಲ ಭಾಗ ಜನವರಿ 29 ರಿಂದ ಫೆಬ್ರವರಿ 15 ರವರೆಗೆ ನಡೆದರೆ, ಮಾರ್ಚ್ 8 ರಿಂದ ಏಪ್ರಿಲ್ 8 ರವರೆಗೆ ಎರಡನೇ ಭಾಗ ನಡೆಯಲಿದೆ ಎಂದರು.

ಇನ್ನು ಸರ್ವಪಕ್ಷ ಸಭೆ ಜನವರಿ 30 ರಂದು ನಡೆಯಲಿದ್ದು, ಅಲ್ಲಿ ಸರ್ಕಾರವು ಸಂಸತ್​ ಅಧಿವೇಶನದ ಸುಗಮ ಕಲಾಪಕ್ಕಾಗಿ, ಸದನದ ಕಾರ್ಯಕಲಾಪಗಳ ಮಾಹಿತಿಯನ್ನ ಸರ್ವಪಕ್ಷಗಳ ಮುಂದಿಟ್ಟು, ಸುಲಲಿತ ಕಲಾಪಕ್ಕೆ ಸಹಕಾರ ನೀಡುವಂತೆ ಕೇಳಿಕೊಳ್ಳಲಿದೆ. ಅಷ್ಟೇ ಅಲ್ಲ ಸರ್ವ ಪಕ್ಷಗಳ ನಾಯಕರಿಂದ ಸಲಹೆಗಳನ್ನು ಸ್ವೀಕರಿಸಲಿದೆ ಎಂಬ ಮಾಹಿತಿಯನ್ನ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.