ETV Bharat / bharat

ಸೆಲ್ ಫೋನ್, ಸೆಮಿ ಕಂಡಕ್ಟರ್ ಮತ್ತು ಇತರೆ ಎಲೆಕ್ಟ್ರಾನಿಕ್ ಸಾಧನಗಳ ತಯಾರಿಕೆಗೆ ಯೋಜನೆ - ಬಜೆಟ್ ​2020 ಲೇಟೆಸ್ಟ್ ನ್ಯೂಸ್

ಸೆಲ್​ ಫೋನ್, ಸೆಮಿ ಕಂಡಕ್ಟರ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸುವ ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​ನಲ್ಲಿ ಪ್ರಸ್ತಾಪಿಸಿದ್ದಾರೆ.

Budget 2020: FM proposes scheme for manufacturing cell phones, semi conductors, electronic devices
ಸೆಲ್ ಫೋನ್, ಸೆಮಿ ಕಂಡಕ್ಟರ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳ ತಯಾರಿಕೆಗೆ ಯೋಜನೆ
author img

By

Published : Feb 1, 2020, 2:05 PM IST

ನವದೆಹಲಿ: ಸೆಲ್​ಫೋನ್, ಸೆಮಿ ಕಂಡಕ್ಟರ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ತಯಾರಿಸುವ ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್​ನಲ್ಲಿ ಪ್ರಸ್ತಾಪಿಸಿದ್ದಾರೆ.

Budget 2020: FM proposes scheme for manufacturing cell phones, semi conductors, electronic devices
ಸೆಲ್ ಫೋನ್, ಸೆಮಿ ಕಂಡಕ್ಟರ್ ಮತ್ತು ಇತರೆ ಎಲೆಕ್ಟ್ರಾನಿಕ್ ಸಾಧನಗಳ ತಯಾರಿಕೆಗೆ ಯೋಜನೆ

ದೇಶಿಯ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಎಲೆಕ್ಟ್ರಾನಿಕ್ ಉತ್ಪಾದನೆಯಲ್ಲಿ ಹೂಡಿಕೆಯನ್ನು ಆಕರ್ಷಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಮೋದಿ ಸರ್ಕಾರವು ಹಣಕಾಸು ವರ್ಷದ ಈ ಮೊದಲ ಸಂಪೂರ್ಣ ಬಜೆಟ್‌ನಲ್ಲಿ ತನ್ನ ಎರಡನೇ ಅವಧಿಯಲ್ಲಿ ಪ್ರತಿ ವಲಯಕ್ಕೂ ಏನನ್ನಾದರೂ ನೀಡಲು ಪ್ರಯತ್ನಿಸುತ್ತಿದೆ.

ನೈಸರ್ಗಿಕ ಅನಿಲ ಪೈಪ್‌ಲೈನ್ ಗ್ರಿಡ್ ಅನ್ನು ಈಗಿನ 16,000 ಕಿ.ಮೀ. ನಿಂದ 27,000 ಕಿ.ಮೀ. ಗೆ ವಿಸ್ತರಿಸಲಾಗುವುದು. 2020-21ರಲ್ಲಿ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ 22,000 ಕೋಟಿ ಮೀಸಲಿಡಲಾಗುವುದು. 2020-21ರಲ್ಲಿ ಸಾರಿಗೆ ಮೂಲಸೌಕರ್ಯಕ್ಕಾಗಿ 1.7 ಲಕ್ಷ ಕೋಟಿ ರೂ. ಒದಗಿಸಲಾಗಿದೆ ಎಂದರು.

18,600 ಕೋಟಿ ಬೆಂಗಳೂರು ಸಬ್ ಅರ್ಬನ್​ ರೈಲ್ವೆ ಯೋಜನೆಯನ್ನು ಆರಂಭಿಸಲಾಗುವುದು. ವಿದ್ಯುತ್ ಮತ್ತು ನವೀಕರಣ ವಲಯಕ್ಕೆ 22,000 ಕೋಟಿ ರೂ. ಹಂಚಿಕೆ ಮಾಡಲಾಗುವುದು. ಮುಂದಿನ ಮೂರು ವರ್ಷಗಳಲ್ಲಿ ಸ್ಮಾರ್ಟ್ ಮೀಟರ್‌ಗಳನ್ನು ಸಾಂಪ್ರದಾಯಿಕ ಮೀಟರ್‌ಗಳಿಂದ ಬದಲಾಯಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.

2020-21ರಲ್ಲಿ ಸಾರಿಗೆ ಮೂಲಸೌಕರ್ಯಕ್ಕಾಗಿ 1.7 ಲಕ್ಷ ಕೋಟಿ ರೂ.ಗಳನ್ನು ನೀಡಲು ಪ್ರಸ್ತಾಪಿಸಿದ್ದೇವೆ. ದೊಡ್ಡ ಸೌರಶಕ್ತಿ ಘಟಕಗಳ ಸ್ಥಾಪನೆ, ಕೈಗಾರಿಕಾ ಅಭಿವೃದ್ಧಿಗೆ 2,7300 ಕೋಟಿ ರೂ. ನೀಡುವ ಪ್ರಸ್ತಾವನೆ ಇದೆ.

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ 2023ರ ವೇಳೆಗೆ ಪೂರ್ಣಗೊಳ್ಳಲಿದೆ. ನ್ಯಾಷನಲ್ ಲಾಜಿಸ್ಟಿಕ್ಸ್ ನೀತಿಯನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ಇದರಡಿ 6 ಸಾವಿರಕ್ಕೂ ಹೆಚ್ಚು ಯೋಜನೆಗಳನ್ನು ಗುರುತಿಸಲಾಗಿದೆ.

ನಾವೀನ್ಯತೆಗಳ ಆಧಾರದ ಮೇಲೆ ಹೊಸ ಆರ್ಥಿಕತೆ, ಐಒಟಿ, 3ಡಿ ಪ್ರಿಂಟಿಂಗ್, ಕ್ವಾಂಟಮ್ ಕಂಪ್ಯೂಟಿಂಗ್ ದೇಶಾದ್ಯಂತ ದತ್ತಾಂಶ ಕೇಂದ್ರ ಉದ್ಯಾನವನಗಳನ್ನು ನಿರ್ಮಿಸಲು ಖಾಸಗಿ ವಲಯಕ್ಕೆ ವಿಶ್ವ ಕ್ರಮಾಂಕದ ಹೊಸ ನೀತಿಯನ್ನು ಮರು-ಆವಿಷ್ಕರಿಸುತ್ತಿದೆ ಎಂದು ಹಣಕಾಸು ಸಚಿವರು ಹೇಳಿದರು.

ಭಾರತವು ದೇಶಿಯ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಎಲೆಕ್ಟ್ರಾನಿಕ್ ಉತ್ಪಾದನೆಯಲ್ಲಿ ಹೂಡಿಕೆಯನ್ನು ಆಕರ್ಷಿಸುವ ಅಗತ್ಯವಿದೆ ಎಂದು ಗುರುತಿಸಿದ್ದು, 6 ಸಾವಿರಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.