ಗುವಾಹಟಿ(ಅಸ್ಸೋಂ): ಗಡಿ ರಕ್ಷಣಾ ಪಡೆಯ (ಬಿಎಸ್ಎಫ್) ಸಹಾಯಕ ಸಬ್ಇನ್ಸ್ಪೆಕ್ಟರ್ ಮತ್ತು ಆತನ ಪತ್ನಿ 'ವಿದೇಶಿ ಪ್ರಜೆ' ಎಂದು ಅಸ್ಸೋಂನ ಟ್ರಿಬ್ಯೂನಲ್ ಘೋಷಿಸಿ ಅಚ್ಚರಿ ಮೂಡಿಸಿದೆ.
ಪಂಜಾಬ್ನ 144 ಬೆಟಾಲಿಯನ್ನಲ್ಲಿ ರೆಹಮಾನ್ ಕಾರ್ಯನಿರ್ವಹಿಸುತ್ತಿದ್ದು, ರೆಹಮಾನ್ ಮತ್ತು ಆತನ ಪತ್ನಿಯನ್ನು ಅನುಮಾನಾಸ್ಪದ ಪ್ರಜೆಗಳು ಎಂದು ಎನ್‌ಆರ್‌ಸಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿ ಪ್ರಕರಣವನ್ನು ಜೋಹ್ರಾತ್ನ ಟ್ರಿಬ್ಯೂನಲ್ಗೆ ಶಿಫಾರಸು ಮಾಡಿದ್ದರು.
ಜುಲೈನಲ್ಲಿ ರಜೆ ಮೇಲೆ ತೆರಳಿದ್ದ ರೆಹಮಾನ್ಗೆ ಟ್ರಿಬ್ಯುನಲ್ ತೀರ್ಪು ಹೊರಬಿದ್ದಿರುವುದು ತಿಳಿದು ಬಂದಿದೆ. ನಾವು 'ವಿದೇಶಿಯರು' ಎಂಬ ನ್ಯಾಯಮಂಡಳಿ ತೀರ್ಪು ಪ್ರಶ್ನಿಸಿ ಅವರು ಗುವಾಹಟಿ ಹೈಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ.
ಅಸ್ಸೋಂನ ರಾಷ್ಟ್ರೀಯ ಪೌರ ನೋಂದಣಿ (ನ್ಯಾಷನಲ್ ರಿಜಿಸ್ಟ್ರಾರ್ ಆಫ್ ಸಿಟಿಜನ್-ಎನ್‌ಆರ್‌ಸಿ) ಅಂತಿಮ ಪಟ್ಟಿ ಆ.31ರಂದು ಆನ್‍ಲೈನ್‍ನಲ್ಲಿ ಪ್ರಕಟಗೊಳ್ಳಲಿದೆ. ಈ ಪಟ್ಟಿಗಾಗಿ ನಡೆದ ನೋಂದಣಿ ಪ್ರಕ್ರಿಯೆ ಸಾಕಷ್ಟು ವಿವಾದ ಸೃಷ್ಟಿ ಮಾಡುತ್ತಿದೆ.