ETV Bharat / bharat

ಚೀನಾ ಗಡಿ ಬಿಕ್ಕಟ್ಟಿನ ನಡುವೆಯೇ ನೂತನ ಹೆದ್ದಾರಿ ನಿರ್ಮಾಣ.. 6 ಗಂಟೆಗಳಲ್ಲಿ ಮನಾಲಿಯಿಂದ ಲೇಹ್​ಗೆ ಪ್ರಯಾಣ

ಶುತ್ರು ರಾಷ್ಟ್ರಗಳು ಪತ್ತೆ ಹಚ್ಚಲಾಗದ, ವರ್ಷಪೂರ್ತಿ ಭದ್ರತಾ ಪಡೆಗಳಿಗೆ ಸಂಪರ್ಕ ಕಲ್ಪಿಸುವ ಹಾಗೂ ಸಂಚಾರದ ಸಮಯ ಉಳಿಸುವ ಲೇಹ್ - ಲಡಾಖ್ ಪ್ರದೇಶದಲ್ಲಿನ 'ನಿಮ್ಮು-ಪದಮ್-ದಾರ್ಚಾ' ಎಂದು ಕರೆಯಲಾಗುವ ರಸ್ತೆ ಕಾಮಗಾರಿಯನ್ನು ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಬಹುತೇಕ ಪೂರ್ಣಗೊಳಿಸಿದೆ.

new highway
ನಿಮ್ಮು-ಪದಮ್-ದಾರ್ಚಾ
author img

By

Published : Sep 6, 2020, 4:57 PM IST

ಲೇಹ್ (ಲಡಾಖ್): ಭಾರತ-ಚೀನಾ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯ ಮಧ್ಯೆ, ಲೇಹ್ - ಲಡಾಖ್ ಪ್ರದೇಶದಲ್ಲಿನ 'ನಿಮ್ಮು-ಪದಮ್-ದಾರ್ಚಾ' ಎಂದು ಕರೆಯಲಾಗುವ ರಸ್ತೆ ಕಾಮಗಾರಿಯನ್ನು ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಬಹುತೇಕ ಪೂರ್ಣಗೊಳಿಸಿದೆ.

ಈ ಹಿಂದೆ ನಿರ್ಮಿಸಿದ ಶ್ರೀನಗರ-ಕಾರ್ಗಿಲ್-ಲೇಹ್ ಮತ್ತು ಮನಾಲಿ ಸರ್ಚು-ಲೇಹ್ ರಸ್ತೆಗಳು ಅಂತಾರಾಷ್ಟ್ರೀಯ ಗಡಿಗೆ ಹತ್ತಿರದಲ್ಲಿರುವುದರಿಂದ ಶತ್ರು ರಾಷ್ಟ್ರಗಳು ಇವುಗಳ ಮೇಲೆ ನಿಗಾ ಇಡುತ್ತಿದ್ದವು. ಆದರೆ ನಿಮ್ಮು-ಪದಮ್-ದಾರ್ಚಾ ರಸ್ತೆಯು ಭದ್ರತಾ ಪಡೆಗಳಿಗೆ ಲಡಾಖ್​ನಿಂದ ದಾರ್ಚಾಗೆ ಸಂಪರ್ಕಿಸುವ ಕಾರ್ಯತಂತ್ರದ ಹೆದ್ದಾರಿಯಾಗಿದೆ. ಈ ರಸ್ತೆ ಯಾವುದೇ ಗಡಿಗೆ ಹತ್ತಿರದಲ್ಲಿಲ್ಲ, ಹೀಗಾಗಿ ನೆರೆಯ ರಾಷ್ಟ್ರಗಳು ಈ ಮಾರ್ಗ ಪತ್ತೆ ಹಚ್ಚಲು ಸಾಧ್ಯವಿಲ್ಲ.

ಇದಲ್ಲದೆ, ಮನಾಲಿಯಿಂದ ಲೇಹ್ ತಲುಪಲು ಹಳೆಯ ಎರಡು ರಸ್ತೆ ಮಾರ್ಗಗಳು ಸುಮಾರು 12-14 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಈ ರಸ್ತೆ ಮೂಲಕ ಕೇವಲ 6-7 ಗಂಟೆಗಳಲ್ಲಿ ತಲುಪಬಹುದಾಗಿದ್ದು, ಸಾಕಷ್ಟು ಸಮಯವನ್ನು ಉಳಿಸುತ್ತದೆ,

ಈ ರಸ್ತೆಯ ಇನ್ನೊಂದು ವಿಶೇಷವೆಂದರೆ ಇದು ವರ್ಷದ 365 ದಿನಗಳ ಕಾಲವೂ ತೆರೆದಿರುತ್ತದೆ. ಆದರೆ ಆ ಎರಡು ರಸ್ತೆಗಳು ಕೇವಲ 6-7 ತಿಂಗಳುಗಳವರೆಗೆ ಮಾತ್ರ ತೆರೆದಿರುತ್ತವೆ ಹಾಗೂ ನವೆಂಬರ್‌ನಿಂದ ಆರು ತಿಂಗಳ ಅವಧಿಗೆ ಮುಚ್ಚಲ್ಪಡುತ್ತವೆ.

258 ಕಿಲೋ ಮೀಟರ್ ಉದ್ದದ ರಸ್ತೆ ಇದಾಗಿದ್ದು, ಕೇವಲ 30 ಕಿಲೋ ಮೀಟರ್ ವ್ಯಾಪ್ತಿಯ ಕಾಮಗಾರಿ ಮಾತ್ರ ಬಾಕಿಯಿದೆ. ಉಳಿದಂತೆ ಎಲ್ಲಾ ಕೆಲಸ ಮುಕ್ತಾಯವಾಗಿದೆ. ಬೃಹತ್​ ಪ್ರಮಾಣದ ರಕ್ಷಣಾ ಉಪಕರಣಗಳನ್ನು ಹೊರುವ ಭಾರೀ ವಾಹನಗಳ ಸಂಚಾರಕ್ಕೆ ಈ ರಸ್ತೆ ಈಗ ಸಿದ್ಧವಾಗಿದೆ ಎಂದು ಬಿಆರ್‌ಒ ಇಂಜಿನಿಯರ್‌ಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.