ETV Bharat / bharat

ಉತ್ತರಾಖಂಡದ ಸಂಪ್ರದಾಯದಂತೆ ವಿವಾಹವಾದ ವಿದೇಶಿ ಜೋಡಿ: ಫೋಟೋ Viral - ಉತ್ತರಾಖಂಡ

ಉತ್ತರಾಖಂಡದ ಸಾಂಪ್ರದಾಯಿಕ ಉಡುಪಿನಲ್ಲಿ ಇಂಗ್ಲೆಂಡ್​ ಹಾಗೂ ದಕ್ಷಿಣ ಆಫ್ರಿಕಾ ಮೂಲದ ಜೋಡಿಯೊಂದು ರುದ್ರಪ್ರಯಾಗ್ ಜಿಲ್ಲೆಯ ತ್ರಿಯುಗಿ ನಾರಾಯಣ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ. ಇದೀಗ ಈ ದಂಪತಿ ನಡೆಸಿರುವ ಫೋಟೋಶೂಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

wedding in Uttarakhand
ಉತ್ತರಾಖಂಡದಲ್ಲಿ ವಿದೇಶಿ ಜೋಡಿ ವಿವಾಹc
author img

By

Published : Mar 14, 2020, 7:36 PM IST

ರುದ್ರಪ್ರಯಾಗ್: ಭೂಪ್ರದೇಶಗಳು, ನದಿಗಳು, ಸರೋವರಗಳು ಮತ್ತು ಗಿರಿ ಶಿಖರಗಳಿಂದ ಕೂಡಿರುವ ಸುಂದರ ರಾಜ್ಯ ಉತ್ತರಾಖಂಡ, ಡೆಸ್ಟಿನೇಷನ್​ ಮ್ಯಾರೇಜ್​ಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ.

ಉತ್ತರಾಖಂಡದ ವಿಭಿನ್ನ ಸಂಸ್ಕೃತಿ ಮತ್ತು ಸಂಪ್ರದಾಯಗಳಂತೆ ಮದುವೆಯಾಗಲು ಇಲ್ಲಿಗೆ ಅನೇಕ ವಿದೇಶಿಗರು ಕೂಡ ಬರುತ್ತಾರೆ. ಇದರಂತೆ ಇತ್ತೀಚೆಗಷ್ಟೇ ಉತ್ತರಾಖಂಡದ ಸಾಂಪ್ರದಾಯಿಕ ಉಡುಪಿನಲ್ಲಿ ಇಂಗ್ಲೆಂಡ್​ ಹಾಗೂ ದಕ್ಷಿಣ ಆಫ್ರಿಕಾ ಮೂಲದ ಜೋಡಿಯೊಂದು ರುದ್ರಪ್ರಯಾಗ್ ಜಿಲ್ಲೆಯ ತ್ರಿಯುಗಿ ನಾರಾಯಣ ದೇವಸ್ಥಾನದಲ್ಲಿ ವಿವಾಹವಾದರು.

ಇದೇ ದೇವಾಲಯದಲ್ಲಿ ಶಿವನು ಪಾರ್ವತಿ ದೇವಿಯನ್ನು ಮದುವೆಯಾದನೆಂದು ನಂಬಲಾಗಿದೆ. ಇನ್ನೊಂದು ವಿಶೇಷವೆಂದರೆ ಈ ದೇವಾಲಯದ ಮುಂದೆ ಉರಿಯುತ್ತಿರುವ ಬೆಂಕಿ, ಎಂದಿಗೂ ಆರದೇ ಸದಾ ಉರಿಯುತ್ತಿರುತ್ತದೆ. ಈ ಹಿಂದೆ ಕೂಡ ಇದೇ ದೇವಾಲಯದಲ್ಲಿ ಅನೇಕ ವಿದೇಶಿ ಜೋಡಿಗಳು ವಿವಾಹವಾಗಿದ್ದರು.

ಮೂಗುತಿ, ಕೆಂಪು ಸೀರೆ ತೊಟ್ಟ ವಧು, ಹಳದಿ ಧೋತಿ ಕುರ್ತಾ, ಕಪ್ಪು ಪಹಡಿ ಟೋಪಿ ಧರಿಸಿದ ವರ. ಹೀಗೆ ಉತ್ತರಾಖಂಡದ ಸಾಂಪ್ರದಾಯಿಕ ದಿರಿಸಿನಲ್ಲಿ ಇಂಗ್ಲೆಂಡ್​ ಹಾಗೂ ದಕ್ಷಿಣ ಆಫ್ರಿಕಾ ಮೂಲದ ಈ ಜೋಡಿ ಹಸೆಮಣೆ ಏರಿದೆ. ಈ ದಂಪತಿ ಭಾರತದ ಸಂಸ್ಕೃತಿಗೆ ಮಾರುಹೋಗಿದ್ದು, ಇಲ್ಲಿನ ಸಾಂಪ್ರದಾಯಿಕ ಶೈಲಿಯಲ್ಲಿ ವಿವಾಹವಾಗಲು ಬಯಸಿದ್ದರು ಎಂದು ವೆಡ್ಡಿಂಗ್ ಪ್ಲಾನರ್ ರಂಜನಾ ರಾವತ್ ಹೇಳಿದ್ದಾರೆ. ಇದೀಗ ಈ ದಂಪತಿ ನಡೆಸಿರುವ ಫೋಟೋಶೂಟ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.