ETV Bharat / bharat

ಖಾಸಗಿ ವಿಡಿಯೋ ಸೋರಿಕೆ ಮಾಡಿದ ಬಾಯ್ ಫ್ರೆಂಡ್: ಆತ್ಮಹತ್ಯೆಗೆ ಶರಣಾದ ಬಾಲಕಿ - ಅಹಮದಾಬಾದ್​

ಬಾಯ್​​ ಫ್ರೆಂಡ್​ ತನ್ನ ಖಾಸಗಿ ವಿಡಿಯೋ ವೈರಲ್​ ಮಾಡುತ್ತಿದ್ದಂತೆ ತೀವ್ರವಾಗಿ ಮನನೊಂದ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

Boyfriend leaks intimate video
ಬಾಯ್​​ಫ್ರೆಂಡ್​​​ನಿಂದ​ ಖಾಸಗಿ ವಿಡಿಯೋ ಲೀಕ್​
author img

By

Published : Mar 10, 2020, 4:27 PM IST

ಅಹಮದಾಬಾದ್​: ಬಾಯ್ ಫ್ರೆಂಡ್ ಒಬ್ಬ 16 ವರ್ಷದ ಬಾಲಕಿಯ ಖಾಸಗಿ ವಿಡಿಯೋ ಲೀಕ್​ ಮಾಡಿದ್ದಾನೆ. ಇದ್ರಿಂದ ಅವಮಾನ ಮತ್ತು ಬೇಸರಗೊಂಡ​ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಗುಜರಾತ್​​ನ ಚಾರ್​ನಗರದಲ್ಲಿ ನಡೆದಿದೆ.

ಬಾಲಕಿಯನ್ನು ಪ್ರೀತಿಸುತ್ತಿದ್ದ ಯುವಕ ಆಕೆಯ ಜೊತೆಗಿದ್ದ ಖಾಸಗಿ ವಿಡಿಯೋ ತುಣುಕುಗಳನ್ನು ತನ್ನ ಗೆಳೆಯರಿಗೆ ಹಂಚಿದ್ದಾನೆ. ಫೆ. 29ರಂದು ಬಾಲಕಿ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಳು. ಪೋಷಕರು ಈ ಕುರಿತಾಗಿ ಪೊಲೀಸರಿಗೂ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಘಟನೆಯ ಪೂರ್ಣ ವಿವರ:

ಕಳೆದ ಕೆಲ ತಿಂಗಳಿಂದ ಬಾಲಕಿಯನ್ನು ಪ್ರೀತಿಸುತ್ತಿದ್ದ ಯುವಕ ಆಕೆಯೊಂದಿಗಿನ ತನ್ನ ಖಾಸಗಿ ದೃಶ್ಯಾವಳಿ ಸೆರೆ ಹಿಡಿದು ಮೊಬೈಲ್​ನಲ್ಲಿಟ್ಟುಕೊಂಡಿದ್ದ. ಇದೀಗ ದಿಢೀರ್​ ಆಗಿ ಅವುಗಳನ್ನು ತನ್ನ ಗೆಳೆಯರಿಗೆ ಶೇರ್​​ ಮಾಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಯುವಕನ ವಿರುದ್ಧ ಹಾಗೂ ಉಳಿದ ಮೂವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ದೂರುಪಯೋಗ ಪಡಿಸಿಕೊಂಡಿರುವ ಆಧಾರದ ಮೇಲೆ ಪ್ರಕರಣ​ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.