ನವದೆಹಲಿ: ಚೀನಾ ವಸ್ತುಗಳನ್ನು ಬಹಿಷ್ಕರಿಸುವುದರಿಂದ ಆ ದೇಶದ ಆರ್ಥಿಕತೆಗೆ ಧಕ್ಕೆಯಾಗುವುದಿಲ್ಲ. ರಕ್ಷಣಾ ಸಂಬಂಧದ ಸೂಕ್ಷ್ಮ ವಿಚಾರಗಳನ್ನು ಚರ್ಚಿಸುವಾಗ ಬಹಿಷ್ಕಾರದಂತ ವಿಷಯಗಳನ್ನು ತರಬಾರದು ಎಂದು ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಹಣಕಾಸು ಸಚವಿ ಪಿ.ಚಿದಂಬರಂ ಹೇಳಿದ್ದಾರೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಜೊತೆಗೆ ನಡೆಸಿರುವ ಆನ್‌ಲೈನ್ ವಿಡಿಯೋ ಸಂವಾದದಲ್ಲಿ ಪಿ.ಚಿದಂಬರಂ, ಎಷ್ಟು ಸಾಧ್ಯವೋ ಅಷ್ಟು ನಾವು ಸ್ವಾಲಂಬಿಗಳಾಗಬೇಕು. ಆದರೆ, ವಿಶ್ವದ ಇತರ ದೇಶಗಳೊಂದಿಗಿನ ಸಂಬಂಧವನ್ನು ಕಳಚಿಕೊಳ್ಳಬಾರದು ಎಂದಿದ್ದಾರೆ.
ಜಾಗತಿಕ ಪೂರೈಕೆಯ ಕೊಂಡಿಯಾಗಿ ಭಾರತ ಮುಂದುವರಿಯಬೇಕು ಮತ್ತು ಚೀನಾ ಸರಕುಗಳನ್ನು ಬಹಿಷ್ಕರಿಸಬಾರದು. ಭಾರತದೊಂದಿಗೆ ಚೀನಾದ ವ್ಯಾಪಾರ ಭಾಗವೆಷ್ಟು? ಮತ್ತು ಚೀನಾದ ವಿಶ್ವ ವ್ಯಾಪಾರವೇನು? ಭಾರತದೊಂದಿಗಿನ ಚೀನಾದ ವ್ಯಾಪಾರ ಅತಿ ಚಿಕ್ಕದು ಎಂದು ಚಿದಂಬರಂ ಹೇಳಿದ್ದಾರೆ.
ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ನಿನ್ನೆ ಒಂದು ಹೇಳಿಕೆ ನೀಡಿದ್ದಾರೆ. ರಾಷ್ಟ್ರೀಯ ಭದ್ರತೆ ಹಿತದೃಷ್ಠಿಯಿಂದ ಸರ್ಕಾರಕ್ಕೆ ನಾವು ಸಹಕಾರ ನೀಡಬೇಕು. ಆದರೆ, ಸರ್ಕಾರವನ್ನು ಪ್ರಶ್ನೆ ಮಾಡುವ ಹಕ್ಕು ನಿಮಗಿದೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯನ್ನು ನಾವು ಬೆಂಬಲಿಸುತ್ತೇನೆ ಎಂದಿದ್ದಾರೆ.