ಜಲಂಧರ್ (ಪಂಜಾಬ್): ಯುವತಿಯೊಬ್ಬಳು ತನ್ನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ ಕಾರಣ ಜಲಂಧರ್‌ನ ಕ್ಯಾಂಡಲ್ ವ್ಯಾಪಾರಿಯ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ಸಲೀಲ್ ಎಂದು ಗುರುತಿಸಲಾಗಿದೆ.
ಯುವತಿ ಹಾಗೂ ಆತ್ಮಹತ್ಯೆ ಮಾಡಿಕೊಂಡ ಯುವಕ ಇಬ್ಬರೂ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ. ಆದರೆ, ಮನೆಯಲ್ಲಿ ಈ ವಿಷಯ ತಿಳಿದಿರಲಿಲ್ಲ. ಮದುವೆಯ ಬಳಿಕ ಯುವಕ ಜಲಂಧರ್ನಲ್ಲಿ ಮತ್ತು ಯುವತಿ ಆಸ್ಟ್ರೇಲಿಯಾದಲ್ಲಿದ್ದಳು.
ಯುವತಿಯ ತಂದೆಗೆ ತನ್ನ ಮಗಳು ಹಾಗೂ ಸಲೀಲ್ ನನ್ನು ವಿವಾಹವಾಗಿದ್ದಾಳೆ ಎಂಬ ವಿಷಯ ಇತ್ತೀಚಿಗಷ್ಟೇ ತಿಳಿದು ಬಂದಿತ್ತು. ಹೀಗಾಗಿ ಆತನ ನಂಬರ್ ಬ್ಲಾಕ್ ಮಾಡುವಂತೆ ಯುವತಿಗೆ ಆಕೆಯ ತಂದೆ ಹೇಳಿದ್ದರು. ಅನಿವಾರ್ಯವಾಗಿ ಯುವತಿ - ಯುವಕನ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಾಳೆ. ಇದರಿಂದ ಬೇಸರಗೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.