ETV Bharat / bharat

ಜೀವ ತೆಗೆದ ಎಲೆಕ್ಷನ್​... ಕ್ಲಾಸ್​ ಲೀಡರ್​ ಚುನಾವಣೆಯಲ್ಲಿ ಸೋತ 13 ವರ್ಷದ ಬಾಲಕ ಆತ್ಮಹತ್ಯೆ!

author img

By

Published : Jul 20, 2019, 10:18 AM IST

ತರಗತಿಯ ನಾಯಕನ ಚುನಾವಣೆಯಲ್ಲಿ ಸೋತ ವಿದ್ಯಾರ್ಥಿಯೊಬ್ಬ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಜೀವ ತೆಗೆದ ಎಲೆಕ್ಷನ್

ಭೋಂಗಿರ್​(ತೆಲಂಗಾಣ): 8 ನೇ ತರಗತಿ ಓದುತ್ತಿದ್ದ 13 ವರ್ಷದ ಬಾಲಕನೊಬ್ಬ ರಾಮಣ್ಣಾಪೇಟ್​ನ ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಬಾಲಕನ ಶಾಲೆಯಲ್ಲಿ ತರಗತಿ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಬಾಲಕ ಸೋತಿದ್ದನಂತೆ. ಇದರಿಂದ ನೊಂದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಾಲಕನ ಶವವು ರಾಮಣ್ಣಾಪೇಟ್​ನ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಸಂಜೆ ಬಾಲಕ ನಾಪತ್ತೆಯಾಗಿರುವ ಬಗ್ಗೆ ನಮಗೆ ಪೋಷಕರಿಂದ ದೂರು ಬಂದಿತ್ತು. ಆ ಕ್ಷಣವೇ ಕಾರ್ಯಪ್ರವೃತ್ತರಾದ ನಾವು ಬಾಲಕನ ಪತ್ತೆಗೆ ಮುಂದಾದೆವು. ಆದರೆ ಬಾಲಕ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾನೆ ಎಂದು ಭೋಂಗಿರ್​ ಡಿಸಿಪಿ ನಾರಾಯಾಣ ರೆಡ್ಡಿ ತಿಳಿಸಿದ್ದಾರೆ.

ಶಾಲೆಯಲ್ಲಿ ನಡೆದ ತರಗತಿ ನಾಯಕನ ಚುನಾವಣೆಯಲ್ಲಿ ಬಾಲಕ ಒಬ್ಬ ಬಾಲಕಿ ವಿರುದ್ಧ ಸೋತಿದ್ದ. ಹೀಗಾಗಿ ಬಾಲಕ ಮಾನಸಿಕವಾಗಿ ಕುಗ್ಗಿದ್ದ. ಇದರಿಂದಲೇ ನೊಂದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಾರಾಯಾಣ ರೆಡ್ಡಿ ಹೇಳಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.