ETV Bharat / bharat

ಟೀಕೆಗೊಳಗಾದ ಮರುದಿನವೇ ಸಿಎಂ ಉದ್ದವ್​ ಠಾಕ್ರೆ ಭೇಟಿ ಮಾಡಿದ ಸೋನು ಸೂದ್​! - Sena MP Sanjay Raut

ಮುಂಬೈನ ಉಪನಗರದಲ್ಲಿ ಮಾತೋಶ್ರೀ ನಿವಾಸದಲ್ಲಿ ನಟ ಠಾಕ್ರೆ ಅವರನ್ನು ಸೋನು ಸೂದ್​ ಭೇಟಿಯಾಗಿದ್ದಾರೆ. ಆದರೆ, ಈ ಭೇಟಿ ನಡೆಯುವ ಒಂದು ದಿನದ ಹಿಂದೆ ಠಾಕ್ರೆ ನೇತೃತ್ವದ ಶಿವಸೇನೆ ಸೋನು ಅವರನ್ನು , ಬಿಜೆಪಿ ಬರೆದ ರಾಜಕೀಯ ಕಥೆಯನ್ನು ಅವರು ಜಾರಿಗೊಳಿಸುತ್ತಿದ್ದಾರೆ ಎಂದು ಸೋನು ಸೂದ್​ ವಿರುದ್ಧ ಕಿಡಿಕಾರಿದ್ದರು.

Sonu Sood meets Uddhav
ಮುಖ್ಯಮಂತ್ರಿ ಉದ್ದವ್​ ಠಾಕ್ರೆಯನ್ನುಭೇಟಿ ಮಾಡಿದ ಸೋನು ಸೂದ್
author img

By

Published : Jun 8, 2020, 12:06 PM IST

ಮುಂಬೈ: ಕೊರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಸಾವಿರಾರು ಕಾರ್ಮಿಕರಿಗೆ ನೆರವಾಗಿದ್ದ ಬಾಲಿವುಡ್​ ನಟ ಸೋನು ಸೂದ್​ ಅವರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್​ ಠಾಕ್ರೆ ಶ್ಲಾಘಿಸಿದ್ದಾರೆ.

ಮುಂಬೈನ ಉಪನಗರದಲ್ಲಿ ಮಾತೋಶ್ರೀ ನಿವಾಸದಲ್ಲಿ ನಟ ಠಾಕ್ರೆ ಅವರನ್ನು ಸೋನು ಸೂದ್​ ಭೇಟಿಯಾಗಿದ್ದಾರೆ. ಆದರೆ, ಈ ಭೇಟಿ ನಡೆಯುವ ಒಂದು ದಿನದ ಹಿಂದೆ ಠಾಕ್ರೆ ನೇತೃತ್ವದ ಶಿವಸೇನೆ ಸೋನು ಅವರನ್ನು , ಬಿಜೆಪಿ ಬರೆದ ರಾಜಕೀಯ ಕಥೆಯನ್ನು ಅವರು ಜಾರಿಗೊಳಿಸುತ್ತಿದ್ದಾರೆ ಎಂದು ಸೂದ್​ ವಿರುದ್ಧ ಕಿಡಿಕಾರಿದ್ದರು.

ಸೇನಾ ಸಂಸದ ಸಂಜಯ್​ ರಾವುತ್​, ಲಾಕ್​ಡೌನ್​ ಮಧ್ಯೆ ಮಹಾರಾಷ್ಟ್ರದಲ್ಲಿ ಸಿಲುಕಿರುವ ಉತ್ತರ ಭಾರತದಿಂದ ವಲಸೆ ಬಂದ ಕಾರ್ಮಿಕರಿಗೆ ಸಹಾಯ ಮಾಡಲು ಬಿಜೆಪಿ ಬಾಲಿವುಡ್​ ನಟನನ್ನು ಮುಂದಕ್ಕೆ ತಳ್ಳಿದೆ. ಈ ಮೂಲಕ ಉದ್ದವ್​ ಠಾಕ್ರೆ ಸರ್ಕಾರವನ್ನು ಕೆಟ್ಟದಾಗಿ ತೋರಿಸಬೇಕೆಂಬ ರಾಜಕೀಯ ಉದ್ದೇಶವನ್ನು ಬಿಜೆಪಿ ಹೊಂದಿದೆ ಎಂದು ಟೀಕಿಸಿದ್ದಾರೆ.

ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಭಾನವಾರದ ಅಂಕಣವಾದ ರೋಖ್ಟಾಕ್​ ನಲ್ಲಿ ಲಾಕ್​ಡೌನ್​ ಸಂದರ್ಭದಲ್ಲಿ ಮಹಾರಾಷ್ಟ್ರದ ಸಾಮಾಜಿಕ ದೃಶ್ಯದಲ್ಲಿ ‘ಮಹಾತ್ಮ’ಸೂದ್​ ಹಠಾತ್​ ಉದಯಿಸಿದ್ದನ್ನು ಪ್ರಶ್ನಿಸಿದ್ದರು.

2019ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಸೋನು ಸೂದ್​ ವಿರುದ್ಧ ಸ್ಟಿಂಗ್​ ಆಪರೇಷನ್​ಗೆ ಆದೇಶಿಸಿದ್ದನ್ನು ಉಲ್ಲೇಖಿಸಿದ್ದಾರೆ. ಸೋನು ಬಿಜೆಪಿಯ ಪರ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮಗಳ ಖಾತೆಗಳ ಮೂಲಕ ವಿವಿಧ ಖಾತೆಗಳಲ್ಲಿ ಉತ್ತೇಜಿಸಲು ಒಪ್ಪಿಕೊಂಡಿದ್ದಾರೆ ಎಂದು ಅರೋಪಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.