ETV Bharat / bharat

ಪುಸ್ತಕ ಇಟ್ಟುಕೊಂಡಿದ್ದಕ್ಕೆ ಆರೋಪಿಯ ಅರ್ಜಿ ವಜಾ: ಚರ್ಚೆಗೆ ಗ್ರಾಸವಾದ 'ಯುದ್ಧ ಮತ್ತು ಶಾಂತಿ'

ಲಿಯೋ ಟಾಲ್​ಸ್ಟಾಯ್ ಅವರ 'ಯುದ್ಧ ಮತ್ತು ಶಾಂತಿ' ಪುಸ್ತಕ ನಿಮ್ಮ ಬಳಿ ಇರುವುದೇಕೆ? ಎಂದು ಪ್ರಶ್ನಿಸಿ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ಬಾಂಬೆ ಹೈಕೋರ್ಟ್ ಜಡ್ಜ್ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬಾಂಬೆ ಹೈಕೋರ್ಟ್
author img

By

Published : Aug 31, 2019, 2:37 AM IST

ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣದ ಬಂಧಿತ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ಜಡ್ಜ್ , ಲಿಯೋ ಟಾಲ್​ಸ್ಟಾಯ್ ಅವರ 'ಯುದ್ಧ ಮತ್ತು ಶಾಂತಿ' ಪುಸ್ತಕ ನಿಮ್ಮ ಬಳಿ ಇರುವುದೇಕೆ? ಎಂದು ಪ್ರಶ್ನಿಸಿ, ಅರ್ಜಿಯನ್ನು ವಜಾಗೊಳಿಸಿದ್ದರು. ಇದೀಗ ನ್ಯಾಯಾಧೀಶರ ನಡೆಗೆ ನೆಟ್ಟಿಗರು ಗರಂ ಆಗಿ, ತಮ್ಮ ಬಳಿಯೂ ಈ ಪುಸ್ತಕ ಇದೆ ಎಂದು ಬರೆದುಕೊಳ್ಳುತ್ತಿದ್ದಾರೆ.

2018 ರಲ್ಲಿ ನಡೆದ ಭೀಮಾ ಕೋರೆಗಾಂವ್ ಸಂಘರ್ಷಕ್ಕೆ ಸಂಬಂಧಿಸಿದ ಎಲ್ಗಾರ್ ಪರಿಷತ್​ ಪ್ರಕರಣದಲ್ಲಿ ಬಂಧಿತ ಆರೋಪಿಯಾಗಿರುವ ವೆರ್ನಾನ್ ಗೊನ್ಸಾಲ್ವೆಸ್ ಅವರ ಮನೆಯಲ್ಲಿ ಕಬೀರ್ ಕಾಲಾ ಮಂಚ್ ಅವರ 'ರಾಜ್ಯ ದಮನ್​​ ವಿರೋಧಿ' ಎಂಬ ಸಿ ಡಿ ಹಾಗೂ ಲಿಯೋ ಟಾಲ್​ಸ್ಟಾಯ್​ ಅವರ 'ಯುದ್ಧ ಮತ್ತು ಶಾಂತಿ' (War and Peace​) ಸೇರಿದಂತೆ ಕೆಲ ಪುಸ್ತಕಗಳು ಸಿಕ್ಕಿದ್ದವು.

ವೆರ್ನಾನ್ ಗೊನ್ಸಾಲ್ವೆಸ್​ರ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ್ದ ಮುಂಬೈ ಹೈಕೋರ್ಟ್, ಬೇರೆ ದೇಶದ ಯುದ್ಧದ ಬಗ್ಗೆ ಲಿಯೋ ಟಾಲ್​ಸ್ಟಾಯ್ ಬರೆದಿರುವ 'ಯುದ್ಧ ಮತ್ತು ಶಾಂತಿ' ಎಂಬ ಪುಸ್ತಕವನ್ನು ನಿಮ್ಮ ಮನೆಯಲ್ಲಿ ಏಕೆ ಇಟ್ಟುಕೊಂಡಿದ್ದೀರಿ? ಎಂದು ಪ್ರಶ್ನಿಸಿ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಅಲ್ಲದೆ ಈ ಕುರಿತು ಗುರುವಾರ ವಿವರಣೆ ನೀಡುವಂತೆಯೂ ತಾಕೀತು ಮಾಡಿತ್ತು.

ಈ ಕುರಿತು ಕೋರ್ಟ್​ಗೆ ಮಾಹಿತಿ ನೀಡಿರುವ ವೆರ್ನಾನ್ ಗೊನ್ಸಾಲ್ವೆಸ್ ಪರ ವಕೀಲರು, ಗೊನ್ಸಾಲ್ವೆಸ್ ಮನೆಯಲ್ಲಿ ಪೊಲೀಸರಿಗೆ ಸಿಕ್ಕಿರುವುದು ಲಿಯೋ ಟಾಲ್​ಸ್ಟಾಯ್ ಅವರ 'ಯುದ್ಧ ಮತ್ತು ಶಾಂತಿ' ಪುಸ್ತಕ ಅಲ್ಲ, ಬದಲಾಗಿ ಕೋಲ್ಕತ್ತಾ ಮೂಲದ ಪತ್ರಕರ್ತ ಬಿಸ್ವಜಿತ್ ರಾಯ್ ಬರೆದಿರುವ 'ಜಂಗಲ್ ಮಹಲ್​ನಲ್ಲಿ ಯುದ್ಧ ಮತ್ತು ಶಾಂತಿ' (War and Peace in Junglemahal) ಎಂಬ ಪುಸ್ತಕ ಎಂದು ತಿಳಿಸಿದ್ದಾರೆ.

ನೆಟ್ಟಿಗರು ಗರಂ:

'ಯುದ್ಧ ಮತ್ತು ಶಾಂತಿ' ಪುಸ್ತಕವನ್ನು ವಿಶ್ವ ಸಾಹಿತ್ಯದ ಒಂದು ಮೇರು ಕೃತಿ ಎಂದು ಪರಿಗಣಿಸಲಾಗಿದೆ. ಆದರೆ ಬಾಂಬೆ ಹೈಕೋರ್ಟ್​ಗೆ ಮಾತ್ರ ಒಬ್ಬ ಆರೋಪಿಯ ಜಾಮೀನು ಅರ್ಜಿಗೆ ಈ ಪುಸ್ತಕ ತೊಡಕಾಗಿರುವುದು ಮಾತ್ರ ವಿಪರ್ಯಾಸ ಎಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತಮ್ಮ ಬಳಿಯೂ ಟಾಲ್​ಸ್ಟಾಯ್​ ಅವರ 'ಯುದ್ಧ ಮತ್ತು ಶಾಂತಿ' ಪುಸ್ತಕ ಇದೆ ಎಂದು ಪೋಸ್ಟ್​​ ಮಾಡಿ ಹೈಕೋರ್ಟ್ ನಡೆ ವಿರುದ್ಧ ಕ್ಯಾಂಪೇನ್​ ಆರಂಭಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 'ವಾರ್​​ ಅಂಡ್​ ಪೀಸ್' ಪುಸ್ತಕ ಓದುತ್ತಿರುವ ಫೋಟೋವನ್ನು ಹಾಕಿ ಟ್ವಿಟರ್​​ನಲ್ಲಿ ಪೋಸ್ಟ್​​ ಮಾಡಿದ್ದಾರೆ. ಇನ್ನೊಬ್ಬರು ಮರಾಠಿಗೆ ಭಾಷಾಂತರಿಸಿದ ಪುಸ್ತಕವನ್ನು ಮಹಾರಾಷ್ಟ್ರ ಸರ್ಕಾರವೇ ಪ್ರಕಟಿಸಿತ್ತು ಎಂದು ಪೋಸ್ಟ್​ ಮಾಡಿದ್ದಾರೆ.

  • No one - not even a judge - has any right to ask why I or anyone else has either of these books - or any books - on one's bookshelves. Books are for reading. Reading shouldn't be a crime in a country that says it's a democracy. Bombay HC judge's outrage does not wash #WarAndPeace pic.twitter.com/YWDHJmByRP

    — Kavita Krishnan (@kavita_krishnan) August 30, 2019 " class="align-text-top noRightClick twitterSection" data=" ">

ಪುಸ್ತಕಗಳು ಇರುವುದು ಓದುವುದಕ್ಕೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪುಸ್ತಕಗಳನ್ನು ಓದುವುದು ಅಪರಾಧವಲ್ಲ. ನ್ಯಾಯಾಧೀಶರೇ ಆಗಿರಬಹುದು, ಯಾರೇ ಆಗಿರಬಹುದು. ಯಾರಿಗೂ ಇದರ ಕುರಿತು ಪ್ರಶ್ನಿಸುವ ಹಕ್ಕಿಲ್ಲ ಎಂದು ಮತ್ತೊಬ್ಬರು ನ್ಯಾಯಾಧೀಶರ ಕ್ರಮವನ್ನು ಖಂಡಿಸಿದ್ದಾರೆ.

Intro:Body:

hjkk

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.